ಎಲ್ಲಾ ಫಾರ್ಮಾಟ್ʼನಲ್ಲೂ ಹ್ಯಾಟ್ರಿಕ್, 1 ಓವರ್ʼನಲ್ಲಿ 5 ವಿಕೆಟ್ ... ಟೀಂ ಇಂಡಿಯಾದ ಡೇಂಜರಸ್ ಬೌಲರ್ ಕರಿಯರ್ ಹಾಳಾಗಿದ್ದು ʼಈʼ ಆರೋಪದಿಂದ!
Unbreakable World Record of Cricket: ಈ ಕ್ರಿಕೆಟಿಗನ ಅಂತರರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿರಬಹುದು. ಆದರೆ ಆತ ಆ ಪುಟ್ಟ ಸಮಯದಲ್ಲೇ ಕ್ರಿಕೆಟ್ʼನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ್ದಾನೆ. ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಹ್ಯಾಟ್ರಿಕ್ ವಿಕೆಟ್ ಪಡೆದ ಕ್ರಿಕೆಟಿಗ ಈತನಾಗಿದ್ದು, ಬುಮ್ರಾಗಿಂತಲೂ ಸಖತ್ ಡೇಂಜರಸ್ ಎಂದು ಕರೆಯಲಾಗುತ್ತದೆ.
Unbreakable World Record of Cricket: ಕ್ರಿಕೆಟ್'ನಲ್ಲಿ ದೇಶದ ಪರ ಆಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಕೆಲವು ಆಟಗಾರರು ಈ ವಿಷಯದಲ್ಲಿ ಗೆದ್ದರೆ ಅನೇಕರು ಅದೃಷ್ಟದ ಕಾರಣದಿಂದ ಕಿರೀಟವಿಲ್ಲದ ರಾಜರಾಗಿ ಉಳಿಯುತ್ತಾರೆ. ಇಂದು ನಾವು ಅಂತಹ ಒಬ್ಬ ಭಾರತೀಯ ಬೌಲರ್ ಬಗ್ಗೆ ಹೇಳಲಿದ್ದೇವೆ.
ಇದನ್ನೂ ಓದಿ: 3ನೇ ಮದುವೆಯಾಗಿದ್ದ ಶೋಯೆಬ್ 4ನೇ ಮದುವೆಗೆ ರೆಡಿಯಾದ್ರಾ!? ಮತ್ತೋರ್ವನಟಿ ಜೊತೆ ಫ್ಲರ್ಟಿಂಗ್!!
ಈ ಕ್ರಿಕೆಟಿಗನ ಅಂತರರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿರಬಹುದು. ಆದರೆ ಆತ ಆ ಪುಟ್ಟ ಸಮಯದಲ್ಲೇ ಕ್ರಿಕೆಟ್ʼನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ್ದಾನೆ. ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಹ್ಯಾಟ್ರಿಕ್ ವಿಕೆಟ್ ಪಡೆದ ಕ್ರಿಕೆಟಿಗ ಈತನಾಗಿದ್ದು, ಬುಮ್ರಾಗಿಂತಲೂ ಸಖತ್ ಡೇಂಜರಸ್ ಎಂದು ಕರೆಯಲಾಗುತ್ತದೆ.
ಅಂದಹಾಗೆ ಆ ಕ್ರಿಕೆಟಿಗ ಬೇರಾರು ಅಲ್ಲ ಅಭಿಮನ್ಯು ಮಿಥುನ್. ಇವರು ಎಲ್ಲಾ ಮೂರು ಫಾರ್ಮ್ಯಾಟ್ʼಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಈ ಸಾಧನೆ ಮಾಡಿರುವುದು ದೇಶಿ ಕ್ರಿಕೆಟ್ʼನಲ್ಲಿ. ಅಷ್ಟೇ ಅಲ್ಲ, ಒಮ್ಮೆ ಟಿ20ಯಲ್ಲಿ ಒಂದೇ ಓವರ್ʼನಲ್ಲಿ ಐದು ವಿಕೆಟ್ʼಗಳನ್ನು ಪಡೆದಿದ್ದರು. ಟಿ20 ಮಾದರಿಯಲ್ಲಿ ಈ ಸಾಧನೆ ಮಾಡಿರುವುದು ಪವಾಡವೇ ಎನ್ನಬಹುದು.
ಅಭಿಮನ್ಯು ಮಿಥುನ್ ಅಂತರಾಷ್ಟ್ರೀಯ ವೃತ್ತಿಜೀವನ ಅಷ್ಟೊಂದು ಚೆನ್ನಾಗಿರಲಿಲ್ಲ. ಭಾರತದ ಪರ ಕೇವಲ 4 ಟೆಸ್ಟ್ ಮತ್ತು 5 ODI ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ʼನಲ್ಲಿ 9 ಮತ್ತು ಏಕದಿನದಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ತಮ್ಮ ರಣಜಿ ವೃತ್ತಿಜೀವನವನ್ನು ಅಬ್ಬರದಿಂದ ಪ್ರಾರಂಭಿಸಿದ ಅಭಿಮನ್ಯು ಮಿಥುನ್, ನವೆಂಬರ್ 2009 ರಲ್ಲಿ,ಕರ್ನಾಟಕದ ಪರ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದರು. ಉತ್ತರ ಪ್ರದೇಶ ವಿರುದ್ಧ ಆಡಿದ ತಮ್ಮ ಮೊದಲ ಪಂದ್ಯದಲ್ಲಿ ಸ್ಫೋಟಕ ಪ್ರದರ್ಶನ ನೀಡಿದರು. ಎರಡನೇ ಇನಿಂಗ್ಸ್ʼನ 60ನೇ ಓವರ್ʼನಲ್ಲಿ ಸತತ ಮೂರು ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಪಿಯೂಷ್ ಚಾವ್ಲಾ, ಅಮೀರ್ ಖಾನ್ ಮತ್ತು ಆರ್ ಪಿ ಸಿಂಗ್ ಅವರಿಗೆ ಪೆವಿಲಿಯನ್ ಹಾದಿಯನ್ನು ನಿರಂತರವಾಗಿ ತೋರಿಸಿದರು.
ಇದನ್ನೂ ಓದಿ: "ಈ ಆಟಗಾರ್ತಿ ಮೇಲೆ ನನಗೆ ಕ್ರಷ್ ಆಗಿದೆ"- ಇಷ್ಟಪಟ್ಟ ಚೆಲುವೆ ಯಾರೆಂದು ಹೇಳಿದ ನೀರಜ್ ಚೋಪ್ರಾ
ಫಿಕ್ಸಿಂಗ್ ಆರೋಪ :
ಆದರೆ ಅಭಿಮನ್ಯು ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಅಬುಧಾಬಿಯಲ್ಲಿ ನಡೆದ ಟಿ10 ಲೀಗ್ ಪಂದ್ಯದ ವೇಳೆ ಮಿಥುನ್ ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸಿದ್ದರು. ಒಂದು ಪಂದ್ಯದಲ್ಲಿ, ಅವರು ದೀರ್ಘ ನೋ ಬಾಲ್ ಬೌಲ್ ಮಾಡಿದ್ದರಿಂದ ವಿವಾದಕ್ಕೆ ಒಳಗಾಗಿದ್ದರು. ಇನ್ನು ಇವರು 2021 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ʼಗೆ ನಿವೃತ್ತಿ ಘೋಷಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ