Abhishek Sharma Century vs Zimbabwe: ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌’ಗೆ ವಾಪಸಾದ ಅಭಿಷೇಕ್ ಶರ್ಮಾ ಎರಡನೇ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಚೊಚ್ಚಲ ಶತಕ ಬಾರಿಸಿದ ಶರ್ಮಾ, ಭಾರತದ ಪರ ಟಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದವರ ಕ್ಲಬ್‌’ಗೆ ಸೇರ್ಪಡೆಗೊಂಡಿದ್ದಾರೆ. ಆರಂಭಿಕರಾಗಿ ಬಂದ ಅಭಿಷೇಕ್ ಶರ್ಮಾ ಕೇವಲ 46 ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಶತಕ ಪೂರೈಸಿದ್ದಾರೆ.


COMMERCIAL BREAK
SCROLL TO CONTINUE READING

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 46 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸುವ ಮೂಲಕ ಶತಕ ಪೂರೈಸಿದರು. ಅಭಿಷೇಕ್ ಈ ಮಾದರಿಯಲ್ಲಿ ಅತಿ ವೇಗದ ಶತಕ ಬಾರಿಸಿದ ಕೆಎಲ್ ರಾಹುಲ್ ಜೊತೆ ಜಂಟಿಯಾಗಿ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ: ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!


ಕೆಎಲ್ ರಾಹುಲ್ ಕೂಡ 46 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ರೋಹಿತ್ ಶರ್ಮಾ ಈ ಮಾದರಿಯಲ್ಲಿ ಭಾರತದ ಪರ ಅತಿವೇಗದ ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು 35 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. 45 ಎಸೆತಗಳಲ್ಲಿ ಶತಕ ಪೂರೈಸಿದ ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿದ್ದಾರೆ.


ಟಿ20ಯಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌’ಗಳಲ್ಲಿ ಶತಕ ಸಿಡಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಅವರ ಎರಡನೇ ಇನ್ನಿಂಗ್ಸ್’ನಲ್ಲಿಯೇ ಸಾಧ್ಯವಾಗಿದೆ. ದೀಪಕ್ ಹೂಡಾ ಶತಕ ಗಳಿಸಲು 3 ಇನ್ನಿಂಗ್ಸ್ ತೆಗೆದುಕೊಂಡರೆಮ ಕೆಎಲ್ ರಾಹುಲ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು.


ಶತಕ ಬಾರಿಸಿದ ನಾಲ್ಕನೇ ಅತಿ ಕಿರಿಯ ಭಾರತೀಯ


ಅಭಿಷೇಕ್ ಶರ್ಮಾ ಭಾರತ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ನಾಲ್ಕನೇ ಅತಿ ಕಿರಿಯ ಆಟಗಾರ. ಅಭಿಷೇಕ್ 23 ವರ್ಷ 307 ದಿನಗಳ ವಯಸ್ಸಿನಲ್ಲಿ ಈ ಶತಕ ದಾಖಲಿಸಿದರು. ಈ ವಿಚಾರದಲ್ಲಿ ಮುಂಚೂಣಿಯಲ್ಲಿರುವುದು 21 ವರ್ಷ 279 ದಿನದಲ್ಲಿ ಶತಕ ಪೂರೈಸಿದ ಯಶಸ್ವಿ ಜೈಸ್ವಾಲ್. ಎರಡನೇ ಸ್ಥಾನದಲ್ಲಿ 23 ವರ್ಷ 146 ದಿನಗಳಲ್ಲಿ ಶತಕ ಸಿಡಿಸಿದ ಶುಭ್‌ಮನ್ ಗಿಲ್ ಇದ್ದಾರೆ. ಇವರ ಬಳಿಕ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮೂರನೇ ಸ್ಥಾನದಲ್ಲಿದೆ. ರೈನಾ 23 ವರ್ಷ 156 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.


ಇದನ್ನೂ ಓದಿ: ‘ಏಕೆ ನಾಯಿ...'- ಶಮಿ ಮಾಜಿ ಪತ್ನಿ ಹಸಿನ್ ಜಹಾನ್ ವಿವಾದಾತ್ಮಕ ಹೇಳಿಕೆ! ಹೀಗಂದಿದ್ದು ಯಾರಿಗೆ?


ಇನ್ನು ಅಭಿಷೇಕ್ ಶರ್ಮಾ ಸಿಕ್ಸರ್-ಬೌಂಡರಿ ಸುರಿಮಳೆ ಕಂಡ ಫ್ಯಾನ್ಸ್ ಈತ ರೋಹಿತ್ ಶರ್ಮಾ ಸ್ಥಾನ ತುಂಬೋದು ಖಚಿತ ಎಂದು ಕೊಂಡಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ