ಭಜ್ಜಿ ಪ್ರಕಾರ Team Indiaಗೆ ಈ ಬಾರಿ ವಿಶ್ವಕಪ್ ಗೆದ್ದುಕೊಡೋದು ಈ ಇಬ್ಬರು ಕಿಲಾಡಿಗಳು!
Team India News: ಭಾರತ ಕ್ರಿಕೆಟ್ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಈ ವರ್ಷ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತ ಗೆಲ್ಲುವಂತೆ ಮಾಡುವ ಇಬ್ಬರು ಉತ್ಸಾಹಿ ಕ್ರಿಕೆಟಿಗರನ್ನು ಹೆಸರಿಸಿದ್ದಾರೆ.
Team India News: 2023ರ ವಿಶ್ವಕಪ್ ಟೂರ್ನಿ ಈ ವರ್ಷದ ಕೊನೆಯಲ್ಲಿ ಭಾರತದ ನೆಲದಲ್ಲಿ ನಡೆಯಲಿದೆ. ಭಾರತ ತಂಡವು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದು, ಒಂದು ವಾರದ ನಂತರ ಪಾಕಿಸ್ತಾನ ವಿರುದ್ಧದ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ. 2023 ರ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗುತ್ತದೆ ಮತ್ತು ಅಂತಿಮ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ. 2023ರ ವಿಶ್ವಕಪ್ ಆರಂಭವಾಗಲು ಇನ್ನು 3 ತಿಂಗಳು ಮಾತ್ರ ಬಾಕಿ ಇದೆ. ಹೀಗಿರುವಾಗ ಟೀಂ ಇಂಡಿಯಾದ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ ಓರ್ವ ಅನುಭವಿ.
ಇದನ್ನೂ ಓದಿ: Watch :ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ಬೆಂಕಿ ಹಚ್ಚಿದ ಖಲಿಸ್ತಾನ್ ಬೆಂಬಲಿಗರು..!
ಭಾರತ ಕ್ರಿಕೆಟ್ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಈ ವರ್ಷ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತ ಗೆಲ್ಲುವಂತೆ ಮಾಡುವ ಇಬ್ಬರು ಉತ್ಸಾಹಿ ಕ್ರಿಕೆಟಿಗರನ್ನು ಹೆಸರಿಸಿದ್ದಾರೆ. ಶುಭ್ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಭಾರತಕ್ಕೆ ಈ ವರ್ಷ ಟ್ರೋಫಿ ಗೆದ್ದುಕೊಡುವ ಸಾಮಾರ್ಥ್ಯ ಹೊಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ, “ಭಾರತದ ಪಿಚ್ ಗಳು ಬ್ಯಾಟ್ಸ್ ಮನ್ ಗಳಿಗೆ ಸಹಕಾರಿಯಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಭಾರತೀಯ ಪಿಚ್ ಗಳಲ್ಲಿ ರನ್ ಮಳೆ ಸುರಿಸಲಿದ್ದಾರೆ. 2023ರ ವಿಶ್ವಕಪ್ ನಲ್ಲಿ ಶುಭಮನ್ ಗಿಲ್ ಪ್ರಮುಖ ಆಟಗಾರನಾಗಲಿದ್ದಾರೆ. ಭಾರತದ ಪರಿಸ್ಥಿತಿಯಲ್ಲಿ ಶುಭ್‌ಮನ್ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಾರೆ” ಎಂದಿದ್ದಾರೆ.
ರವೀಂದ್ರ ಜಡೇಜಾ ಬಗ್ಗೆ ಮಾತನಾಡಿದ ಹರ್ಭಜನ್ ಸಿಂಗ್, '”2023 ರ ವಿಶ್ವಕಪ್ ನಲ್ಲಿಯೂ, ರವೀಂದ್ರ ಜಡೇಜಾ ಐಪಿಎಲ್‌ನಂತಹ ವಿಧ್ವಂಸಕತೆಯನ್ನು ಸೃಷ್ಟಿಸಿದರೆ, ಭಾರತಕ್ಕೆ ಅಪಾರ ಲಾಭವಾಗುತ್ತದೆ. ಬೌಲಿಂಗ್ ನಲ್ಲಿ ರವೀಂದ್ರ ಜಡೇಜಾ 20ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದನ್ನು ನಾವು ಐಪಿಎಲ್ ನಲ್ಲಿ ನೋಡಿದ್ದೇವೆ” ಎಂದರುರ
2023ರ ವಿಶ್ವಕಪ್ ನಲ್ಲಿ ಭಾರತದ ವೇಳಾಪಟ್ಟಿ:
ಭಾರತ vs ಆಸ್ಟ್ರೇಲಿಯಾ, 8 ಅಕ್ಟೋಬರ್, ಚೆನ್ನೈ
ಭಾರತ vs ಅಫ್ಘಾನಿಸ್ತಾನ, 11 ಅಕ್ಟೋಬರ್, ದೆಹಲಿ
ಭಾರತ vs ಪಾಕಿಸ್ತಾನ, 15 ಅಕ್ಟೋಬರ್, ಅಹಮದಾಬಾದ್
ಭಾರತ v ಬಾಂಗ್ಲಾದೇಶ, 19 ಅಕ್ಟೋಬರ್, ಪುಣೆ
ಭಾರತ ವಿರುದ್ಧ ನ್ಯೂಜಿಲೆಂಡ್ ಅಕ್ಟೋಬರ್ 22 ಧರ್ಮಶಾಲಾ
ಭಾರತ vs ಇಂಗ್ಲೆಂಡ್, 29 ಅಕ್ಟೋಬರ್, ಲಕ್ನೋ
ಭಾರತ vs ಕ್ವಾಲಿಫೈಯರ್ ತಂಡ, 2 ನವೆಂಬರ್, ಮುಂಬೈ
ಭಾರತ v ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
ಭಾರತ ವಿರುದ್ಧ ಕ್ವಾಲಿಫೈಯರ್ ತಂಡ, ನವೆಂಬರ್ 11, ಬೆಂಗಳೂರು
ಇದನ್ನೂ ಓದಿ: 30 ವರ್ಷಗಳ ಬಳಿಕ ಈ ರಾಶಿಯವರ ಜಾತಕದಲ್ಲಿ ರಾಜಯೋಗ: ದುಡ್ಡಿನ ಸುರಿಮಳೆ- ಇನ್ಮುಂದೆ ಸ್ವರ್ಗ ಸುಖ ಪಕ್ಕಾ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.