Suresh Raina Statement: ಭಾರತದ ಪರ ಅದ್ಭುತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌’ಮನ್ ಆಗಿದ್ದ ಸುರೇಶ್ ರೈನಾ ಸಂಜು ಸ್ಯಾಮ್ಸನ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದರಲ್ಲಿ ಸಂಜು ಸ್ಯಾಮ್ಸನ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸರಣಿಯಲ್ಲಿ ಮತ್ತು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-2024) ನಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿದರೆ, ಟಿ 20 ವಿಶ್ವಕಪ್‌’ನಲ್ಲಿ ಸ್ಥಾನ ಪಡೆಯಬಹುದು ಎಂದು ರೈನಾ ನಂಬಿದ್ದಾರೆ. ಅಷ್ಟೇ ಅಲ್ಲದೆ, ಈ ಟೂರ್ನಿಯಲ್ಲಿ ಅವರು ಭಾರತದ ‘ಎಕ್ಸ್ ಫ್ಯಾಕ್ಟರ್’ ಆಟಗಾರನೂ ಆಗಬಹುದು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೋಡೋಕೆ 2 ಕಣ್ಣುಗಳೇ ಸಾಲುತ್ತಿಲ್ಲ… ಅಷ್ಟೊಂದು ಅದ್ಭುತವಾಗಿದೆ ವಿರಾಟ್ ಕೊಹ್ಲಿಯ ಹೊಸ ‘ಅರಮನೆ’!


ವಿಕೆಟ್ ಕೀಪರ್ ಬ್ಯಾಟ್ಸ್‌’ಮನ್‌ ಸಂಜು ಸ್ಯಾಮ್ಸನ್ ತನ್ನ ಮೊದಲ ಆಯ್ಕೆ ಎಂದು ಸುರೇಶ್ ರೈನಾ ವಿವರಿಸಿದ್ದಾರೆ. 'ಸಂಜು ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಗಳಿಸಿದ್ದರು. ಅವರು ಖಂಡಿತವಾಗಿಯೂ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಮೈದಾನದಲ್ಲಿದ್ದಾಗಲೂ ಅವರು ಯಾವಾಗಲೂ ಯೋಚಿಸುತ್ತಾರೆ. ಕೆಎಲ್ ರಾಹುಲ್, ಜಿತೇಶ್ ಶರ್ಮಾ, ಇಶಾನ್ ಕಿಶನ್ ಮತ್ತು ಫಿಟ್ ಆದ ನಂತರ ಪಂತ್ ರೂಪದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾತ್ರದಲ್ಲಿ ನಮಗೆ ಉತ್ತಮ ಆಯ್ಕೆಗಳಿವೆ” ಎಂದಿದ್ದಾರೆ.


ಇದನ್ನೂ ಓದಿ: ತಲೆಗೆ ಬಾಲ್ ಬಡಿದು ಕ್ರಿಕೆಟಿಗ ಸಾವು: ಫೀಲ್ಡಿಂಗ್ ಮಾಡುತ್ತಿದ್ದಂತೆ ಹಾರಿಹೋಯ್ತು ಪ್ರಾಣಪಕ್ಷಿ


ಅಫ್ಘಾನಿಸ್ತಾನ ವಿರುದ್ಧ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ರೈನಾ ಭರವಸೆ ವ್ಯಕ್ತಪಡಿಸಿದರು. ಸಂಜು ಅವರನ್ನು ಮಧ್ಯಮ ಕ್ರಮಾಂಕದಲ್ಲಿ ನೋಡಲು ನಾನು ಬಯಸುತ್ತೇನೆ, ಆಯ್ಕೆದಾರರು ಟಿ20 ವಿಶ್ವಕಪ್‌’ಗೆ ತಂಡವನ್ನು ಆಯ್ಕೆ ಮಾಡುವ ಮೊದಲು ಅವರು ಐಪಿಎಲ್‌’ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಫ್ಘಾನಿಸ್ತಾನ ವಿರುದ್ಧ ಸಂಜುಗೆ ಉತ್ತಮ ಅವಕಾಶವಿದೆ. ಅವರು ವಿಶ್ವಕಪ್‌’ನಲ್ಲಿ ನಮ್ಮ 'ಎಕ್ಸ್ ಫ್ಯಾಕ್ಟರ್' ಆಗಿರಬಹುದು ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.