ನಾನು ನೋಡಿದ ಅತ್ಯಂತ ಕೆಟ್ಟ ತಂಡ ಪಾಕಿಸ್ತಾನ! ಗಿಲ್ ಕ್ರಿಸ್ಟ್
Adam Gilchrist : ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯು ಇಂದು ( ಶನಿವಾರ) ಅಂತ್ಯಗೊಂಡಿದೆ. ಆಸಿಸ್ ತಂಡದವು ಎದುರಾಳಿ ಪಾಕ್ ವಿರುದ್ದ 3-0 ಅಂತರಗಳಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಯಾವುದೇ ಪೈಪೋಟಿ ನೀಡದೆ ಮೂರು ಪಂದ್ಯಗಳನ್ನು ಸೋತ ಪಾಕಿಸ್ತಾನದ ವಿರುದ್ದ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಆಡಂ ಗಿಲ್ ಕ್ರಿಸ್ಟ್ ಆಕ್ರೋಶ ವ್ಯಕ್ತಪಡಿಸಿದರು.
Adam Gilchrist said : ಜನವರಿ 3ರಿಂದ ಆರಂಭವಾಗಿದ್ದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವು ಸಿಡ್ನಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆಸಿಸ್ ತಂಡವು ಫಾಕ್ ವಿರುದ್ದ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಸರಣಿಯನ್ನು 3-0 ಅಂತರಗಳಿಂದ ವಶಪಡಿಸಿಕೊಂಡಿದೆ.
ಪಾಕ್ ತಂಡದ ಈ ಸೋಲನ್ನು ಆಸ್ಟ್ರೇಲಿಯಾ ದಿಗ್ಗಜ ಮಾಜಿ ಆಟಗಾರ ಆಡಂ ಗಿಲ್ ಕ್ರಿಸ್ಟ್ ತೀವ್ರವಾಗಿ ಟೀಕಿಸಿದ್ಧಾರೆ. ಪಾಕಿಸ್ತಾನವು ಆಸಿಸ್ ವಿರುದ್ದ ಟೆಸ್ಟ್ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು.
ಇದನ್ನು ಓದಿ-3ನೇ ಟೆಸ್ಟ್ ಪಂದ್ಯದಲ್ಲೂ ಆಸಿಸ್ ಗೆ ದೊರೆತ ಜಯ ! 3-0 ಅಂತರದಲ್ಲಿ ಸರಣಿ ವಶ
ಪಾಕ್ ತಂಡವು ತನ್ನ ಕಳಪೆ ಪ್ರದರ್ಶನದಿಂದ ಒಂದರ ಮೇಲೆ ಒಂದು ಸೋಲನ್ನ ಕಾಣುತ್ತ ಬಂದಿತು. ಆಡಿದ ಮೂರು ಪಂದ್ಯಗಳನ್ನು ಸೋತು, ಯಾವುದೇ ಬಲಪ್ರಯೋಗವನ್ನು ಮಾಡದೆ ಹೀನಾಯವಾಗಿ 3-0 ಅಂತರಗಳಿಂದ ಸರಣಿಯನ್ನು ಬಿಟ್ಟುಕೊಟ್ಟಿತು.
ಇದರ ಬೆನ್ನಲ್ಲೇ ಆಸಿಸ್ ಮಾಜಿ ಆಟಗಾರ ಗಿಲ್ ಕ್ರಿಷ್ಟ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಆಸಿಸ್ ಮತ್ತು ಪಾಕ್ ನಡುವಿನ ಪಂದ್ಯದ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತ್ತುರುವಾಗ ಪಾಕ್ 68 ನೇ ರನ್ ಗೆ ತನ್ನ 7ನೇ ವಿಕೆಟ್ ಕಳೆದುಕೊಂಡಿತು. ಈ ವಿಕೆಟ್ ಬಿದ್ದ ಬಳಿಕ ಗಿಲ್ ಕ್ರಿಸ್ಟ್ ಪಾಕಿಸ್ತಾನದ ಕಳಪೆ ಆಟವನ್ನು ಟೀಕಿಸಿದರು.
ಇದನ್ನು ಓದಿ-ಪಾಕ್ ನಾಯಕನಿಂದ ಡೇವಿಡ್ ವಾರ್ನರ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್ ! ಟೆಸ್ಟ್ ಕೆರಿಯರ್ ಗೆ ವಿದಾಯ ...
ಪಂದ್ಯದ ವೇಳೆ ಮಾತನಾಡಿದ ಗಿಲ್ ಕ್ರಿಸ್ಟ್ "ಆಸ್ಟ್ರೇಲಿಯಾ ನೆಲದಲ್ಲಿ ನಾನು ನೋಡಿದ ಅಂತ್ಯಂತ ಕೆಟ್ಟ ತಂಡವೆಂದರೆ ಅದು ಪಾಕಿಸ್ತಾನ. ಅವರ ಅಭಿಮಾನಿಗಳು ನಿನ್ನೆ ಭಾರತವನ್ನು ಅಣಕಿಸುತ್ತಿದ್ದರು. ಆದರೆ ಕನಿಷ್ಠ ಭಾರತ ತಂಡ, ದಕ್ಷಿಣ ಆಫ್ರಿಕಾದಲ್ಲಿ ಪಂದ್ಯವನ್ನು ಗೆದ್ದಿದೆ ಮತ್ತು ಆಸ್ಟ್ರೇಲಿಯಾದಲ್ಲಿ 2 ಸರಣಿಗಳನ್ನು ಗೆದ್ದಿದೆ. ಕಳೆದ 35 ವರ್ಷಗಳಲ್ಲಿ ಪಾಕಿಸ್ತಾನ ಯಾವುದನ್ನು ಗೆದ್ದಿದೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ