9 ವರ್ಷಗಳ ನಂತರ ಬಂದೇಬಿಡ್ತು ಆ ದಿನ: ವಿರಾಟ್ ಕೊಹ್ಲಿ ವೃತ್ತಿಜೀವನದ ಸುದೀರ್ಘ ಕಾಯುವಿಕೆ ಅಂತ್ಯ!
Virat Kohli Asia Cup 2023: ಮುಂಬರುವ ಏಷ್ಯಾ ಕಪ್-2023 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಏಷ್ಯಾ ಕಪ್-2023 ಆಗಸ್ಟ್ 31 ರಿಂದ ಆರಂಭವಾಗಲಿದೆ. ಈ ವರ್ಷ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಏಷ್ಯಾಕಪ್ ಕೊನೆಯ ಬಾರಿಗೆ 2018 ರಲ್ಲಿ ODI ಮಾದರಿಯಲ್ಲಿ ನಡೆದಿತ್ತು.
Virat Kohli Asia Cup 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಸೋತ ನಂತರ, ಟೀಂ ಇಂಡಿಯಾ ಈಗ ಸುದೀರ್ಘ ವಿರಾಮದಲ್ಲಿದೆ. ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇದೀಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ನಂತರ ಟೀಂ ಇಂಡಿಯಾ ಏಷ್ಯಾಕಪ್ ನಂತಹ ದೊಡ್ಡ ಟೂರ್ನಿಯನ್ನು ಆಡಬೇಕಿದೆ. ವಿರಾಟ್ ಕೊಹ್ಲಿಗೆ ಈ ಟೂರ್ನಿ ತುಂಬಾ ವಿಶೇಷವಾಗಲಿದೆ. ವಿರಾಟ್ ಕೆರಿಯರ್ ನಲ್ಲಿ 9 ವರ್ಷಗಳ ನಂತರ ವಿಶೇಷ ದಿನವೊಂದು ಬರಲಿದೆ.
ಇದನ್ನೂ ಓದಿ: 37 ವರ್ಷದ ಈ ಆಟಗಾರನಿಗೆ ಏಷ್ಯಾಕಪ್ ಕೊನೆ ಪಂದ್ಯ: ಟೆಸ್ಟ್’ನಲ್ಲಿ 7 ಶತಕ ಬಾರಿಸಿದ ಡ್ಯಾಶಿಂಗ್ ಓಪನರ್ ನಿವೃತ್ತಿ ಪಕ್ಕಾ!
ಮುಂಬರುವ ಏಷ್ಯಾ ಕಪ್-2023 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಏಷ್ಯಾ ಕಪ್-2023 ಆಗಸ್ಟ್ 31 ರಿಂದ ಆರಂಭವಾಗಲಿದೆ. ಈ ವರ್ಷ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಏಷ್ಯಾಕಪ್ ಕೊನೆಯ ಬಾರಿಗೆ 2018 ರಲ್ಲಿ ODI ಮಾದರಿಯಲ್ಲಿ ನಡೆದಿತ್ತು. ಆದರೆ ವಿರಾಟ್ ಕೊಹ್ಲಿ ಟೂರ್ನಿಯ ಭಾಗವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು 9 ವರ್ಷಗಳ ನಂತರ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ಆಡಲಿದ್ದಾರೆ. ವಿರಾಟ್ ಕೊಹ್ಲಿ ಕೊನೆಯ ಬಾರಿಗೆ 2014 ರಲ್ಲಿ 50 ಓವರ್ ಮಾದರಿಯಲ್ಲಿ ಏಷ್ಯಾಕಪ್ ಆಡಿದ್ದರು.
ಏಕದಿನ ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ 10 ಇನ್ನಿಂಗ್ಸ್ ಗಳಲ್ಲಿ 61.3 ಸರಾಸರಿಯಲ್ಲಿ 613 ರನ್ ಗಳಿಸಿದ್ದಾರೆ. ಏಕದಿನ ಏಷ್ಯಾಕಪ್ ನಲ್ಲಿ ವಿರಾಟ್ ಅವರ ಗರಿಷ್ಠ ಸ್ಕೋರ್ 183 ರನ್ ಆಗಿದೆ. ಪಾಕಿಸ್ತಾನದ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು. ಏಕದಿನ ಏಷ್ಯಾಕಪ್ ನಲ್ಲಿ 1 ಅರ್ಧಶತಕ ಮತ್ತು 3 ಶತಕಗಳನ್ನು ಗಳಿಸಿದ್ದಾರೆ. ಆದರೆ, 2014ರ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಟೂರ್ನಿಯಲ್ಲಿ ಭಾರತ ಕೇವಲ ಎರಡು ಪಂದ್ಯಗಳನ್ನು ಗೆದ್ದಿತ್ತು.
ಇದನ್ನೂ ಓದಿ: "ಐಪಿಎಲ್ ನಿಂದ ಅಂತರಾಷ್ಟ್ರೀಯ ಪಂದ್ಯಗಳಿಗೆ ತೊಂದರೆಯಿಲ್ಲ!."
ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್:
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) 2023 ರ ಏಷ್ಯಾ ಕಪ್ ಗಾಗಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದೆ. ಇದರರ್ಥ ಕಾಂಟಿನೆಂಟಲ್ ಚಾಂಪಿಯನ್‌ಶಿಪ್ ಎರಡು ದೇಶಗಳಲ್ಲಿ ನಡೆಯಲಿದೆ. ಅವುಗಳೆಂದರೆ ಪಾಕಿಸ್ತಾನ ಮತ್ತು ಶ್ರೀಲಂಕಾ. ಈ ಚಾಂಪಿಯನ್‌ಶಿಪ್ ನಲ್ಲಿ ಆರು ತಂಡಗಳನ್ನು ಎರಡು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಮುನ್ನಡೆಯುತ್ತವೆ. ಇದಾದ ಬಳಿಕ ಟಾಪ್-2 ತಂಡಗಳು ಫೈನಲ್ ನಲ್ಲಿ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಭಾರತ ಮತ್ತು ಪಾಕಿಸ್ತಾನದ ಹೊರತಾಗಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಟೂರ್ನಿಯಲ್ಲಿ ಆಡಲಿವೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಗೆ ಮೊದಲು ಈ ಪಂದ್ಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ