SRH In Finals: ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಮೊದಲು ಬ್ಯಾಟ್ ಮಾಡಿತ್ತು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 175 ರನ್ ಗಳಿಸಿತು. ಹೆನ್ರಿಚ್ ಕ್ಲಾಸೆನ್ (34 ಎಸೆತಗಳಲ್ಲಿ 50) ಅರ್ಧಶತಕ ಸಿಡಿಸಿದರೆ, ರಾಹುಲ್ ತ್ರಿಪಾಠಿ (12 ಎಸೆತಗಳಲ್ಲಿ 37) ಅದ್ಭುತ ಇನ್ನಿಂಗ್ಸ್ ಆಡಿದರು. ರಾಜಸ್ಥಾನ ಬೌಲರ್‌ಗಳ ಪೈಕಿ ಅವೇಶ್ ಖಾನ್ ಮತ್ತು ಟ್ರೆಂಟ್ ಬೌಲ್ಟ್ ತಲಾ ಮೂರು ವಿಕೆಟ್ ಪಡೆದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-SRH Vs RR : 36ರನ್ ಗಳ ಅಂತರದಿಂದ ಗೆಲುವು ಸಾಧಿಸಿದ SRH, ಸೋತ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಫೈನಲ್ ಕಣಕ್ಕಿಳಿದ ಹೈದರಾಬಾದ್!!


ಬಳಿಕ ಗುರಿ ಬೆನ್ನತ್ತಲು ರಾಜಸ್ಥಾನ್ ರಾಯಲ್ಸ್ ಪರದಾಡಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 139 ರನ್‌ಗಳಿಗೆ ಸೀಮಿತವಾಯಿತು. ಧ್ರುವ್ ಜುರೆಲ್ (35 ಎಸೆತ ಔಟಾಗದೆ 56) ಮತ್ತು ಯಶಸ್ವಿ ಜೈಸ್ವಾಲ್ (21 ಎಸೆತಗಳಲ್ಲಿ 42) ಮಿಂಚಿದರು ಆದರೆ ಅದರಲ್ಲಿಯೂ ಉಳಿದವರು ವಿಫಲರಾಗಿದ್ದಕ್ಕೆ ಸೋಲು ಅನಿವಾರ್ಯವಾಯಿತು.. ಹೈದರಾಬಾದ್ ತಂಡದ ಮೂವರು ಬೌಲರ್ ಗಳನ್ನು ಶಾಬಾದ್ ಬೌಲ್ಡ್ ಮಾಡಿದರು. ಅಭಿಷೇಕ್ ಶರ್ಮಾ ಎರಡು, ಪ್ಯಾಟ್ ಕಮಿನ್ಸ್ ಮತ್ತು ನಟರಾಜನ್ ತಲಾ ಒಂದು ವಿಕೆಟ್ ಪಡೆದರು.


ಇದನ್ನೂ ಓದಿ-IPL 2024: ಪ್ಲೇಆಫ್ ಹಂತದಲ್ಲಿ ಸೋಲುಂಡು ಹೊರಬಿದ್ದ RCB ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ?


ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ 2016ರಲ್ಲಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಅದರ ನಂತರ 2018 ರಲ್ಲಿ ಈ ಅವಕಾಶ ಸ್ವಲ್ಪರಲ್ಲಿ ತಪ್ಪಿಸಿಕೊಂಡಿತು. ಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋತಿತ್ತು. ಸುಮಾರು ಆರು ವರ್ಷಗಳಿಂದ ಸನ್ ರೈಸರ್ಸ್ ಪ್ರದರ್ಶನ ಕುಸಿಯುತ್ತಲೇ ಇದೆ. ಆದರೆ.. ಕೊನೆಗೂ ಐಪಿಎಲ್ 17ನೇ ಸೀಸನ್‌ನಲ್ಲಿ ಫೈನಲ್‌ಗೆ ತಲುಪಿದಕ್ಕೆ ತಂಡದ ಒಡತಿ ಕಾವ್ಯಾ ಖುಷಿಗೆ ಮಿತಿಯೇ ಇರಲಿಲ್ಲ. ಸನ್ ರೈಸರ್ಸ್ ಗೆಲುವಿನ ನಗೆ ಬೀರಿದ್ದಕ್ಕೆ ತಂದೆ ಕಲಾನಿಧಿ ಮಾರನ್ ಅವರನ್ನು ಅಪ್ಪಿಕೊಂಡು ಸಂತಸ ಹಂಚಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.