IPL 2024: ಧೋನಿ ಬಳಿಕ ಚೆನ್ನೈ ತಂಡದ ನಾಯಕತ್ವಕ್ಕಾಗಿ 3 ಆಟಗಾರರ ನಡುವೆ ಶುರುವಾಯ್ತು ಫೈಟ್!?
IPL 2024 Chennai Super Kings : ಧೋನಿ ನಿವೃತ್ತಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆಗಲು ಹಲವು ಆಟಗಾರರ ಮಧ್ಯೆ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ.
Chennai Super Kings Next Captain: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ 2024 ಆರಂಭವಾಗಲಿದ್ದು ಎಲ್ಲಾ ಆಟಗಾರರು ತಯಾರಿ ನಡೆಸುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಈ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಟೂರ್ನಿ ಆರಂಭಕ್ಕೂ ಮುನ್ನವೇ CSK ತಂಡಕ್ಕೆ ಸಂಬಂಧಿಸಿದ ದೊಡ್ಡ ಮಾಹಿತಿಯೊಂದು ಹರಿದಾಡುತ್ತಿದೆ. ವರದಿ ಪ್ರಕಾರ, CSK ನಾಯಕ ಎಂಎಸ್ ಧೋನಿ ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು ಎನ್ನಲಾಗಿದೆ.
ಧೋನಿ ನಿವೃತ್ತಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆಗಲು ಹಲವು ಆಟಗಾರರ ಮಧ್ಯೆ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ. CSK ನಲ್ಲಿ ಈ 3 ಆಟಗಾರರ ನಡುವೆ ಕ್ಯಾಪ್ಟನ್ಸಿ ಪಟ್ಟಕ್ಕೆ ಫೈಟ್ ಶುರುವಾಗಿದೆಯಂತೆ.
ರವೀಂದ್ರ ಜಡೇಜಾ ಅವರು ಎಂಎಸ್ ಧೋನಿ ನಂತರ ಸಿಎಸ್‌ಕೆ ತಂಡದ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ. ಅವರು ಚೆನ್ನೈ ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಎಂಎಸ್ ಧೋನಿ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಅನೇಕ ಬಾರಿ ಸಿಎಸ್‌ಕೆ ನಾಯಕತ್ವ ವಹಿಸಿದ್ದಾರೆ. ಜಡೇಜಾ ಅವರ ಈ ಪ್ರದರ್ಶನವನ್ನು ನೋಡಿದರೆ ಮುಂದಿನ ದಿನಗಳಲ್ಲಿ ರವೀಂದ್ರ ಜಡೇಜಾ ಅವರು ಸಿಎಸ್‌ಕೆ ನಾಯಕರಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: WPL 2024 : 42 ರನ್ ಗಳ ಅಂತರದಿಂದ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಮಿಚೆಲ್ ಸಾಂಟ್‌ನರ್ ತಂಡದಲ್ಲಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ. ಮಿಚೆಲ್ ಸಾಂಟ್‌ನರ್ ಸಿಎಸ್‌ಕೆ ಪರ ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ, ಆದರೆ ಆಡಿದ ಕಡಿಮೆ ಪಂದ್ಯಗಳಲ್ಲಿಯೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಎಂಎಸ್ ಧೋನಿ ಬಳಿಕ ಮಿಚೆಲ್ ಸಾಂಟ್‌ನರ್ ಸಿಎಸ್ ಕೆ ನಾಯಕತ್ವ ವಹಿಸಬಹುದು ಎನ್ನಲಾಗಿದೆ.
ಭಾರತದ ಯುವ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಕಳೆದ ಕೆಲವು ಸಮಯದಿಂದ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ತೋರಿದ್ದಾರೆ. ರುತುರಾಜ್ ಗಾಯಕ್‌ವಾಡ್ ಅವರನ್ನು ಸಿಎಸ್‌ಕೆ ಅಭಿಮಾನಿಗಳು ಭವಿಷ್ಯದ ನಾಯಕ ಎಂದು ನೋಡುತ್ತಿದ್ದಾರೆ. ಎಂಎಸ್ ಧೋನಿ ಬಳಿಕ ರುತುರಾಜ್ ಗಾಯಕ್ವಾಡ್ ನಾಯಕನಾಗಬಹದು ಎನ್ನಲಾಗ್ತಿದೆ.
ಇದನ್ನೂ ಓದಿ:Shreyas Iyer: ಈ ಬಾಲಿವುಡ್ ನಾಯಕಿ ಜೊತೆ ಪ್ರೀತಿಯಲ್ಲಿದ್ದಾರಂತೆ ಶ್ರೇಯಸ್ ಅಯ್ಯರ್!?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.