Yashasvi Jaiswal Brother Tejasvi Jaiswal Story: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಚಿಕ್ಕ ವಯಸ್ಸಿನಲ್ಲೇ ಟೀಂ ಇಂಡಿಯಾಗೆ ಪ್ರವೇಶ ಪಡೆದು ಹೆಸರು ಮಾಡಿರುವ ಪ್ರತಿಭೆ. ಈಗ ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಮ್ಯಾಜಿಕ್ ಮಾಡುತ್ತಿರುವ ಜೈಸ್ವಾಲ್‌, ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ಟೂರ್ನಿಯಲ್ಲೂ ತಮ್ಮ ಛಾಪು ಮೂಡಿಸುವ ಹಂಬಲದಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರಿಗೆ ಬಿಗ್‌ ಶಾಕ್‌!! ಮೂವರು ಸ್ಟಾರ್‌ ಆಟಗಾರರು ತಂಡದಿಂದ ಔಟ್‌?!   


ಈ ಮಧ್ಯೆ, ಅವರ ಸಹೋದರ ತೇಜಸ್ವಿ ಜೈಸ್ವಾಲ್ ಕೂಡ ಕ್ರಿಕೆಟ್ ಕ್ಷೇತ್ರಕ್ಕೆ ಮರಳಿದ್ದಾರೆ. ಕಳೆದ ವಾರ ರಣಜಿ ಟ್ರೋಫಿಯಲ್ಲಿ ತ್ರಿಪುರಾ ಪರವಾಗಿ ತಮ್ಮ ಮೊದಲ ಪ್ರಥಮ ದರ್ಜೆ ಅರ್ಧಶತಕವನ್ನು ಗಳಿಸಿದ್ದಾರೆ. ಇದಾದ ನಂತರ ಯಶಸ್ವಿ ತನ್ನ 27 ವರ್ಷದ ಸಹೋದರನಿಗೆ ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ. "ಕುಟುಂಬಕ್ಕಾಗಿ ನಿಮ್ಮ ಕನಸನ್ನು ತೊರೆದಿದ್ದಿರಿ, ಈಗ ನಿಮ್ಮ ಸಮಯ" ಎಂದು ಬರೆದಿದ್ದರು.


2012 ರಲ್ಲಿ, ಉತ್ತರ ಪ್ರದೇಶದ ಭದೋಹಿಯಲ್ಲಿ ಹಾರ್ಡ್‌ವೇರ್ ಅಂಗಡಿಯ ಮಾಲೀಕರ ಇಬ್ಬರು ಪುತ್ರರು ಕ್ರಿಕೆಟಿಗರಾಗಲು ಮುಂಬೈಗೆ ತೆರಳಿದ್ದರು. ಅಲ್ಲಿ ಆಜಾದ್ ಮೈದಾನದಲ್ಲಿ ಗ್ರೌಂಡ್ಸ್‌ ಮ್ಯಾನ್ ಟೆಂಟ್‌ನಲ್ಲಿ ಕೆಲಸ ಕೂಡ ಮಾಡುತ್ತಿದ್ದರು. ಆದರೆ ಅವರಲ್ಲಿ ಒಬ್ಬರಿಗಷ್ಟೇ ಕ್ರಿಕೆಟ್‌ ಆಟವನ್ನು ಮುಂದುವರಿಸಲು ಸಾಧ್ಯವಾಯಿತು. ಹೀಗಾಗಿ 17 ನೇ ವಯಸ್ಸಿನಲ್ಲಿ, ತೇಜಸ್ವಿ ಕ್ರಿಕೆಟ್ ತೊರೆದರು, ಇದರಿಂದಾಗಿ ಯಶಸ್ವಿ ಭಾರತೀಯ ಕ್ರಿಕೆಟಿಗನಾಗುವ ಕನಸು ಜೀವಂತವಾಗಿ ಉಳಿಯಿತು.


ಯಶಸ್ವಿ ವಯೋಮಾನದ ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿದರು. ಆ ನಂತರ ಹಂತಹಂತವಾಗಿ ಟೀಂ ಇಂಡಿಯಾದಲ್ಲಿ ಸ್ಥಾನವನ್ನೂ ಪಡೆದರು. ಮತ್ತೊಂದೆಡೆ, ತೇಜಸ್ವಿ ದೆಹಲಿಯಲ್ಲಿ ಅಲಂಕಾರಿಕ ದೀಪಗಳನ್ನು ಮಾರಾಟ ಮಾಡುವ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಹೀಗೆ ದುಡಿದು ಯಶಸ್ವಿಗೆ ಪಾಕೆಟ್ ಮನಿ ಕಳುಹಿಸುತ್ತಿದ್ದರು. ಹಾಗೆಯೇ ತೇಜಸ್ವಿ ಅವರ ಇಬ್ಬರು ಅಕ್ಕನಿಗೂ ಮದುವೆ ಮಾಡಿಕೊಟ್ಟಿದ್ದರು.


ಆರ್ಥಿಕ ಬಿಕ್ಕಟ್ಟಿನ ಹೊರತಾಗಿ, ಮುಂಬೈನಲ್ಲಿ ಕ್ರಿಕೆಟ್ ಆಡುವಾಗ ತೇಜಸ್ವಿ ವಯಸ್ಸಿನ ವಂಚನೆಯ ಆರೋಪಗಳನ್ನು ಎದುರಿಸಬೇಕಾಯಿತು. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿದ್ದ ಅವರು "ನಾನು ಹ್ಯಾರಿಸ್ ಶೀಲ್ಡ್‌ನಲ್ಲಿ ಒಂದು ಪಂದ್ಯವನ್ನು ಆಡಿದ್ದೇನೆ. ಅಲ್ಲಿ ಏಳು ವಿಕೆಟ್‌ಗಳನ್ನು ಪಡೆದಿದ್ದೇನೆ. ಆಗ ನನಗೆ ವಯಸ್ಸಿನ ಪರಿಶೀಲನೆ ಸಮಸ್ಯೆ ಇದೆ ಎಂದು ಜನರು ಹೇಳಲು ಪ್ರಾರಂಭಿಸಿದರು. ನಾನು ಒಂದೂವರೆ ವರ್ಷಗಳ ಕಾಲ ಬೆಂಚ್‌ನಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಯಶಸ್ವಿ ಉತ್ತಮವಾಗಿ ಆಡುತ್ತಿದ್ದ. ನಮ್ಮಿಬ್ಬರಿಗೂ ಇದು ತುಂಬಾ ಕಷ್ಟವಾದ ಕಾರಣ ಅವನ ಭವಿಷ್ಯದ ಮೇಲೆ ಪರಿಣಾಮ ಬೀರುವುದು ಬೇಡವೆಂದು ನಿರ್ಧಾರಕ್ಕೆ ಬಂದೆ" ಎಂದಿದ್ದಾರೆ. ನನಗೆ ಇಷ್ಟವಿರಲಿಲ್ಲ, ಜ್ವಾಲಾ ಸರ್ ಬರಲಿಲ್ಲ.


ಇದನ್ನೂ ಓದಿ: ಮಧುಮೇಹಕ್ಕೆ ರಾಮಬಾಣ ಈ ಹಣ್ಣು.. ನಿತ್ಯ ಸೇವಿಸಿದ್ರೆ ಯಾವತ್ತೂ ಹೆಚ್ಚಾಗಲ್ಲ ಶುಗರ್! ಹಠಮಾರಿ ಬೊಜ್ಜನ್ನು ತೊಲಗಿಸುವ ಮಹಾಮಂತ್ರವೂ ಇದೇ!!  


ತೇಜಶ್ವಿ ಅಲ್ಲಿಂದ ಭದೋಹಿಗೆ ಮರಳಿದರು. ಆ ನಂತರ ಯಶಸ್ವಿಗೆ ಐಪಿಎಲ್ ಕಾಂಟ್ರಾಕ್ಟ್ ಸಿಕ್ಕಿತ್ತು,  ಸಹೋದರಿಯರ ವಿವಾಹವನ್ನೂ ಮಾಡಿದ್ದರು, ಇಷ್ಟರ ವೇಳೆಗೆ ಅವರ ಜೀವನ ಕೊಂಚ ಸುಧಾರಿಕೆ ಕಂಡುಬಂದಿತ್ತು. ಆ ಬಳಿಕ ಯಶಸ್ವಿ, ತೇಜಸ್ವಿ ಬಳಿ ಮತ್ತೆ ಕ್ರಿಕೆಟ್ ಆಡುವಂತೆ ಕೇಳಿಕೊಂಡರು. ತೇಜಸ್ವಿ ಮತ್ತೆ ಕಷ್ಟಪಟ್ಟು ಮೇಘಾಲಯ ವಿರುದ್ಧ ತ್ರಿಪುರಾಗೆ ಪದಾರ್ಪಣೆ ಮಾಡಿದರು. 2014ರಿಂದ 2021ರವರೆಗೆ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಅವರು ತ್ರಿಪುರಾಕ್ಕೆ ಹೋದರು. ಅಲ್ಲಿನ ಕಾಲೇಜಿನಲ್ಲಿ ಪ್ರವೇಶ ಪಡೆದು ಸ್ಥಳೀಯ ಕ್ರಿಕೆಟ್ ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ತ್ರಿಪುರ ತಂಡದಲ್ಲಿ ಸ್ಥಾನ ಪಡೆದರು. ಇದೀಗ ಯಶಸ್ವಿ ಜೈಸ್ವಾಲ್ ತಮ್ಮ ಸಹೋದರದ ಬೆಳವಣಿಗೆ ನೋಡಿ ಸಂತಸಗೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.