Babar Azam Troll: ಬಾಬರ್ ಅಜಂ ಇಂಗ್ಲೀಷ್ ಕೇಳಿದ್ರೆ ತಲೆ ತಿರುಗೋದು ಖಂಡಿತ: ಮತ್ತೆ ಟ್ರೋಲ್ ಗೆ ಆಹಾರವಾದ ಪಾಕ್ ನಾಯಕ
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವರ ಏಳು ವರ್ಷದ ಹಿಂದಿನ ಟ್ವೀಟ್ ಅನ್ನು ಜನರು ಹುಡುಕಿ ತೆಗೆದಿದ್ದು, ಅದರಲ್ಲಿ ಅವರು ಜಿಂಬಾಬ್ವೆಯನ್ನು ಸರಿಯಾಗಿ ಉಚ್ಚರಿಸಿಲ್ಲ. ಟಿ20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು ಸೋಲಿಸಿದ್ದು ಕುತೂಹಲಕಾರಿಯಾಗಿದ್ದು, ಹಲವು ಬಳಕೆದಾರರು ಈ ಸೋಲಿಗೆ ಆ ಟ್ವೀಟ್‌ಗೆ ಲಿಂಕ್ ಮಾಡುತ್ತಿದ್ದಾರೆ
ಪಾಕಿಸ್ತಾನಿ ಕ್ರಿಕೆಟಿಗರ ಇಂಗ್ಲಿಷ್ ಕೇಳಲು ಸಾಮಾನ್ಯವಾಗಿ ಹಾಸ್ಯಾಸ್ಪದಂತಿರುತ್ತದೆ. ಪಂದ್ಯದ ಬಳಿಕ ಅವರು ಕಾಮೆಂಟೇಟರ್‌ನೊಂದಿಗೆ ಮಾತನಾಡುವಾಗ ಆಗಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬರೆಯುತ್ತಾರೆ ಎಂದಾಗಲು ಪಾಕ್ ಕ್ರೀಡಾಪಟುಗಳ ಇಂಗ್ಲೀಷ್ ನಗು ತರಿಸುತ್ತದೆ. ಈ ವಿಚಾರದಿಂದಲೇ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ.
ಇದನ್ನೂ ಓದಿ: Virat Kohli: ವಿಶ್ವದಾಖಲೆ ಹೊಸ್ತಿಲಲ್ಲಿ ವಿರಾಟ್: ಈ ರೆಕಾರ್ಡ್ ಮಾಡಲು ಬೇಕಾಗಿರೋದು ಕೇವಲ 27 ರನ್!
ಈ ಮಧ್ಯೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವರ ಏಳು ವರ್ಷದ ಹಿಂದಿನ ಟ್ವೀಟ್ ಅನ್ನು ಜನರು ಹುಡುಕಿ ತೆಗೆದಿದ್ದು, ಅದರಲ್ಲಿ ಅವರು ಜಿಂಬಾಬ್ವೆಯನ್ನು ಸರಿಯಾಗಿ ಉಚ್ಚರಿಸಿಲ್ಲ. ಟಿ20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು ಸೋಲಿಸಿದ್ದು ಕುತೂಹಲಕಾರಿಯಾಗಿದ್ದು, ಹಲವು ಬಳಕೆದಾರರು ಈ ಸೋಲಿಗೆ ಆ ಟ್ವೀಟ್‌ಗೆ ಲಿಂಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ: KL Rahul ಕಳಪೆ ಫಾರ್ಮ್ನಿಂದ ಕೊಹ್ಲಿ ಹಾದಿಯಲ್ಲಿ ನಡೆಯುತ್ತಿರುವ ಕೆ.ಎಲ್.ರಾಹುಲ್!
ಬಾಬರ್ ಅವರ ಈ ಟ್ವೀಟ್ ಮೇ 2015ರಂದು ಮಾಡಲಾಗಿದೆ. ಜಿಂಬಾಬ್ವೆ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಎರಡೂ ತಂಡಗಳ ನಡುವೆ ಸೀಮಿತ ಓವರ್ಗಳ ಕ್ರಿಕೆಟ್ ಸರಣಿ ನಡೆಯಿತು. ಜಿಂಬಾಬ್ವೆ ತಂಡ ಪಾಕಿಸ್ತಾನ ತಲುಪಿದಾಗ ಸ್ವಾಗತಿಸಲು ಬಾಬರ್ ಅಜಂ ಈ ಟ್ವೀಟ್ ಮಾಡಿದ್ದರು. 'ಸ್ವಾಗತ ಜಿಂಬಾವೇ(Zimbaway)’ ಎಂದು ಬರೆದಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ