Virat Kohli Video : ಕ್ರಿಕೆಟ್ ನಲ್ಲಿ ಲೆಜೆಂಡ್ ಗಳ ಜೊತೆ ಹೋಲಿಸುವುದು ಸಾಮಾನ್ಯವಾಗಿ ನಡೆಯುತ್ತದೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಸಚಿನ್‌ಗೆ ಹೋಲಿಸಿದರೆ, ಶುಭಮನ್ ಗಿಲ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿ ಮಾತನಾಡಲಾಗುತ್ತದೆ. ಇದೀಗ ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಭಮನ್ ಗಿಲ್ ನನ್ನು ತನ್ನ ಜೊತೆ ಹೋಲಿಸಿರುವ ಬಗ್ಗೆ ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ನಂತರ ತಾನೇ ಅತ್ಯುತ್ತಮ ಎಂದು ಹೇಳಿಕೊಳ್ಳುವುದು ಕಂಡು ಬಂದಿದೆ. 


COMMERCIAL BREAK
SCROLL TO CONTINUE READING

ವಿಡಿಯೋದಲ್ಲಿ ವಿರಾಟ್ ಹೇಳೋದೇನು? :
ನಾನು ಶುಭ್‌ಮನ್ ಗಿಲ್ ಅವರನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಅವರ ಪ್ರತಿಭೆಯ ಬಗ್ಗೆ ಯಾವುದೇ ಅನುಮಾನವಿಲ್ಲ, ಆದರೆ ಟ್ಯಾಲೆಂಟ್ ಶೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ಬಹಳ ವ್ಯತ್ಯಾಸವಿದೆ. ಶುಭಮನ್ ಗಿಲ್ ಆ ಮಟ್ಟಕ್ಕೆ ಏರುವುದು ತುಂಬಾ ಕಷ್ಟ ಎಂದು ಈ ವಿಡಿಯೋದಲ್ಲಿ ವಿರಾಟ್ ಹೇಳಿದ್ದಾರೆ. 


ಇದನ್ನೂ ಓದಿ : RCB ಆಫರ್‌ ರಿಜೆಕ್ಟ್‌ ಮಾಡಿ ಪಶ್ಟಾತಾಪ ಪಟ್ಟ ಆಟಗಾರ! ಸ್ಟಾರ್‌ ಕ್ರಿಕೆಟರ್‌ ಆಗಿದ್ದ ಈತ ಈಗ ಇಂದು ಅಕೌಂಟ್ಸ್‌ ಮ್ಯಾನೇಜರ್‌


ಗಿಲ್ ಅವರದ್ದು ಅದ್ಭುತ ತಂತ್ರ : 
ಗಿಲ್ ಅವರ ತಂತ್ರವು ಅತ್ಯುತ್ತಮವಾಗಿದೆ.ಆದರೆ ಅವರನ್ನು ನಮ್ಮ ಜೊತೆ ಇಡುವ ಅಗತ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. ಜನರು ಮುಂದಿನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಕ್ರಿಕೆಟಿಗೆ ಒಬ್ಬನೇ  ವಿರಾಟ್ ಕೊಹ್ಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಅತ್ಯಂತ ಅಪಾಯಕಾರಿ ಬೌಲರ್‌ಗಳನ್ನು ಎದುರಿಸಿದ್ದೇನೆ.ಕಠಿಣ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ, ಒಂದು ದಶಕಕ್ಕೂ ಹೆಚ್ಚು ಕಾಲ ಸ್ಥಿರವಾಗಿ ಆಡಿದ್ದೇನೆ.  ಭಾರತೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿ ಇದ್ದಾರೆ. ಅವರ  ನಂತರ ನಾನಿದ್ದೇನೆ ಎಂದಿದ್ದಾರೆ. ಗಿಲ್ ಅಲ್ಲಿಗೆ ತಲುಪುವುದು ಬಹಳ ದೂರವಿದೆ ಎಂದು ಕೊಹ್ಲಿ ಹೇಳಿದ್ದಾರೆ. 


AI ರಚಿತ ವೀಡಿಯೊ :


RCB Captain: ಕೊಹ್ಲಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ತಂಡದ ಮುಂದಿನ ಕ್ಯಾಪ್ಟನ್‌ ಸ್ಥಾನಕ್ಕೆ ಕಿಂಗ್‌ ಎಂಟ್ರಿ? ರೋಹಿತ್‌-ಕೆ ಎಲ್‌ ರಾಹುಲ್‌ ನಡುವೆ ಪೈಪೋಟಿ


ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ ವಿರಾಟ್ ಕೊಹ್ಲಿ ಧ್ವನಿ ಮತ್ತು ಅವರು ಮಾತನಾಡುವುದನ್ನು ಕಾಣಬಹುದು. ಆದರೆ ಇದನ್ನು AI ಸಹಾಯದಿಂದ ರಚಿಸಲಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಂಚಲನ ಉಂಟು ಮಾಡಿದೆ.ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಅನೇಕ ಬಳಕೆದಾರರು AI ಸಾಮರ್ಥ್ಯದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.ಅಲ್ಲದೆ ಇದು ಎಷ್ಟು  ಅಪಾಯಕಾರಿ ಎಂದು ಆತಂಕ ಕೂಡಾ ವ್ಯಕ್ತಪಡಿಸುತ್ತಿದ್ದಾರೆ. 


ಅಸಲಿಗೆ ವಿರಾಟ್ ಕೊಹ್ಲಿ ಯಾವ ವಿಡಿಯೋ  ಕೂಡಾ ಮಾಡಿಲ್ಲ, ಶುಭಮನ್ ಗಿಲ್ ಬಗ್ಗೆ ಯಾವ ಹೇಳಿಕೆಯನ್ನೂ ನೀಡಿಲ್ಲ. ಹರಿದಾಡುತ್ತಿರುವ ವಿಡಿಯೋ ಸಂಪೂರ್ಣ ನಕಲಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ