India vs England 4th Test: ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌’ನ ಮೊದಲ ದಿನದಂದು ಮೂರು ವಿಕೆಟ್‌’ಗಳನ್ನು ಕಬಳಿಸುವ ಮೂಲಕ ಸದ್ದು ಮಾಡಿದ್ದ ಆಕಾಶ್ ದೀಪ್ ಅವರನ್ನು ಭಾರತದ ಮಾಜಿ ಆಲ್‌’ರೌಂಡರ್ ಇರ್ಫಾನ್ ಪಠಾಣ್ ಕೊಂಡಾಡಿದ್ದಾರೆ.


COMMERCIAL BREAK
SCROLL TO CONTINUE READING

“ಒಬ್ಬ ವೇಗದ ಬೌಲರ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡುವುದು ತುಂಬಾ ಕಷ್ಟ, ಆದರೆ ಆಕಾಶ್ ದೀಪ್ ಬೌಲಿಂಗ್ ಮಾಡಿ ಮೂರು ವಿಕೆಟ್ ಕಬಳಿಸಿದ ರೀತಿ ಉಜ್ವಲ ಭವಿಷ್ಯವನ್ನು ಸೂಚಿಸುತ್ತದೆ” ಎಂದು ಪಠಾಣ್ ಹೇಳಿದ್ದಾರೆ.


ಇದನ್ನೂ ಓದಿ: Jahnvi Kapoor: ಬಾಲಿವುಡ್ ಸುಂದರಿ ಜಾನ್ವಿ ಕಪೂರ್’ಗೆ RCBಯ ಆ ಇಬ್ಬರು ಆಟಗಾರರೇ ಫೇವರೇಟ್ ಕ್ರಿಕೆಟರ್ಸ್!


ಇರ್ಫಾನ್ ಪಠಾಣ್ ಮತ್ತಷ್ಟು ಮಾತನಾಡಿ, “ಬ್ಯಾಟ್ಸ್‌’ಮನ್ ಆಗಿ ಟೀಂ ಇಂಡಿಯಾಗೆ ಎಂಟ್ರಿ ಪಡೆಯಲು ಕೆಲವರು ಬಯಸುತ್ತಾರೆ. ಇನ್ನೂ ಕೆಲವರಿಗೆ ಬೌಲಿಂಗ್ ಮೂಲಕ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್‌’ನಲ್ಲಿ ಚೊಚ್ಚಲ ಪ್ರವೇಶ ಮಾಡುವ ಕನಸು ಇರುತ್ತದೆ. ಆದರೆ ಆಕಾಶ್ ಪಂದ್ಯದ ಮೊದಲ ಸೆಷನ್’ನಲ್ಲಿ ಬೌಲಿಂಗ್ ಮಾಡಿ ಮೂರು ವಿಕೆಟ್ ಪಡೆದ ರೀತಿ ಶ್ಲಾಘನೀಯ. ಆಕಾಶ್ ಅವರ ವೃತ್ತಿಜೀವನದ ಗ್ರಾಫ್ ಇಲ್ಲಿಂದ ಮಾತ್ರ ಏರುತ್ತದೆ ಎಂದು ಭಾವಿಸುತ್ತೇವೆ” ಎಂದರು.


ಯಶಸ್ವಿ ಜೈಸ್ವಾಲ್ ಬಗ್ಗೆ ಪಠಾಣ್ ಮಾತು:


ಇರ್ಫಾನ್ ಪಠಾಣ್ ಆರಂಭಿಕ ಬ್ಯಾಟ್ಸ್‌’ಮನ್ ಯಶಸ್ವಿ ಜೈಸ್ವಾಲ್ ಬಗ್ಗೆಯೂ ಮಾತನಾಡಿದ್ದಾರೆ. ಯಶಸ್ವಿ ಟೆಸ್ಟ್ ಸರಣಿಯಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ದೇಶದ ಐದನೇ ಆಟಗಾರರಾಗಿದ್ದಾರೆ. “ಯಶಸ್ವಿ ಜೈಸ್ವಾಲ್ ತುಂಬಾ ವಿಶೇಷವಾದ ಕ್ರಿಕೆಟಿಗ, ಅವರ ಭವಿಷ್ಯವು ತುಂಬಾ ಉಜ್ವಲವಾಗಿದೆ” ಎಂದಿದ್ದಾರೆ.


ಇದನ್ನೂ ಓದಿ: Modi Scuba Diving: ಪ್ರಧಾನಿ ಮೋದಿ ಸ್ಕೂಬಾ ಡೈವಿಂಗ್… ಪ್ರಾಚೀನ ದ್ವಾರಕಾ ನಗರ ಕಂಡು ಮನಸೋತ ನಮೋ


ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌’ನಲ್ಲಿ, ವೇಗದ ಬೌಲರ್ ಆಕಾಶ್ ದೀಪ್ ಇಂಗ್ಲೆಂಡ್‌’ನ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌’ಗಳನ್ನು ಪೆವಿಲಿಯನ್‌ಗೆ ಕರೆದೊಯ್ಯುವ ಮೂಲಕ ಪ್ರಭಾವ ಬೀರಿದರು. ಆಕಾಶದೀಪ್ ಅವರ ತಂದೆ ರಾಮ್‌ಜಿ ಸಿಂಗ್ ಸರ್ಕಾರಿ ಪ್ರೌಢಶಾಲೆಯಲ್ಲಿ 'ದೈಹಿಕ ಶಿಕ್ಷಣ' ಶಿಕ್ಷಕರಾಗಿದ್ದರು. ಅವರಿಗೆ ಮಗ ಕ್ರಿಕೆಟರ್ ಆಗುವುದು ಇಷ್ಟವಿರಲಿಲ್ಲ. ನಿವೃತ್ತಿಯ ನಂತರ ಪಾರ್ಶ್ವವಾಯುವಿಗೆ ತುತ್ತಾದ ರಾಮ್ ಜಿ, ಐದು ವರ್ಷಗಳ ಕಾಲ ಹಾಸಿಗೆ ಹಿಡಿದರು. ಫೆಬ್ರವರಿ 2015 ರಲ್ಲಿ ಕೊನೆಯುಸಿರೆಳೆದರು. ತಂದೆ ನಿಧನದಲ್ಲೇ ನೋವುಂಡಿದ್ದ ಆಕಾಶದೀಪ್ ಕುಟುಂಬಕ್ಕೆ, ಮತ್ತಷ್ಟು ನೋವು ನೀಡಿದ್ದು ಅವರ ಹಿರಿಯ ಸಹೋದರ ಧೀರಜ್ ಅಗಲಿಕೆ. ಇದಾದ ನಂತರ ಅಣ್ಣನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿಯೂ ಆಕಾಶ್ ಮೇಲಿದೆ.  


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.