ಯಾವುದೇ ಕ್ರೀಡೆಯಾಗಲಿ, ಕೆಲಸವಾಗಲಿ ಮನುಷ್ಯನಿಗೆ ತಾಳ್ಮೆ ಎಂಬುವುದು ಮುಖ್ಯ. ಒಂದು ವೇಳೆ ತಾಳ್ಮೆ ಕಳೆದುಕೊಂಡು ಮುಂದುವರೆದರೆ ತನಗೆ ಅಥವಾ ಪರರಿಗೆ ಅದರಿಂದ ಸಮಸ್ಯೆಗಳು ಎದುರಾಗೋದು ಖಂಡಿತ. ಇದಕ್ಕೆ ಉದಾಹರಣೆ ಎಂಬಂತೆ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಘಟನೆಯೊಂದು ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Narendra Modi Birthday: ದೇಶ ಕಂಡ ಮಹಾನ್ ‘ಪ್ರಧಾನಿ’ ಜನ್ಮದಿನ: ನರೇಂದ್ರ ಮೋದಿ ಕುರಿತು ನಿಮಗರಿಯದ ಅಸಾಮಾನ್ಯ ಸಂಗತಿಗಳು


ದುಲೀಪ್ ಟ್ರೋಫಿ ಪಂದ್ಯ ನಡೆಯುತ್ತಿದ್ದ ವೇಳೆ ವೆಸ್ಟ್ ಜೋನ್ ಬೌಲರ್ ಚಿಂತನ್ ಗಜಾ ಎಸೆತದಲ್ಲಿ ಸೆಂಟ್ರಲ್ ಜೋನ್ ತಂಡದ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಸಿಕ್ಸರ್ ಬಾರಿಸಿದ್ದರು. ಬಳಿಕ ಬಂದ ಎಸೆತವನ್ನು ಸಹ ಡಿಫೆಂಡ್ ಮಾಡಿಕೊಂಡರು. ಆದರೆ ಚಿಂತನ್ ತನ್ನತ್ತ ಬಂದ ಬಾಲ್‌ನ್ನು ತಿರುಗಿ ಅಯ್ಯರ್‌ನತ್ತ ಬಲವಾಗಿ ಎಸೆದಿದ್ದಾರೆ. ಪರಿಣಾಮ ಕ್ರೀಸ್‌ನಲ್ಲಿದ್ದ ಅಯ್ಯರ್ ಕುತ್ತಿಗೆ ಭಾಗಕ್ಕೆ ಬಲವಾಗಿ ತಗುಲಿದೆ. ನೆಲಕ್ಕೆ ಕುಸಿದು ಬಿದ್ದ ಅವರನ್ನು ಆ್ಯಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.


ವೆಂಕಟೇಶ್ ಅಯ್ಯರ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದರು. ಇದರಿಂದ ಕೋಪಗೊಂಡ ಚಿಂತನ್ ಗಜಾ ಆಕ್ರೋಶದಿಂದ ಬೌಲಿಂಗ್ ಮಾಡಿದ್ದಾರೆ. ಅದನ್ನೂ ಸಹ ಅಯ್ಯರ್ ಸ್ಟ್ರೈಟ್ ಡಿಫೆಂಡ್ ಮಾಡಿದ್ದು, ಬಾಲ್ ನೇರವಾಗಿ ಬೌಲರ್ ಬಳಿ ಬಂದಿದೆ. ಅದೇ ಬಾಲ್ ಹಿಡಿದು ಆಕ್ರೋಶದಿಂದಲೇ ಗಜಾ ತಿರುಗಿಸಿ ಅಯ್ಯರ್‌ನತ್ತ ಎಸೆದಿದ್ದಾರೆ. ಇದು ಅಯ್ಯರ್ ತಲೆಗೆ ಬಡಿದಿದ್ದು, ನೆಲಕ್ಕೆ ಕುಸಿದು ಬಿದ್ದಿದ್ದಾರೆ.


ಇದನ್ನೂ ಓದಿ: Cheetah For India: ಪ್ರಧಾನಿ ಹುಟ್ಟುಹಬ್ಬದಂದು ಭಾರತಕ್ಕೆ ವಿಶ್ವದ ಅತೀ ವೇಗದ ಚಿರತೆಗಳ ಆಗಮನ


27 ವರ್ಷದ ಅಯ್ಯರ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಇನ್ನು ವೆಂಕಟೇಶ್ ಅಯ್ಯರ್ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಮಿಂಚಿರುವ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಟೀಂ ಇಂಡಿಯಾಗೆ ಲಗ್ಗೆ ಇಟ್ಟಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.