ನವದೆಹಲಿ: ಏಷ್ಯಾದ ಚಾಂಪಿಯನ್ ಅಮಿತ್ ಪಂಗಾಲ್ (52 ಕೆಜಿ) ಶುಕ್ರವಾರದಂದು ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ಎರಡನೇ ಶ್ರೇಯಾಂಕಿತ ಪಂಗಾಲ್ ಅವರು 3-2ರಿಂದ ಮೇಲುಗೈ ಫೈನಲ್ ಗೆ ತಲುಪಿದ್ದಾರೆ. ಶನಿವಾರದಂದು ಅವರು  ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೊವ್ ಅವರನ್ನು ಎದುರಿಸಲಿದ್ದಾರೆ. ಜೊಯಿರೊವ್ ತಮ್ಮ ಸೆಮಿಫೈನಲ್ ಪಂದ್ಯದಲ್ಲಿ  ಫ್ರೆಂಚ್ ಆಟಗಾರ ಬಿಲ್ಲಾಲ್ ಬೆನ್ನಾಮಾ ಅವರನ್ನು ಸೋಲಿಸಿದ್ದರು.



2017 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 49 ಕೆಜಿ ವಿಭಾಗದ ಕಂಚು ಗೆದ್ದ ನಂತರ ಪಂಗಲ್ ತಮ್ಮ ಪ್ರದರ್ಶನದಲ್ಲಿ ಗಣನೀಯ ಸುಧಾರಣೆ ಕಂಡಿದ್ದಾರೆ. ಅದೇ ವರ್ಷದಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ ಫೈನಲ್ ವರೆಗೆ ತಲುಪಿದ್ದ ಅವರು 2018 ರಲ್ಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗುವ ಮೊದಲು ಬಲ್ಗೇರಿಯಾದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕದಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದಿದ್ದರು.



ವಿಶ್ವ ಚಾಂಪಿಯನ್‌ಶಿಪ್‌ನ ಒಂದೇ ಆವೃತ್ತಿಯಲ್ಲಿ ಭಾರತವು ಇದುವರೆಗೂ ಒಂದಕ್ಕಿಂತ ಹೆಚ್ಚು ಕಂಚಿನ ಪದಕಗಳನ್ನು ಗೆದ್ದಿಲ್ಲ ಆದರೆ ಪಂಗಲ್ ಮತ್ತು ಮನೀಶ್ ಕೌಶಿಕ್ (63 ಕೆಜಿ) ಸೆಮಿಫೈನಲ್ ಮಾಡುವ ಮೂಲಕ ಈಗ ನೂತನ ಸಾಧನೆ ಮಾಡಿದ್ದಾರೆ.


ಈ ಹಿಂದೆ ವಿಶ್ವ ವೇದಿಕೆಯಲ್ಲಿ ವಿಜೇಂದರ್ ಸಿಂಗ್ (2009), ವಿಕಾಸ್ ಕ್ರಿಶನ್ (2011), ಶಿವ ಥಾಪಾ (2015) ಮತ್ತು ಗೌರವ್ ಬಿಧುರಿ (2017) ಪದಕವನ್ನು ಗೆದ್ದಿದ್ದಾರೆ.