ನವದೆಹಲಿ: ಬರೋಬ್ಬರಿ ಇಂದಿಗೆ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ವಿಕೆಟ್ ಗಳನ್ನು ತೆಗೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದರು.



COMMERCIAL BREAK
SCROLL TO CONTINUE READING

ಪಾಕಿಸ್ತಾನದ ವಿರುದ್ದ ನಿರ್ಮಿಸಿದ ಈ ದಾಖಲೆ ಇಂದಿಗೂ ಕೂಡ ಕ್ರಿಕೆಟ್ ಪುಸ್ತಕದಲ್ಲಿ ಅಚ್ಚಳಿಯದೆ ದಾಖಲಾಗಿ ಉಳಿದಿದೆ. ದೆಹಲಿಯ ಫೀರೋಜ್ ಷಾ ಕೋಟ್ಲಾ ಮೈದಾನದಲ್ಲಿ ಟೆಸ್ಟ್ ವೊಂದರಲ್ಲಿ 10 ವಿಕೆಟ್ ಗಳಿಸುವ ಮೂಲಕ ಈ ದಾಖಲೆ ನಿರ್ಮಿಸಿದ ಎರಡನೇ ಬೌಲರ ಎನ್ನುವ ಖ್ಯಾತಿಗೆ ಕುಂಬ್ಳೆ ಪಾತ್ರರಾಗಿದ್ದರು.ಈ ಹಿಂದೆ ಇಂಗ್ಲೆಂಡ್ ತಂಡದ ಆಫ್ ಸ್ಪಿನ್ನರ್ ಜೀಂ ಲೇಕರ್ 1956 ರಲ್ಲಿ ಆಷ್ಟ್ರೆಲಿಯಾದ ವಿರುದ್ದ ಮ್ಯಾಂಚೆಸ್ಟರ್ ನಲ್ಲಿ 10 ವಿಕೆಟ್ ತೆಗೆದುಕೊಳ್ಳುವ ಮೂಲಕ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು.


ಈ 20 ವರ್ಷದ ಹಿಂದಿನ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅನಿಲ್ ಕುಂಬ್ಳೆ " ನನಗೆ ಇನ್ನು ನೆನಪಿದೆ ಪ್ರತಿ ವಿಕೆಟ್ ಕೂಡ ಹೇಗೆ ಬಂದಿವೆ ಎನ್ನುವುದು,ಇದು ನಿಜಕ್ಕೂ ನನಗೆ ವಿಶೇಷವಾದದ್ದು, ಅದನ್ನು ಮರೆಯಲಿ ಅಸಾಧ್ಯ, ಒಂದು ವೇಳೆ ನಾವು ಮರೆತರು ಕೂಡ ಜನರು ಇದರ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ" ಎಂದು ಅವರು ತಿಳಿಸಿದ್ದಾರೆ.