ಬೆಂಗಳೂರು: ಕೊರೊನಾವೈರಸ್  (Coronavirus) ವಿರುದ್ಧದ ಹೋರಾಟದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ (Anil kumble) ಕೂಡ ಭಾಗಿಯಾಗಿದ್ದಾರೆ. ಕುಂಬ್ಳೆ ಮಂಗಳವಾರ ಪ್ರಧಾನಿ ಪರಿಹಾರ ನಿಧಿ ಮತ್ತು ಕರ್ನಾಟಕ ರಾಜ್ಯ ಪರಿಹಾರ ನಿಧಿಗೆ ದೇಣಿಗೆ ನೀಡಿದರು. 


COMMERCIAL BREAK
SCROLL TO CONTINUE READING

"ಕೋವಿಡ್ -19 (Covid-19) ವಿರುದ್ದ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ನಾನು ಪಿಎಂ ರಿಲೀಫ್ ಫಂಡ್ ಮತ್ತು ಮುಖ್ಯಮಂತ್ರಿ (ಕರ್ನಾಟಕ) ಪರಿಹಾರ ನಿಧಿಗೆ ಕೊಡುಗೆ ನೀಡಿದ್ದೇನೆ. ದಯವಿಟ್ಟು ಮನೆಯಲ್ಲೇ ಇರಿ ಮತ್ತು ಸುರಕ್ಷಿತವಾಗಿರಿ" ಎಂದು ಕುಂಬ್ಳೆ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಆದರೆ, ಕುಂಬ್ಳೆ ಅವರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.



ಇದಕ್ಕೂ ಮೊದಲು ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ 80 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ರೋಹಿತ್ ಪ್ರಧಾನಿ ಪರಿಹಾರ ನಿಧಿ, ಮಹಾರಾಷ್ಟ್ರ ಸಿಎಂ ರಿಲೀಫ್ ಫಂಡ್, ಜೊಮಾಟೊ ಫೀಡಿಂಗ್ ಇಂಡಿಯಾ ಮತ್ತು Stray Dogsಗೆ ದೇಣಿಗೆ ನೀಡಿದ್ದಾರೆ. ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿಯನ್ನು ಟ್ಯಾಗ್ ಮಾಡಿದ ರೋಹಿತ್, "ನಾವು ನಮ್ಮ ದೇಶವನ್ನು ಮತ್ತೆ ಕಾಲ್ನಡಿಗೆಯಲ್ಲಿ ನೋಡಬೇಕೆಂದು ಬಯಸುತ್ತೇವೆ ಮತ್ತು ಅದು ನಮ್ಮ ಜವಾಬ್ದಾರಿಯಾಗಿದೆ. ನನ್ನ ಪರವಾಗಿ ನಾನು ಸಣ್ಣ ಕೊಡುಗೆ ನೀಡುತ್ತಿದ್ದೇನೆ. 45 ಲಕ್ಷ ಪ್ರಧಾನಿ ಪರಿಹಾರ ನಿಧಿ , ಮಹಾರಾಷ್ಟ್ರ ಸಿಎಂ ಮುಖ್ಯಮಂತ್ರಿ ಪರಿಹಾರ ನಿಧಿಯ 25 ಲಕ್ಷ, ಜೊಮಾಟೊ ಫೀಡಿಂಗ್ ಇಂಡಿಯಾಗೆ 5 ಲಕ್ಷ ರೂಪಾಯಿ ಮತ್ತು Stray Dogs ಕಲ್ಯಾಣ ನಿಧಿಗೆ 5 ಲಕ್ಷ ನೀಡುವುದಾಗಿ ತಿಳಿಸಿದ್ದರು. "


ಇನ್ಪುಟ್- IANS