Kohli: ಶನಿವಾರ, ಜೂನ್‌ 22ರಂದು ಭಾರತ(India vs Bangladesh) vs ಬಾಂಗ್ಲಾದೇಶದ ನಡುವಿನ ಹೈವೋಲ್ಟೇಜ್‌ ಪಂದ್ಯ ನಡೆಯಿತು. ಭಾರತ ತಂಡ ಎದುರಳಿ ತಂಡದ ಎದುರು ಭರ್ಜರಿ ಆಟವಾಡಿ ಸೆಮಿಫೈನಲ್‌ ಕನಸ್ಸಿಗೆ ಜೀವ ತುಂಬಿತು. ಮತ್ತೊಂದೆಡೆ ಕಿಂಗ್‌ ಕೊಹ್ಲಿ ಈ ಪಂದ್ಯದ ಮೂಲಕ ಹೊಸ ದಾಖಲೆ ಬರೆದರು.


COMMERCIAL BREAK
SCROLL TO CONTINUE READING

ಕಿಂಗ್‌ ಕೊಹ್ಲಿ(Kohli) ಸ್ಟಾರ್‌ ಆಟಗಾರರ ದಾಖಲೆಗಳನ್ನು ಉಡೀಸ್‌ ಮಾಡುತ್ತಾ, ಹಲವಾರು ದಾಖಲೆಗಳನ್ನು ಬರೆಯುತ್ತಲೇ ಇದ್ದಾರೆ. ಇದೀಗ ಶನಿವಾರ, ಜೂನ್‌ 22ರಂದು ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲೂ ಕೂಡ ಕಿಂಗ್‌ ಕೊಹ್ಲಿ ಹೊಸ ದಾಖಲೆಯೊಂದನ್ನ ಸೃಷ್ಟಿಸಿದ್ದಾರೆ.


ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆರಂಭಿಕ ಆಟಗಾರನಾಗಿ ಕ್ರೀಸ್‌ಗೆ ಎಂಟ್ರಿ ಕೊಟ್ಟಿದ್ದರು. ಎದುರಾಳಿ ಬೌಲರ್‌ಗಳ ಚೆಂಡಿಗೆ ಬ್ಯಾಟ್‌ ಬೀಸಿ 1 ಬೌಂಡರಿ ಹಾಗೂ 3 ಸಿಕ್ಸರ್‌ ಬಾರಿಸುವ ಮೂಲಕ 37 ರನ್‌ ಕಲೆಹಾಕಿ ತಂಝಿಮ್ ಹಸನ್ ಸಾಕಿಬ್‌ಗೆ ವಿಕೆಟ್‌ ಒಪ್ಪಿಸಿ ಫೀಲ್ಡ್‌ನಿಂದ ಹೊರ ನಡೆದರು.


ಇದನ್ನೂ ಓದಿ: IND vs BAN, T20 WC: ಬಾಂಗ್ಲಾದೇಶ ಮಣಿಸಿ ಸೆಮಿಫೈನಲ್‌ಗೆ ಟಿಕೆಟ್‌ ಬುಕ್‌ ಮಾಡಿದ ಟೀಂ ಇಂಡಿಯಾ!


ಇನ್ನೂ, ಈ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು ಕಡಿಮೆ ರನ್‌ ಆದರೂ 37 ರನ್‌ಗಳ ನೆರವಿನಿಂದ ಹೊಸ ದಾಖಲೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು. ಟಿ20 ಹಾಗೂ ಏಕದಿನ ವಿಶ್ವಕಪ್‌ನಲ್ಲಿ 3000 ರನ್‌ ಕಲೆಹಾಕಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕಿಂಗ್‌ ಕೊಹ್ಲಿ ಪಾತ್ರವಾದರು. 


ಟಿ20 ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ ಕಲೆಹಾಕಿರುವವರ ಪಟ್ಟಿಯಲ್ಲಿ ಇದೀಗ ಕಿಂಗ್‌ ಕೊಹ್ಲಿ ಹೆಸರು ಅಗ್ರಸ್ಥಾನದಲ್ಲಿದೆ, ಇನ್ನೂ 2637 ರನ್‌ಗಳ ಮೂಲಕ ರೋಹಿತ್‌ ಶರ್ಮ(Rohith Sharma) ಎರಡನೇ ಸ್ಥಾನದಲ್ಲಿದ್ದಾರೆ. 2502 ರನ್‌ಗಲೊಂದಿಗೆ  ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್(David Warner) ಮೂರನೇ ಸ್ಥಾನದಲ್ಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ