Anushka Sharma Virat Kohli age Gap: ಭಾರತದಲ್ಲಿ ಕ್ರಿಕೆಟಿಗರನ್ನು ದೇವರಂತೆ ಕಾಣಲಾಗುತ್ತದೆ ಎಂದರೆ ತಪ್ಪಾಗಲ್ಲ, ವೃತ್ತಿಪರರಿಂದ ವೈಯಕ್ತಿಕ ಜೀವನದವರೆಗೆ ಕ್ರಿಕೆಟಿಗನ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾಯತ್ತಿರುತ್ತಾರೆ. ಇಂದು ನಾವು ಅಂತಹದ್ದೇ ಒಂದು ವಿಚಾರದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ,


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾ ಅಲ್ಲ…! ಏಕದಿನ ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಹೆಸರಿಸಿದ ಆರ್ ಅಶ್ವಿನ್


ಕ್ರಿಕೆಟ್ ಲೋಕದ ದಿಗ್ಗಜರು ಕೂಡ ಒಂದಲ್ಲ ಒಂದು ಬಾರಿ ಪ್ರೀತಿಯ ಬಲೆಯಲ್ಲೇ ಬಿದ್ದವರು. ಅದರಲ್ಲೂ ಕೆಲವರಂತು ತಮಗಿಂತ ಹಿರಿ ವಯಸ್ಸಿನವರ ಜೊತೆ ಪ್ರೇಮಪಾಶಕ್ಕೆ ಸಿಲುಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾವಿಂದು ತಮಗಿಂತ ಹಿರಿವಯಸ್ಸಿನವರ ಜೊತೆ ವಿವಾಹವಾದ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.


ಭಾರತದ ಡ್ಯಾಶಿಂಗ್ ಆಲ್‌’ರೌಂಡರ್ ಅವರ ಹಾರ್ದಿಕ್ ಪಾಂಡ್ಯ, ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಗಿಂತ ಒಂದು ವರ್ಷ ಮತ್ತು ಏಳು ತಿಂಗಳು ಚಿಕ್ಕವರು. ನತಾಶ ಸರ್ಬಿಯಾದ ರೂಪದರ್ಶಿ ಮತ್ತು ನರ್ತಕಿ.


ಇನ್ನು, 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಕೂಡ ತಮಗಿಂತ ಆರು ವರ್ಷ ಹಿರಿಯರಾದ ಅಂಜಲಿಯವರನ್ನು ಮದುವೆಯಾಗಿದ್ದಾರೆ. ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ಅವರು ಮೇ 24, 1995 ರಂದು ವಿವಾಹವಾದರು.


ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಪ್ರಸಿದ್ಧ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾಗಿದ್ದಾರೆ, ಸಂಜನಾ ಬುಮ್ರಾಗಿಂತ ಎರಡು ವರ್ಷ ಮತ್ತು ಏಳು ತಿಂಗಳು ಹಿರಿಯರು.


ನಿಜವಾಗಿಯೂ ಸೊಕ್ಕಿನೆಂದು ನಾನು ಭಾವಿಸಿದೆವು ಆದ್ದರಿಂದ ನಾವು ಎಂದಿಗೂ ಮಾತನಾಡಲಿಲ್ಲ ”ಎಂದು ಬುಮ್ರಾ ಕಳೆದ ವರ್ಷ ಸ್ಕೈ ಸ್ಪೋರ್ಟ್ಸ್ ಸಂದರ್ಶನದಲ್ಲಿ ಕಾರ್ತಿಕ್‌ಗೆ ಹೇಳಿದ್ದರು.


ಭಾರತ ತಂಡದ ಮಾಜಿ ನಾಯಕ, ಡ್ಯಾಶಿಂಗ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ತನಗಿಂತ ಆರು ತಿಂಗಳು ಹಿರಿಯ ವಯಸ್ಸಿನ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಡಿಸೆಂಬರ್ 17, 2017 ರಂದು ಇಟಲಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸ್ಟಾರ್ ಜೋಡಿ ವಿವಾಹವಾದರು.


ಇದನ್ನೂ ಓದಿ: ಭಾರತದ ಜೆರ್ಸಿಯಲ್ಲಿ ‘ಪಾಕಿಸ್ತಾನ’ದ ಹೆಸರು! ಇತಿಹಾಸದಲ್ಲೇ ಮೊದಲು.. ಫೋಟೋ ವೈರಲ್


ಸ್ಟಾರ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ತನಗಿಂತ 10 ವರ್ಷ ದೊಡ್ಡವರಾಗಿದ್ದ ಏಶಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. ಆದರೆ ಈ ವಿಚ್ಛೇದನ ಪಡೆಯುವ ಹಂತಕ್ಕೆ ಬಂದು ನಿಂತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.