ಮುಂಬೈ: ಮುಂದಿನ ತಿಂಗಳು ಆರಂಭವಾಗಲಿರುವ ಶ್ರೀಲಂಕಾ ಪ್ರವಾಸಕ್ಕಾಗಿ ಸಚಿನ್ ತೆಂಡುಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಭಾರತ ಅಂಡರ್ -19 ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬಿಸಿಸಿಐ ಮಾಧ್ಯಮಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ಭಾರತ ತಂಡವು ಎರಡು ನಾಲ್ಕು ದಿನ  ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಭಾರತವು ಶ್ರೀಲಂಕಾ ವಿರುದ್ಧ ಆಡುವ ಎರಡು ನಾಲ್ಕು ದಿನಗಳ ಪಂದ್ಯಗಳಿಗೆ ಇವರನ್ನು ಆಯ್ಕೆ ಮಾಡಲಾಗಿದೆ.ಅರ್ಜುನ್ U-19 ಕ್ರಿಕೆಟಿಗರ ಗುಂಪಿನ ಸದಸ್ಯರಾಗಿ ವಲಯ ಕ್ರಿಕೆಟ್ ಅಕಾಡೆಮಿ(ZCA) ಶಿಬಿರದಲ್ಲಿ ಭಾಗವಹಿಸಿದ್ದರು ಅಲ್ಲದೆ ಉನಾದ ಪಂದ್ಯಗಳನ್ನು ಆಡಿದ್ದರು. ಮುಂದಿನ ತಿಂಗಳು ಭಾರತ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ. 


ಅರ್ಜುನ್ ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದ ಜಾಗತಿಕ ಟ್ವೆಂಟಿ 20 ಸರಣಿಯಲ್ಲಿ ಭಾಗವಹಿಸಿ ಬ್ರಾಡ್ಮನ್ ಓವಲ್ನಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದಿದ್ದಲ್ಲದೆ, 27 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ಆಷ್ಟ್ರೇಲಿಯಾದಲ್ಲಿನ ಮಾಧ್ಯಮಗಳಲ್ಲಿ ಮೆಚ್ಚಿಗಳಿಸಿದ್ದರು.


2 ನಾಲ್ಕು ದಿನದ ಆಟಗಳಿಗಾಗಿ ಭಾರತ U19 ತಂಡ: ಅನುಜ್ ರಾವತ್ (ಸಿ) (ಡಬ್ಲುಕೆ), ಅಥರ್ವ ಟಾಯ್ಡೆ (ವಿ.ಸಿ.ಎ), ದೇವ್ದದ್ ಪಡಿಕಲ್ (ಕೆಎಸ್ಸಿಎ), ಆರ್ಯನ್ ಜುಯಾಲ್ (ವಿಸಿ) (ಡಬ್ಲ್ಯುಕೆ) (ಯುಪಿಸಿಎ), ಯಶ್ ರಾಥೋಡ್ (ವಿಸಿಎ) ), ಆಯುಶ್ ಬಡೋನಿ (ಡಿಡಿಸಿಎ), ಸಮೀರ್ ಚೌಧರಿ (ಯುಪಿಸಿಎ), ಸಿದ್ಧಾರ್ಥ ದೇಸಾಯಿ (ಜಿಸಿಎ), ಹರ್ಷ ತ್ಯಾಗಿ (ಡಿಡಿಸಿಎ), ವೈಡಿ ಮಂಗವಾನಿ (ಎಂಹೆಚ್ಸಿಎ), ಅರ್ಜುನ್ ತೆಂಡೂಲ್ಕರ್ (ಎಂಸಿಎ), ನೆಹಲ್ ವಧೇರಾ (ಪಿಸಿಎ), ಆಕಾಶ್ ಪಾಂಡೆ (ಜಿಸಿಎ), ಮೋಹಿತ್ ಜಂಗ್ರಾ (ಯುಪಿಸಿಎ), ಪವನ್ ಷಾ (ಎಂಹೆಚ್ಸಿಎ).


ಏಕದಿನಕ್ಕೆ ಭಾರತ U19 ತಂಡ: ಆರ್ಯನ್ ಜುಯಾಲ್ (ಸಿ) (ಡಬ್ಲುಕೆ) (ಯುಪಿಸಿಎ), ಅನುಜ್ ರಾವತ್ (ಡಬ್ಲುಕೆ) (ಡಿ.ಡಿ.ಸಿ.ಎ), ದೇವದಾತ್ ಪಾಟೀಕಲ್ (ಕೆಎಸ್ಸಿಎ), ಅಥರ್ವ ಟಾಡೆ (ವಿಸಿಎ), ಯಶ್ ರಾಥೋಡ್ (ವಿಸಿಎ), ಆಯುಶ್ ಬಡೋನಿ ಡಿಡಿಸಿಎ), ಸಮೀರ್ ಚೌಧರಿ (ಯುಪಿಸಿಎ), ಸಿದ್ಧಾರ್ಥ್ ದೇಸಾಯಿ (ಜಿಸಿಎ), ಹರ್ಷ ತ್ಯಾಗಿ (ಡಿಡಿಸಿಎ), ವೈಡಿ ಮಂಗವಾನಿ (ಎಂಹೆಚ್ಸಿಎ), ಅಜಯ್ ದೇವಗೌಡ್ (ಎಚ್ವೈಡಿ), ವೈ. ಜೈಸ್ವಾಲ್ (ಎಂಸಿಎ), ಮೋಹಿತ್ ಜಂಗ್ರಾ (ಯುಪಿಸಿಎ), ಆಕಾಶ್ ಪಾಂಡೆ (ಜಿಸಿಎ), ಪವನ್ ಷಾ (ಎಂಹೆಚ್ಸಿಎ).