ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು `ಇದೇ` ಪ್ರಮುಖ ಕಾರಣ: ಆಶಿಶ್ ನೆಹ್ರಾ
Hardik Pandya: ಹೊಸ ಟಿ20ಐ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸದಿರುವುದು ನನಗೇನು ಆಶ್ಚರ್ಯವಿಲ್ಲ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.
Hardik Pandya: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡಕ್ಕೆ ಹೊಸ ನಾಯಕನ ಅಗತ್ಯವಿತ್ತು. ಈ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತಾದರೂ ಕೊನೆ ಕ್ಷಣದಲ್ಲಿ ಅವರು ನಾಯಕತ್ವದ ರೇಸ್‌ನಲ್ಲಿ ಹಿಂದೆ ಉಳಿದಿದ್ದಾರೆ. ಇದೀಗ ಸೂರ್ಯ ಕುಮಾರ್ ಯಾದವ್ ಅವರನ್ನು ಟಿ20 ತಂಡದ ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ವೇಗದ ಬೌಲರ್ ಮತ್ತು ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ, ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ಟಿ 20 ಐ ನಾಯಕರನ್ನಾಗಿ ನೇಮಿಸದಿರುವ ಭಾರತೀಯ ಮ್ಯಾನೇಜ್‌ಮೆಂಟ್‌ನ ನಿರ್ಧಾರದಿಂದ ನನಗೆ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ!
ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡದಿರುವುದಕ್ಕೆ ಗೌತಮ್ ಗಂಭೀರ್ ಕಾರಣ ಎಂದು ನಂಬಲಾಗಿದೆ. ಆದರೆ, ಹಾರ್ದಿಕ್ ಪಾಂಡ್ಯಗೆ (Hardik Pandya) ತಂಡದ ಕ್ಯಾಪ್ಟನ್ ಪಟ್ಟ ನೀಡದಿರಲು ಅವರ ಫಿಟ್‌ನೆಸ್ ಪ್ರಮುಖ ಕಾರಣ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ.
ಇದನ್ನೂ ಓದಿ- ಮುಸ್ಲಿಂ ಯುವತಿ ಮೇಲೆ ಲವ್.. ಧರ್ಮ ಅಡ್ಡಿಯಾದ್ರೂ ಪ್ರೀತಿಗಾಗಿ ಎರಡು ಬಾರಿ ಮದುವೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನೀತ!
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಆಶಿಶ್ ನೆಹ್ರಾ (Ashish Nehra), ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡದಿರುವುದು ನನಗೆ ಆಶ್ಚರ್ಯವಿಲ್ಲ. ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹೊಸ ಕೋಚ್ ಬಂದಿದ್ದು, ಈ ಬಗ್ಗೆ ಅವರ ಚಿಂತನೆ ವಿಭಿನ್ನವಾಗಿರುತ್ತದೆ. ಹೊಸ ತರಬೇತುದಾರ ತಂಡಕ್ಕೆ ಬಂದಾಗ, ಅವರು ಹೊಸ ಆಲೋಚನೆಯನ್ನು ತರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ (ಜುಲೈ 22) ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅಜಿತ್ ಅಗರ್ಕರ್ ಅವರ, "ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್‌ನತ್ತ ಗಮನ ಹರಿಸಬೇಕೆಂದು ತಂಡದ ಆಡಳಿತವು ಬಯಸಿದೆ" ಎಂಬ ಹೇಳಿಕೆಯನ್ನು ನೆಹ್ರಾ ಸ್ಮರಿಸಿದರು.
ಇದನ್ನೂ ಓದಿ- ವಿಚ್ಛೇದನದ ನಂತರ ಹಾರ್ದಿಕ್ ಆಸ್ತಿಯಿಂದ ನತಾಶಾಗೆ ಎಷ್ಟು ಜೀವನಾಂಶ ಸಿಗಲಿದೆ..?
ಹಾರ್ದಿಕ್ ತಂಡದ ಪ್ರಮುಖ ಆಟಗಾರ!
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ಅವರು ಪಂದ್ಯದಲ್ಲಿ ಎರಡು ಓವರ್‌ಗಳನ್ನು ಬೌಲ್ ಮಾಡಿದರೂ ಅಥವಾ ತಂಡದಲ್ಲಿ ಕೇವಲ ನಾಲ್ವರು ಬೌಲರ್‌ಗಳು ಇದ್ದರೂ, ಅವರ ಉಪಸ್ಥಿತಿಯು ತಂಡಕ್ಕೆ ವಿಭಿನ್ನ ಸಮತೋಲನವನ್ನು ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಆಶಿಶ್ ನೆಹ್ರಾ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.