Asia Cup 2022 : ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್‌ ಮ್ಯಾಚ್‌ ನಡೆಯುತ್ತಿದೆ ಎಂದರೆ ಅದು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತದೆ. ಕ್ರಿಕೆಟ್‌ ಮ್ಯಾಚ್‌ ಎನ್ನುವ ಬದಲು ಥೇಟ್‌ ಯುದ್ಧದಂತೆಯೇ ಭಾಸವಾಗಿಬಿಡುತ್ತದೆ. ಹೀಗೆ ಎರಡೂ ಟೀಂ ಇದೀಗ ಏಷ್ಯಾಕಪ್-2022 ಮೂಲಕ ಭರ್ಜರಿ ಸೆಣೆಸಾಟಕ್ಕೆ ಸಜ್ಜಾಗಿವೆ. ಆದರೆ ಈ ಹೊತ್ತಲ್ಲೇ ಶಾಕ್‌ ಕೊಟ್ಟಿದೆ ಪಾಕಿಸ್ತಾನ ತಂಡ. ಅದೇನೆಂದರೆ ಭಾರತದ ವಿರುದ್ಧ ಬ್ಲ್ಯಾಕ್ ಬ್ಯಾಂಡ್ ಧರಿಸಿ ಆಡಲು ಪಾಕಿಸ್ತಾನ ತಂಡ ತೀರ್ಮಾನಿಸಿದೆ.


COMMERCIAL BREAK
SCROLL TO CONTINUE READING

ಅರೆರೆ ಯಾಕಪ್ಪಾ ಭಾರತದ ವಿರುದ್ಧ ಬ್ಲ್ಯಾಕ್ ಬ್ಯಾಂಡ್ ಧರಿಸಿ ಆಡಲಿದ್ದಾರೆ ಪಾಕ್‌ ಆಟಗಾರರು ಅಂದ್ರಾ..? ಅಷ್ಟಕ್ಕೂ ಪಾಕಿಸ್ತಾನ ತಂಡದ ನಿರ್ಧಾರದ ಹಿಂದೆ ಕರುಣಾಜನಕ ಕಥೆ ಇದೆ. ಒಂದು ಕಡೆ ಪಾಕಿಸ್ತಾನದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಏರ್ಪಟ್ಟಿದ್ದರೆ, ಮತ್ತೊಂದು ಕಡೆ ಪ್ರಾಕೃತಿಕ ವಿಕೋಪ ಕೂಡ ಜನರನ್ನು ಬೀದಿಗೆ ಬೀಳುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, 40 ಲಕ್ಷಕ್ಕೂ ಹೆಚ್ಚು ಜನರು ಪರದಾಡುತ್ತಿದ್ದಾರೆ. ಈವರೆಗೂ 900ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.


ಇದನ್ನೂ ಓದಿ : Cheteshwar Pujara : ಪೂಜಾರ ಆಯ್ಕೆ ಮಾಡಿದ ಭಾರತದ playing 11 ಹೀಗಿದೆ, ಈ ದಿಗ್ಗಜ ಆಟಗಾರ ಔಟ್!


ಆಟಗಾರರ ಅಳಲು


ಬ್ಲ್ಯಾಕ್ ಬ್ಯಾಂಡ್ ಧರಿಸಿ ಆಡುವ ಕುರಿತು ಅಧಿಕೃತ ಹೇಳಿಕೆಯನ್ನೂ ಪಾಕ್‌ ಕ್ರಿಕೆಟ್‌ ತಂಡ ನೀಡಿದೆ. 'ಪಾಕಿಸ್ತಾನದಲ್ಲಿ ಎದುರಾಗಿರುವ ಭೀಕರ ಪ್ರವಾಹದ ಹಿನ್ನೆಲೆ, ಪ್ರವಾಹ ಪೀಡಿತರಿಗೆ ಒಗ್ಗಟ್ಟು ಮತ್ತು ಬೆಂಬಲವನ್ನು ವ್ಯಕ್ತಪಡಿಸಲು ಭಾರತದ ವಿರುದ್ಧದ ಪಂದ್ಯದಲ್ಲಿ ಬ್ಲ್ಯಾಕ್ ಬ್ಯಾಂಡ್ ಧರಿಸಿ ಆಡುತ್ತಿದ್ದೇವೆ.' ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ನೂರಾರು ನಾಗರಿಕರ ಸಾವು ಮತ್ತು ನೋವಿನ ಪರಿಸ್ಥಿತಿಗೆ ಪಾಕ್‌ ಆಟಗಾರರು ಈ ಮೂಲಕ ಹೆಗಲಾಗಲು ಮುಂದಾಗಿದ್ದಾರೆ.


ಬ್ಲ್ಯಾಕ್ ಬ್ಯಾಂಡ್ ಧರಿಸಿ ಪಾಕ್‌ ಆಟಗಾರರು ಮೈದಾನಕ್ಕೆ ಇಳಿಯೋದು ಪಕ್ಕಾ ಆಗಿದೆ. ಮತ್ತೊಂದ್ಕಡೆ ಪಾಕಿಸ್ತಾನದಲ್ಲಿ ಈಗಲೂ ಪ್ರವಾಹ ಪರಿಸ್ಥಿತಿ ಮತ್ತಷ್ಟು ‌ಬಿಗಡಾಯಿಸುತ್ತಿದೆ. 42 ಲಕ್ಷಕ್ಕೂ ಹೆಚ್ಚು ಜನರು ಬೀದಿಗೆ ಬಿದ್ದಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ 34 ಜನ ಪ್ರಾಣಕಳೆದುಕೊಂಡಿದ್ದಾರೆ. ಈವರೆಗೂ ಸಾವಿನ ಸಂಖ್ಯೆ 900ರ ಗಡಿ ದಾಟಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ.


ಇದನ್ನೂ ಓದಿ : India vs Pakistan : ಪಾಕ್ ಟೀಂ ನಡುಗಿಸಲು ಭಾರತದ ಈ 3 ಬೌಲರ್‌ಗಳು ಸಾಕು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.