ಇಂದಿನಿಂದ Asia Cup 2023 ಶುರು: ಆ ಒಂದು ಪಂದ್ಯ ಪಾಕಿಸ್ತಾನದಲ್ಲಿ ಆಡಬೇಕಿದೆ ಭಾರತ! ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
India vs Pakistan Asia Cup 2023: ಮಾರ್ಚ್ 2009 ರಲ್ಲಿ ಲಾಹೋರ್’ನಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಕ್ರಿಕೆಟ್ ಪ್ರಯಾಣವೂ ಕಷ್ಟಕರವಾಗಿತ್ತು. ಇದರ ನಂತರ, ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಹಕ್ಕನ್ನು ಕಳೆದುಕೊಂಡಿದ್ದಲ್ಲದೆ, ಪಾಕಿಸ್ತಾನವು 2011 ರಲ್ಲಿ ವಿಶ್ವಕಪ್’ನ ಜಂಟಿ ಆತಿಥ್ಯವನ್ನೂ ಕಳೆದುಕೊಂಡಿತು.
India vs Pakistan Asia Cup 2023: ಇಂದಿನಿಂದ ಏಷ್ಯಾಕಪ್ ಶುರುವಾಗಲಿದ್ದು, ಮೊದಲ ಪಂದ್ಯ ಮುಲ್ತಾನ್’ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಈ ಪಂದ್ಯದೊಂದಿಗೆ ಸುಮಾರು 15 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ.
ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ Playing 11 ಪ್ರಕಟ! ಈ ಬಾರಿ ನಾಲ್ವರು ವೇಗಿಗಳಿಗೆ ಸ್ಥಾನ
ಮಾರ್ಚ್ 2009 ರಲ್ಲಿ ಲಾಹೋರ್’ನಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಕ್ರಿಕೆಟ್ ಪ್ರಯಾಣವೂ ಕಷ್ಟಕರವಾಗಿತ್ತು. ಇದರ ನಂತರ, ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಹಕ್ಕನ್ನು ಕಳೆದುಕೊಂಡಿದ್ದಲ್ಲದೆ, ಪಾಕಿಸ್ತಾನವು 2011 ರಲ್ಲಿ ವಿಶ್ವಕಪ್’ನ ಜಂಟಿ ಆತಿಥ್ಯವನ್ನೂ ಕಳೆದುಕೊಂಡಿತು.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸದಸ್ಯ ರಾಷ್ಟ್ರಗಳು ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಭಯಪಡುತ್ತಿತ್ತು. ಇದರಿಂದಾಗಿ ದೇಶದ ತಂಡವು ಸುಮಾರು ಎಂಟು ವರ್ಷಗಳ ಕಾಲ ಉನ್ನತ ಮಟ್ಟದ ತಂಡಗಳ ವಿರುದ್ಧ ತವರಿನಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.
ಮೊದಲ ಬಾರಿಗೆ ಏಷ್ಯಾಕಪ್ ಪ್ರವೇಶ ಪಡೆದ ನೇಪಾಳ:
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿರುವ ಪಾಕಿಸ್ತಾನ, ಮುಲ್ತಾನ್ ನೆಲದಲ್ಲಿ ನೇಪಾಳ ವಿರುದ್ಧ ಪಂದ್ಯವನ್ನಾಡಲಿದೆ. ನೇಪಾಳ ತಂಡ ಮೊದಲ ಬಾರಿಗೆ ಏಷ್ಯಾ ಕಪ್ ಕ್ರಿಕೆಟ್ ಪ್ರವೇಶಿಸಿದೆ. ಇನ್ನು ನೇಪಾಳದ ಇಬ್ಬರು ಆಟಗಾರರಾದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ ಮತ್ತು ಆಲ್ ರೌಂಡರ್ ದೀಪೇಂದ್ರ ಸಿಂಗ್ ಐರೆ ಟಿ20 ಲೀಗ್’ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ನೇಪಾಳವು 2018 ರಲ್ಲಿ ODI ಸ್ಥಾನಮಾನವನ್ನು ಪಡೆದುಕೊಂಡಿತು ಮತ್ತು 50-ಓವರ್’ಗಳ ಸ್ವರೂಪದಲ್ಲಿ 15 ನೇ ಸ್ಥಾನದಲ್ಲಿದೆ, 2027 ರ ವಿಶ್ವಕಪ್’ನಲ್ಲಿ ಭಾಗವಹಿಸುವ ಅವರ ಕನಸನ್ನು ನನಸಾಗಿಸಲು ಮುಂದಿನ ಪ್ರತೀ ಪಂದ್ಯವನ್ನು ಗೆಲ್ಲಬೇಕು. ಇಲ್ಲವೇ ಉತ್ತಮ ಪ್ರದರ್ಶನ ತೋರಬೇಕಿದೆ. ನೇಪಾಳ ತಂಡ ವಾರದ ಹಿಂದೆ ಪಾಕಿಸ್ತಾನ ತಲುಪಿದೆ.
ಇನ್ನು ಗುಂಪು ಹಂತದ ಮೂರು ಪಂದ್ಯಗಳು ಪಾಕಿಸ್ತಾನದಲ್ಲಿ ಮತ್ತು ಉಳಿದವು ಶ್ರೀಲಂಕಾದಲ್ಲಿ ನಡೆಯಲಿವೆ. ಈ ಸುತ್ತಿನ ಪಂದ್ಯಗಳು ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ. ಇದಾದ ಬಳಿಕ ಸೂಪರ್-4 ವಿಭಾಗದ 1 ಪಂದ್ಯ ಪಾಕಿಸ್ತಾನದಲ್ಲಿ ಹಾಗೂ 3 ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಸುತ್ತು ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 15 ರವರೆಗೆ ಇರುತ್ತದೆ. ಅಂತಿಮ ಪಂದ್ಯ ಸೆಪ್ಟೆಂಬರ್ 17 ರಂದು ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಾಕಿಸ್ತಾನಕ್ಕೆ ಕಾಲಿಡುತ್ತಾ ಭಾರತ?
ಈ ಟೂರ್ನಿಯಲ್ಲಿ ಭಾರತದ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗುತ್ತಿದೆ. ಆದರೆ, ಸೂಪರ್ ಫೋರ್ ಹಂತದ ಮೊದಲ ಪಂದ್ಯ ಮಾತ್ರ ಪಾಕಿಸ್ತಾನಲ್ಲಿ ನಡೆಯುತ್ತಿದ್ದು, ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಬೇಕಾದ ಸಂದರ್ಭ ಬರಬಹುದು. ಆದರೆ ಬಿಸಿಸಿಐ ಇದಕ್ಕೆ ಪರ್ಯಾಯ ಮಾರ್ಗ ಹುಡುಕುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.
ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ
ದಿನಾಂಕ | ಗುಂಪು ಹಂತದ ಪಂದ್ಯಗಳು | ಸ್ಥಳ |
ಆಗಸ್ಟ್ 30 | ಪಾಕಿಸ್ತಾನ vs ನೇಪಾಳ | ಮುಲ್ತಾನ್ |
ಆಗಸ್ಟ್ 31 | ಬಾಂಗ್ಲಾದೇಶ vs ಶ್ರೀಲಂಕಾ | ಕ್ಯಾಂಡಿ |
ಸೆಪ್ಟೆಂಬರ್ 2 | ಪಾಕಿಸ್ತಾನ vs ಭಾರತ | ಕ್ಯಾಂಡಿ |
ಸೆಪ್ಟೆಂಬರ್ 3 | ಬಾಂಗ್ಲಾದೇಶ vs ಅಫ್ಘಾನಿಸ್ತಾನ | ಲಾಹೋರ್ |
ಸೆಪ್ಟೆಂಬರ್ 4 | ಭಾರತ vs ನೇಪಾಳ | ಕ್ಯಾಂಡಿ |
ಸೆಪ್ಟೆಂಬರ್ 5 | ಅಫ್ಘಾನಿಸ್ತಾನ vs ಶ್ರೀಲಂಕಾ | ಲಾಹೋರ್ |
ದಿನಾಂಕ | ಸೂಪರ್ ಫೋರ್ | ಸ್ಥಳ |
ಸೆಪ್ಟೆಂಬರ್ 6 | A1 vs B2 | ಲಾಹೋರ್ |
ಸೆಪ್ಟೆಂಬರ್ 9 | B1 vs B2 | ಕೊಲಂಬೋ |
ಸೆಪ್ಟೆಂಬರ್ 10 | A1 vs A2 | ಕೊಲಂಬೋ |
ಸೆಪ್ಟೆಂಬರ್ 12 | A2 vs B1 | ಕೊಲಂಬೋ |
ಸೆಪ್ಟೆಂಬರ್ 14 | A1 vs B1 | ಕೊಲಂಬೋ |
ಸೆಪ್ಟೆಂಬರ್ 15 | A2 vs B2 | ಕೊಲಂಬೋ |
ಏಷ್ಯಾಕಪ್ 2023 ಫೈನಲ್ ಪಂದ್ಯ
ಸೆಪ್ಟೆಂಬರ್ 17 ಸೂಪರ್ ಫೋರ್ - 1 vs 2ನೇ ಸ್ಥಾನ ಪಡೆದ ತಂಡಗಳು- ಕೊಲಂಬೋ
ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಬಾಲಿವುಡ್’ನ ಸ್ಟಾರ್ ನಟ-ನಟಿಯರು ಯಾರು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.