Team India Predicted Playing 11 for Asia Cup 2023: ಮುಂಬರುವ ಏಷ್ಯಾ ಕಪ್ 2023 ಗಾಗಿ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಇನ್ನು ಪಂದ್ಯಾವಳಿ ಪ್ರಾರಂಭವಾಗಲು ಕೇವಲ ಒಂದು ವಾರ ಮಾತ್ರ ಉಳಿದಿದ್ದು, ಏಷ್ಯಾಕಪ್ 16ನೇ ಆವೃತ್ತಿಯು ಆಗಸ್ಟ್ 30 ರಂದು ಪಾಕಿಸ್ತಾನ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನದೊಂದಿಗೆ ಕಾದಾಟ ಪ್ರಾರಂಭಿಸಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತದ ನಂ.4 ಸ್ಥಾನಕ್ಕೆ ಸಿಕ್ಕಾಯ್ತು ಯುವಿಯಂತೆ ಫಿನಿಶಿಂಗ್ ಮಾಡಬಲ್ಲ 20ರ ಹರೆಯದ ಸ್ಫೋಟಕ ಬ್ಯಾಟರ್!


ಇನ್ನು ಅತೀ ಹೆಚ್ಚು ಏಷ್ಯಾಕಪ್ ಗೆದ್ದ ರಾಷ್ಟ್ರಗಳ ಪೈಕಿ ಭಾರತವು ಏಳು ಪ್ರಶಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಶ್ರೀಲಂಕಾ ಆರರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ಎರಡರಲ್ಲಿ ಗೆದ್ದಿದೆ. ಹೀಗಾಗಿ, ಭಾರತವು ಟೂರ್ನಮೆಂಟ್‌’ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಭರವಸೆ ಇದೆ. ಇನ್ನು ಈ ಪಂದ್ಯಾವಳಿ ಮೂಲಕ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಶೀದ್ ಕೃಷ್ಣ ಅವರಂತಹ ಆಟಗಾರರು ತಂಡಕ್ಕೆ ಮರಳಿದ್ದಾರೆ. ಇದೀಗ 2023 ರ ಏಷ್ಯಾಕಪ್‌’ನಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೇಗಿದೆ ಎಂದು ತಿಳಿಯೋಣ.


ರೋಹಿತ್ ಶರ್ಮಾ (ನಾಯಕ): ಭಾರತದ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಲಿಯಲಿದ್ದಾರೆ. ಏಷ್ಯಾಕಪ್‌’ನಲ್ಲಿ ಸಕ್ರಿಯವಾಗಿರುವ ಆಟಗಾರರಲ್ಲಿ ರೋಹಿತ್ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಇವರಿಗೆ ಜೋಡಿಯಾಗಿ ಶುಭ್ಮನ್ ಗಿಲ್ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಿಲ್ ಕಳೆದ ವರ್ಷ ಸ್ಥಿರ ಪ್ರದರ್ಶನಗಳನ್ನು ನೀಡಿದ್ದು, ಭಾರತದ ನಿಯಮಿತ ಆರಂಭಿಕ ಆಟಗಾರನಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಂಡಿದ್ದಾರೆ.


ಇನ್ನು ಮೂರನೇ ಬ್ಯಾಟಿಂಗ್ ಸ್ಥಾನದಲ್ಲಿ ದಾಖಲೆ ವೀರ ವಿರಾಟ್ ಕೊಹ್ಲಿ ಕಣಕ್ಕಿಳಿಯಬಹುದು. ಭಾರತದ ಮಾಜಿ ನಾಯಕ 2022 ರಲ್ಲಿ ಕೊನೆಯ ಏಷ್ಯಾಕಪ್‌’ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಸದ್ಯ ಉತ್ತಮ ಫಾರ್ಮ್’ನಲ್ಲಿ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವ ನಿರೀಕ್ಷೆಯಿದೆ. ಕೆಲ ಸಮಯದಿಂದೀಚೆಗೆ ಗಾಯದ ಕಾರಣದಿಂದ ಕ್ರಿಕೆಟ್ ಚಟುವಟಿಕೆಯಿಂದ ದೂರವಿದ್ದರು. ಆದರೆ ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ.


ಗಾಯದ ಸಮಸ್ಯೆ ಕಾರಣ ಮೂರು ತಿಂಗಳಿನಿಂದ ಟೀಂ ಇಂಡಿಯಾದಿಂದ ಹೊರಗಿಳಿದಿದ್ದ ಕೆಎಲ್ ರಾಹುಲ್ ಈಗ ಕಂಬ್ಯಾಕ್ ಮಾಡಿದ್ದಾರೆ. ಇವರು 5 ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಇನ್ನೊಂದೆಡೆ ವಿಕೆಟ್ ಕೀಪಿಂಗ್ ಜವಾಬ್ದಾರಿಯೂ ಇವರ ಮೇಲಿದೆ.


ಆಲ್’ರೌಂಡರ್’ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕ್ರಮವಾಗಿ 6 ಮತ್ತು 7 ನೇ ಸ್ಥಾನದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.  ಇವರಿಬ್ಬರು ವಿಶ್ವದ ಅತ್ಯುತ್ತಮ ಆಲ್-ಫಾರ್ಮ್ ಆಲ್-ರೌಂಡರ್‌’ಗಳಾಗಿದ್ದು, ಟೀಂ ಇಂಡಿಯಾಗೆ ಗೆಲುವು ತಂದುಕೊಡುವ ಸಾಮಾರ್ಥ್ಯ ಹೊಂದಿದ್ದಾರೆ.


ಇನ್ನು ಶಾರ್ದೂಲ್ ಠಾಕೂರ್ ತಂಡದಲ್ಲಿನ ಮತ್ತೊಬ್ಬ ಬೌಲಿಂಗ್ ಆಲ್‌ರೌಂಡರ್ ಆಗಿದ್ದು, ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಇನ್ನು ಏಷ್ಯಾ ಕಪ್ 2023 ಕುಲದೀಪ್ ಯಾದವ್‌’ಗೆ ದೊಡ್ಡ ಪಂದ್ಯಾವಳಿಯಾಗಿದೆ. ಏಕೆಂದರೆ ಭಾರತ ತಂಡದಲ್ಲಿ ಚಾಹಲ್ ಮತ್ತು ಅಶ್ವಿನ್ ಅವರನ್ನು ಕೈಬಿಟ್ಟು ಇವರನ್ನು ಆಯ್ಕೆ ಮಾಡಲಾಗಿದೆ. ಹೀಗಿರುವಾಗ ತನ್ನನ್ನು ತಾನು ಸಾಬೀತುಪಡಿಸಿಕೊಂಡರೆ ಮಾತ್ರ ಮುಂಬರುವ ಪಂದ್ಯಗಳಲ್ಲಿ ಸ್ಥಾನ ಪಡೆದುಕೊಳ್ಳಬಹುದಾಗಿದೆ. ಕುಲದೀಪ್ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. 2018 ರ ಆವೃತ್ತಿಯಲ್ಲಿ ಆಡಿದ ಅವರು ಆರು ಪಂದ್ಯಗಳಲ್ಲಿ 10 ವಿಕೆಟ್’ಗಳನ್ನು ಪಡೆದಿದ್ದರು.


ಇನ್ನುಳಿದಂತೆ ಮೊಹಮ್ಮದ್ ಶಮಿ ಕೂಡ 2023 ರ ಏಷ್ಯಾ ಕಪ್‌ಗೆ ಮರಳಿದ್ದಾರೆ. 2014 ರ ಆವೃತ್ತಿಯಲ್ಲಿ ಆಡಿದ್ದ ಶಮಿ ಕೇವಲ ನಾಲ್ಕು ಪಂದ್ಯಗಳಲ್ಲಿ 25.25 ರ ಸರಾಸರಿಯಲ್ಲಿ 9 ವಿಕೆಟ್’ಗಳನ್ನು ಪಡೆದಿದ್ದರು. ಇನ್ನು ಜಸ್ಪ್ರೀತ್ ಬುಮ್ರಾ ಸುಮಾರು 11 ತಿಂಗಳ ಬಳಿಕ ಟೀಂ ಇಂಡಿಯಾಗೆ ಮರಳಿದ್ದಾರೆ. ಪ್ರಸ್ತುತ ಐರ್ಲೆಂಡ್ ಪ್ರವಾಸದಲ್ಲಿರುವ ಬುಮ್ರಾ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉತ್ತಮ ಯಾರ್ಕರ್‌ ಬೌಲಿಂಗ್ ಮಾಡುವಲ್ಲಿ ಬುಮ್ರಾ ಎತ್ತಿದ ಕೈ.


ಇದನ್ನೂ ಓದಿ: ಕೊಹ್ಲಿ, ರೋಹಿತ್ ಬಳಿಕ ಟೀಂ ಇಂಡಿಯಾದ ಸೂಪರ್’ಸ್ಟಾರ್ ಆಟಗಾರರು ಈ ಇಬ್ಬರು ಬ್ಯಾಟ್ಸ್’ಮನ್’ಗಳು


ಇನ್ನು ಈ ಪಂದ್ಯದಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.