Women's Emerging Asia Cup: ಏಷ್ಯಾಕಪ್ 2023 ಘೋಷಿಸಲಾಗಿದೆ. ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಎರಡೂ ಒಪ್ಪಿಕೊಂಡಿವೆ. ಈ ಟೂರ್ನಿ ಆಗಸ್ಟ್ 31ರಿಂದ ಆರಂಭವಾಗಲಿದೆ. ಈ ನಡುವೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಈ ಸುದ್ದಿ ಮಹಿಳಾ ಎಮರ್ಜಿಂಗ್ ಏಷ್ಯಾ ಕಪ್‌ ಗೆ ಸಂಬಂಧಿಸಿದ್ದಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಮುಖದಲ್ಲಿರುವ ಮೋಲ್‌ಗಳನ್ನು ತೆಗೆದುಹಾಕಲು ಇಲ್ಲಿವೆ ಸುಲಭ ಮಾರ್ಗಗಳು..!


ಹಾಂಗ್ ಕಾಂಗ್‌ನಲ್ಲಿ ನಡೆಯುತ್ತಿರುವ ಮಹಿಳಾ ಎಮರ್ಜಿಂಗ್ ಏಷ್ಯಾ ಕಪ್‌ ನಿಂದ ಒಂದು ದೊಡ್ಡ ಸುದ್ದಿ ಬಂದಿದೆ. ಭಾರತ-ಎ ಮತ್ತು ಪಾಕಿಸ್ತಾನ-ಎ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಶನಿವಾರ (ಜೂನ್ 17) ಮಧ್ಯಾಹ್ನ 1.30ಕ್ಕೆ ಮಿಷನ್ ರೋಡ್ ಮೈದಾನದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಒಂದೇ ಒಂದು ಚೆಂಡು ಎಸೆಯಲಾಗದೆ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಈ ಬಗ್ಗೆ ಸ್ವತಃ ಬಿಸಿಸಿಐ ಮಹಿಳೆಯರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.


ಈ ಟೂರ್ನಿಯಲ್ಲಿ ಭಾರತ ತಂಡ ಇದುವರೆಗೆ ಕೇವಲ 1 ಪಂದ್ಯವನ್ನಾಡಿದ್ದು, ಮಳೆಯಿಂದಾಗಿ ಎರಡು ಪಂದ್ಯಗಳು ನಡೆದಿಲ್ಲ. ಆತಿಥೇಯ ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 9 ವಿಕೆಟ್‌ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದೆ. ಇದಾದ ಬಳಿಕ ನೇಪಾಳ ವಿರುದ್ಧದ ಪಂದ್ಯ ಹಾಗೂ ಇದೀಗ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಳೆ ಸುರಿದಿದೆ. ಇದು ಕೊನೆಯ ಲೀಗ್ ಹಂತದ ಪಂದ್ಯ. 4 ಅಂಕಗಳೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.


ಇದನ್ನೂ ಓದಿ: ರಾಕಿ ಭಾಯ್‌ ʼರೇಂಜ್ʼ ಹೆಚ್ಚಿಸಿದ ಕಾರು..! ಯಶ್‌ ಮನೆಗೆ ಹೊಸ ಅತಿಥಿ ಆಗಮನ


ಈ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯ ಜೂನ್ 21ರಂದು ನಡೆಯಲಿದೆ. ಗ್ರೂಪ್-ಎಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಗ್ರ-2ರಲ್ಲಿದ್ದರೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು-ಬಿ ಗುಂಪಿನಲ್ಲಿ ಅಗ್ರ-2ಕ್ಕೆ ಲಗ್ಗೆ ಇಟ್ಟಿವೆ. ಈಗ ಭಾರತವು ಸೆಮಿಫೈನಲ್‌ ನಲ್ಲಿ ಗ್ರೂಪ್-ಬಿಯ ಎರಡನೇ ಶ್ರೇಯಾಂಕಿತ ತಂಡ ಶ್ರೀಲಂಕಾವನ್ನು ಎದುರಿಸಲಿದೆ, ಆದರೆ ಪಾಕಿಸ್ತಾನವು ಗ್ರೂಪ್-ಬಿಯ ನಂಬರ್-1 ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳು ಜೂನ್ 19 ರಂದು ನಡೆಯಲಿದೆ. ಎರಡೂ ಪಂದ್ಯಗಳಲ್ಲಿ ಗೆದ್ದ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಹೀಗಿರುವಾಗ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯುವ ಎಲ್ಲ ಸಾಧ್ಯತೆಗಳೂ ಇವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ