ನವದೆಹಲಿ: ಇಡೀ ದೇಶವೇ ಆಗಸ್ಟ್ 27ರಿಂದ ಪ್ರಾರಂಭವಾಗುವ ಏಷ್ಯಾಕಪ್‌ಗಾಗಿ ಕಾಯುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಸಮರವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ಪಂದ್ಯಾವಳಿಯ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆಗಸ್ಟ್ 28ರಂದು ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆದರೆ ಅದಕ್ಕೂ ಮುನ್ನವೇ ಪಾಕಿಸ್ತಾನ ತಂಡ ಪ್ರಬಲ ಹೆಜ್ಜೆ ಇಟ್ಟಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನ ತಂಡದ ಪ್ರಬಲ ನಡೆ


ಶನಿವಾರ ಆರಂಭವಾಗಲಿರುವ ಏಷ್ಯಾಕಪ್‌ನಲ್ಲಿ ತಂಡದ ಮುಖ್ಯ ಬೌಲಿಂಗ್ ಕೋಚ್ ಶಾನ್ ಟೈಟ್‌ಗೆ ನೆರವಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಲಾಹೋರ್‌ನಲ್ಲಿರುವ ತನ್ನ ರಾಷ್ಟ್ರೀಯ ಉನ್ನತ ಪ್ರದರ್ಶನ ಕೇಂದ್ರದಿಂದ ಬೌಲಿಂಗ್ ಕೋಚ್ ಅನ್ನು ಕಳುಹಿಸಿದೆ. ಮುಖ್ಯ ಕೋಚ್ ಸಕ್ಲೇನ್ ಮುಷ್ತಾಕ್ ಅವರ ಶಿಫಾರಸಿನ ಮೇರೆಗೆ ಉಮರ್ ರಶೀದ್ ಬುಧವಾರ ಪಾಕಿಸ್ತಾನ ತಂಡವನ್ನು ಸೇರಲು ತೆರಳಿದ್ದಾರೆ.


ಇದನ್ನೂ ಓದಿVirat Kohli : ಕಳಪೆ ಫಾರ್ಮ್‌ ಹಿಂದಿನ ಕಾರಣ ಬಿಚ್ಚಿಟ್ಟ ಕಿಂಗ್ ಕೊಹ್ಲಿ!


ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠವಾಗಲಿದೆ


ಪಿಸಿಬಿ ಮೂಲವೊಂದು ಹೇಳುವಂತೆ, ‘ಗಾಯಗೊಂಡು ಹೊರಗುಳಿದಿರುವ ಶಾಹೀನ್ ಶಾ ಆಫ್ರಿದಿ  ಸ್ಥಾನದಲ್ಲಿ ಯುವ ವೇಗಿ ಮೊಹಮ್ಮದ್ ಹಸ್ನೈನ್ ಸ್ಥಾನ ಪಡೆದಿದ್ದಾರೆ. ಅನುಮಾನಾಸ್ಪದ ಬೌಲಿಂಗ್ ಆರೋಪ ಹೊತ್ತಿದ್ದ ಮೊಹಮ್ಮದ್ ಹಸ್ನೈನ್ ಬೌಲಿಂಗ್ ಮೇಲೆ ಉಮರ್ ರಶೀದ್ ಕಣ್ಣಿಡಲಿದ್ದಾರೆ. ಇದಲ್ಲದೆ ಶಾನ್ ಟೈಟ್‌ ಮತ್ತು ಆಟಗಾರರ ನಡುವಿನ ಮಾತುಕತೆಯಲ್ಲಿ ಉಮರ್ ಪ್ರಮುಖ ಪಾತ್ರ ವಹಿಸಲಿದ್ದಾರೆ’ ಎಂದು ಹೇಳಲಾಗಿದೆ. ಒಂದು ವೇಳೆ ಹಸ್ನೈನ್ ಉತ್ತಮ ಬೌಲಿಂಗ್ ಮಾಡಿದ್ರೆ ಟೀಂ ಇಂಡಿಯಾಗೆ ಮಾರಕವಾಗಬಹುದು ಎನ್ನಲಾಗಿದೆ.   


ಟೀಂ ಇಂಡಿಯಾ 7 ಬಾರಿ ಪ್ರಶಸ್ತಿ ಗೆದ್ದಿದೆ


ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಹಣಾಹಣಿಯತ್ತ ಜನರ ಗಮನವಿದೆ. ಆದರೆ ಈ ಟೂರ್ನಿಯ ಇತಿಹಾಸದಲ್ಲಿ ಟೀಂ ಇಂಡಿಯಾವೇ ಹೆಚ್ಚು ಸಾಧನೆ ಮಾಡಿದೆ. ಟೀಂ ಇಂಡಿಯಾ ಇದುವರೆಗೆ 7 ಬಾರಿ ಏಷ್ಯಾಕಪ್ ಗೆದ್ದಿದೆ. ಅದೇ ರೀತಿ 5 ಬಾರಿ ಶ್ರೀಲಂಕಾ ಟ್ರೋಫಿ ಎತ್ತಿ ಹಿಡಿದುದ್ದು, 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ 2 ಬಾರಿ ಏಷ್ಯಾಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಇಲ್ಲಿಯವರೆಗೂ ಒಂದೇ ಒಂದು ಏಷ್ಯಾಕಪ್ ಟ್ರೋಫಿ ಗೆದ್ದಿಲ್ಲ. 


ಇದನ್ನೂ ಓದಿ: Asia Cup 2022 : ಟೀಂ ಇಂಡಿಯಾಗೆ ಹಂಗಾಮಿ 'ಹೆಡ್ ಕೋಚ್' ಆಗಿ ಲಕ್ಷ್ಮಣ್ ನೇಮಕ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.