ಜಕಾರ್ತ: 18 ನೇ ಏಷ್ಯನ್ ಗೇಮ್ಸ್ನ ಐದನೇ ದಿನ 15 ರ ಹರೆಯದ ಶರ್ದುಲ್ ವಿಹಾನ್ ಗುರುವಾರ (ಆಗಸ್ಟ್ 23) ಭಾರತದ ಪದಕದ ಬೇಟೆಯನ್ನು ಮುಂದುವರಿಸಿದರು. ತನ್ನ ಮೊದಲ ಏಷ್ಯನ್ ಕ್ರೀಡಾಕೂಟದಲ್ಲಿ, ಶರ್ದುಲ್ ವಿಹಾನ್ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಶಾರ್ದೂಲ್ 73 ಅಂಕಗಳೊಡನೆ ಬೆಳ್ಳಿ ಜಯಿಸಿದ್ದಾರೆ. ಇದಕ್ಕಿಂತ ಒಂದೇ ಅಂಕ ಹೆಚ್ಚು (74) ಗಳಿಸಿದ್ದ (ಕೊರಿಯಾದ 34 ರ ಹರೆಯದ ಶಿನ್ ಹ್ಯುನ್ವೂ ಚಿನ್ನದ ಪದಕ ಜಯಿಸಿದ್ದಾರೆ.


COMMERCIAL BREAK
SCROLL TO CONTINUE READING





ಇದಲ್ಲದೆ, ಐದನೇ ದಿನದ ಕ್ರೀಡಾಕೂಟದಲ್ಲಿ ಟೆನ್ನಿಸ್ ನಲ್ಲಿ ಎರಡನೇ ಪದಕ ಬಂದಿದ್ದು,  ಅಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಂಕಿತ ರೈನಾ ಅವರು ಕಂಚಿನ ಪದಕ ಪಡೆದರು. 


18 ಪದಕಗಳೊಂದಿಗೆ 10 ನೇ ಸ್ಥಾನದಲ್ಲಿರುವ ಭಾರತ ತನ್ನ ಪದಕಗಳ ಬೇಟೆಯನ್ನು ಏಷ್ಯನ್ ಕ್ರೀಡಾಕೂಟದ ಆರನೇ ದಿನವಾದ ಇಂದು(ಆಗಸ್ಟ್ 24) ಸಹ ಮುಂದುವರೆಸುವ ನಿರೀಕ್ಷೆಯಿದೆ.