ಏಷ್ಯನ್ ಗೇಮ್ಸ್ 2018: ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ
ಬ್ರಿಡ್ಜ್ ಸ್ಪರ್ಧೆಯಲ್ಲಿ 60 ವರ್ಷದ ಪ್ರಣಬ್ ಬರ್ಧನ್ ಮತ್ತು 56 ವರ್ಷದ ಶಿಭ್ನಾಥ್ ಸರ್ಕಾರ್ 384 ಅಂಕಗಳನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಜಕಾರ್ತ: ಇಂಡೋನೆಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬ್ರಿಡ್ಜ್ ಸ್ಪರ್ಧೆಯ ಪುರುಶರ ವಿಭಾಗದಲ್ಲಿ ಭಾರತ ಚಿನ್ನ ಗೆದ್ದುಕೊಂಡಿದೆ.
ಏಷ್ಯನ್ ಗೇಮ್ಸ್'ನ 14ನೇ ದಿನವಾದ ಇಂದು ನಡೆದ ಫೈನಲ್ ಸುತ್ತಿನ ಬ್ರಿಡ್ಜ್ ಸ್ಪರ್ಧೆಯಲ್ಲಿ 60 ವರ್ಷದ ಪ್ರಣಬ್ ಬರ್ಧನ್ ಮತ್ತು 56 ವರ್ಷದ ಶಿಭ್ನಾಥ್ ಸರ್ಕಾರ್ 384 ಅಂಕಗಳನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಇದೇ ಮೊದಲ ಬಾರಿಗೆ ಬ್ರಿಡ್ಜ್ ಸ್ಪರ್ಧೆಯನ್ನು ಏಷ್ಯನ್ ಗೇಮ್ಸ್'ನಲ್ಲಿ ಸೇರ್ಪಡೆಗೊಳಿಸಲಾಗಿದ್ದು ಭಾರತವನ್ನು 24 ಸದಸ್ಯರ ತಂಡ ಪ್ರತಿನಿಧಿಸುತ್ತಿದೆ.