ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮೊದಲ ಪದಕ ಗಳಿಸಿದ ಶೂಟರ್ಸ್
18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ನಲ್ಲಿ ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್ ಕಂಚಿನ ಪದಕ ಗಳಿಸಿದ್ದಾರೆ.
ಜಕರ್ತಾ: ಇಂಡೊನೇಷಿಯಾ ರಾಜಧಾನಿ ಜಕಾರ್ತಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ನಲ್ಲಿ ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್ ಕಂಚಿನ ಪದಕ ಗಳಿಸಿದ್ದಾರೆ.
ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಗಳಿಸಿದೆ. ಅವರು ಚೀನಾ ವಿರುದ್ಧ 9.7, 10.6, 9.7, 9.7 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ 429.9 ಅಂಕಗಳನ್ನು ಗಳಿಸುವ ಮೂಲಕ 3ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಆರಂಭದಲ್ಲಿಯೇ ಪದಕ ಬೇಟೆಗೆ ಮುಂದಾಗಿದೆ.
ಉಳಿದಂತೆ ಈ ಸ್ಪರ್ಧೆಯಲ್ಲಿ 494 ಅಂಕ ಪಡೆದ ಚೀನಾ-ತೈಪೆ ತಂಡ ಮೊದಲ ಸ್ಥಾನ ಪಡೆಯಿತು.