Asia Games 2023: ಏಷ್ಯನ್ ಗೇಮ್ಸ್ ಇಂದು ಚೀನಾದ ಹ್ಯಾಂಗ್‌ ಝೌನಲ್ಲಿ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ, ಸಂಜೆ 5.30 ಕ್ಕೆ, 80 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಹ್ಯಾಂಗ್‌ ಝೌ ಒಲಿಂಪಿಕ್ ಕೇಂದ್ರ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಉದ್ಘಾಟಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರಧಾನಿ ಮೋದಿ ಅವರಿಂದ ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಶಂಕು ಸ್ಥಾಪನೆ


ಕ್ಸಿ ಜಿನ್‌ಪಿಂಗ್ ಅವರಲ್ಲದೆ, ಸಿರಿಯಾದ ಅಧ್ಯಕ್ಷ ಅಲ್ ಅಸಾದ್, ಕಾಂಬೋಡಿಯಾದ ರಾಜ ಮತ್ತು ಕುವೈತ್‌’ನ ಕೌಂಟ್ ಪ್ರಿನ್ಸ್ ಕೂಡ ಉಪಸ್ಥಿತರಿರುತ್ತಾರೆ. ನೇಪಾಳ ಮತ್ತು ದಕ್ಷಿಣ ಕೊರಿಯಾದ ಪ್ರಧಾನ ಮಂತ್ರಿಗಳು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.


ಹ್ಯಾಂಗ್‌ ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌’ಗೆ ಚೀನಾ ಗ್ರೀನ್ ಗೇಮ್ಸ್ ಎಂದು ಹೆಸರಿಸಿದೆ ಮತ್ತು ಈ ಕಾರಣದಿಂದಾಗಿ, ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವು ಸಿಡಿಮದ್ದು ಬಳಸದೆ ಪೂರ್ಣಗೊಳ್ಳಲಿದೆ. ಇನ್ನು ಇದರ ಬದಲಿಗೆ ಡಿಜಿಟಲ್ ಪಟಾಕಿಗಳು ಕಾಣಸಿಗಲಿವೆ.


ಇನ್ನು 19 ನೇ ಏಷ್ಯನ್ ಗೇಮ್ಸ್‌’ನಲ್ಲಿ ಭಾರತದ 655 ಆಟಗಾರರು ಭಾಗವಹಿಸುತ್ತಿದ್ದಾರೆ.


ಇದನ್ನೂ ಓದಿ: ಈ ಭಾಗಗಳಲ್ಲಿ ಇನ್ನು 2 ದಿನ ಭರ್ಜರಿ ಮಳೆ: ವರುಣಾರ್ಭಟದ ಜೊತೆ ಗುಡುಗು ಸಹಿತ ಸುಳಿಗಾಳಿ ಬೀಸುವ ಭೀತಿ!


ಏಷ್ಯನ್ ಗೇಮ್ಸ್ 2023 ರ ಉದ್ಘಾಟನಾ ಸಮಾರಂಭವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ವೀಕ್ಷಿಸಬೇಕು?


ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭವನ್ನು ಸೋನಿ ಲೈವ್ (SONY LIVE) ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ವೀಕ್ಷಕರು Sony Sports Ten 2 SD & HD ಮತ್ತು Sony Sports Ten 3 SD & HD (ಹಿಂದಿ) ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ