Asian games 2023: ಏಷ್ಯನ್ ಗೇಮ್ಸ್ ನಲ್ಲಿ ಶತಕ ಬಾರಿಸಿ... ಐತಿಹಾಸಿಕ ದಾಖಲೆ ಸೃಷ್ಟಿಸಿದ ಭಾರತ!!
Asian games 2023 Team India: ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100 ಪದಕಗಳನ್ನು ಗೆದ್ದು ಅಭೂತಪೂರ್ವ ಐತಿಹಾಸಿಕ ದಾಖಲೆ ನಿರ್ಮಿಸಿದೆ.
Asian games 2023: ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಕ್ರೀಡಾಕೂಟದ ಆರಂಭದ ದಿನದಿಂದಲೂ ಭಾರತ ಪದಕ ಬೇಟೆಯಲ್ಲಿ ಮುಂಚೂಣಿಯಲ್ಲಿದೆ. Women's Individual Archery Compound Final ನಲ್ಲಿ ಭಾರತದ ಜ್ಯೋತಿ ಸುರೇಖಾ ಅವರು ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಗುರಿಯತ್ತ ನಿಖರ ಬಾಣಗಳನ್ನು ಹೊಡೆದು 149-145 ಅಂಕಗಳಿಸಿ ಚಿನ್ನದ ಪದಕ ಪಡೆದರು.
ನಡೆಯುತ್ತಿರುವ ಸರಣಿಯಲ್ಲಿ ಇದು ಜ್ಯೋತಿ ಸುರೇಖಾ ಅವರ ಮೂರನೇ ಚಿನ್ನದ ಪದಕವಾಗಿದ್ದು, ಇದಲ್ಲದೇ ಏಷ್ಯನ್ ಗೇಮ್ಸ್‌ನ ಆರ್ಚರಿಯಲ್ಲಿ ಮಹಿಳೆಯರ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.
ಪುರುಷರ ವೈಯಕ್ತಿಕ ವಿಭಾಗದ (Mens Individual Archery Compound) ಫೈನಲ್ ನಲ್ಲಿ ಓಜಸ್ ಪ್ರವೀಣ್ ಅವರು ಸಹ ಆಟಗಾರ ಅಭಿಷೇಕ್ ವರ್ಮಾ ಭಾರತದ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದು ಅಚ್ಚರಿ ಮೂಡಿಸಿದರು. ಇದಲ್ಲದೇ ಜ್ಯೋತಿ ಸುರೇಖಾ ಅವರಂತೆ ಓಜಸ್ ಪ್ರವೀಣ್ ಕೂಡ ಪುರುಷರ ತಂಡ ಮತ್ತು ಮಿಶ್ರ ತಂಡ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು.
ಇನ್ನು ಏಷ್ಯನ್ ಗೇಮ್ಸ್ ಹಾಕಿ ಫೈನಲ್‌ನಲ್ಲಿ ಜಪಾನ್ ಅನ್ನು ಸೋಲಿಸಿದ ಭಾರತ ಪುರುಷರ ತಂಡ ಚಿನ್ನದ ಪದಕ ಗೆದ್ದಿದೆ. ಬಹು ನಿರೀಕ್ಷಿತ ಪಂದ್ಯದಲ್ಲಿ ಜಪಾನ್ ಮೊದಲ ಕ್ವಾರ್ಟರ್ ನಲ್ಲಿ ಸವಾಲಿನ ಆಟ ಪ್ರದರ್ಶಿಸಿ ಗೋಲು ರಹಿತ ಡ್ರಾ ಸಾಧಿಸಿತು. ಆ ಬಳಿಕ ಆಕ್ರಮಣಕಾರಿ ಆಟ ತೀವ್ರಗೊಳಿಸಿದ ಭಾರತ ತಂಡ 5-1 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಭಾರತ 22ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತ ತಂಡ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಪಡೆದುಕೊಂಡಿತು.
ಇನ್ನು ಮಹಿಳೆಯರ ಕಬಡ್ಡಿ ಫೈನಲ್‌ನಲ್ಲಿ ಭಾರತ ತಂಡ ಚೈನೀಸ್ ತೈಪೆ ವಿರುದ್ಧ ಸೆಣಸಿದ ರೋಚಕ ಪಂದ್ಯದಲ್ಲಿ ಭಾರತ ತಂಡ 26-24 ಅಂಕಗಳಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಸದ್ಯ ಕಬಡ್ಡಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತ ಏಷ್ಯನ್ ಗೇಮ್ಸ್‌ನಲ್ಲಿ 100 ಪದಕಗಳ ಮೈಲುಗಲ್ಲನ್ನು ತಲುಪಿದೆ.
ಇದೀಗ ಭಾರತ 25 ಚಿನ್ನ, 35 ಬೆಳ್ಳಿ, 40 ಕಂಚು ಸೇರಿದಂತೆ 100 ಪದಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇದಕ್ಕೂ ಮೊದಲು ಜಕಾರ್ತದಲ್ಲಿ ನಡೆದ 2018ರ ಈವೆಂಟ್‌ನಲ್ಲಿ 70 ಪದಕಗಳು, 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚು ಭಾರತದ ದಾಖಲೆಯಾಗಿತ್ತು.
ಇದನ್ನೂ ಓದಿ-ತೆರೆಯಿತು 28ರ ಹರೆಯದ ಆಟಗಾರನ ಅದೃಷ್ಟದ ಬಾಗಿಲು..! ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಆಲ್’ರೌಂಡರ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ