Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೊದಲ ಬಾರಿಗೆ 100 ಪದಕಗಳ ಗಡಿ ಮುಟ್ಟಿದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಭಾರತ ಮಹಿಳಾ ಕಬಡ್ಡಿ ತಂಡ ತೈವಾನ್ ತಂಡವನ್ನು ಸೋಲಿಸಿ ಭಾರತಕ್ಕೆ 100ನೇ ಪದಕವನ್ನು ತಂದುಕೊಟ್ಟಿತು. ಇದರಲ್ಲಿ 25 ಚಿನ್ನ ಕೂಡ ಸೇರಿದೆ. ಇದಲ್ಲದೇ ಭಾರತ ಇದುವರೆಗೆ 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳನ್ನು ಗೆದ್ದಿದೆ. ರೋಚಕ ಫೈನಲ್‌ನಲ್ಲಿ ಮಹಿಳಾ ತಂಡ ಚೈನೀಸ್ ತೈಪೆ ತಂಡವನ್ನು 26-25 ಅಂಕಗಳಿಂದ ಸೋಲಿಸಿತು. ಇಂದು ಪುರುಷರ ಕಬಡ್ಡಿ ತಂಡವೂ ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿದೆ. ಇದಲ್ಲದೆ ಪುರುಷರ ಕ್ರಿಕೆಟ್ ಚಿನ್ನದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದಕ್ಕೂ ಮುನ್ನ ಮಹಿಳಾ ಕ್ರಿಕೆಟ್ ತಂಡ ಚಿನ್ನ ಗೆದ್ದುಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ನೆದರ್ಲ್ಯಾಂಡ್ ವಿರುದ್ಧ ಗೆದ್ದು ಬೀಗಿದ ಪಾಕ್: 81 ರನ್’ಗಳ ರೋಚಕ ಜಯ 


ಕಬಡ್ಡಿಯಲ್ಲಿ ಬಲಿಷ್ಠವಾಗಿರುವ ಭಾರತ ಏಷ್ಯನ್‌ ಗೇಮ್ಸ್‌ನಲ್ಲಿ ರೋಚಕ ಆಟವಾಡಿದೆ. ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ರೋಚಕ ಹಣಾಹಣಿ ನಡೆಯಿತು. ಉಭಯ ತಂಡಗಳ ನಡುವೆ ಗ್ರೂಪ್ ಲೀಗ್ ಹಂತದ ಪಂದ್ಯವು  34-34 ಅಂಕಗಳಿಂದ ಸಮಬಲದಲ್ಲಿ ಕೊನೆಗೊಂಡಿತು. ಹೀಗಾಗಿ ಫೈನಲ್ ಪಂದ್ಯವು ರೋಚಕವಾಗಿರಲಿದೆ ಎಂಬ ನಿರೀಕ್ಷೆ ಮೂಡಿತ್ತು. ಅದರಂತೆಯೇ ಭಾರತವು ಒಂದು ಅಂಕದಿಂದ ಇದೀಗ ಬಂಗಾರದ ಪದಕಕಕ್ಕೆ ಮುತ್ತಿಟ್ಟಿದೆ.


ಭಾರತ ಮಹಿಳಾ ಕಬಡ್ಡಿ ತಂಡ ಫೈನಲ್‌ನಲ್ಲಿ ತೈವಾನ್ ವಿರುದ್ಧ ಅಮೋಘ ಶುಭಾರಂಭ ಮಾಡಿತು. ವಿರಾಮದ ವೇಳೆಗೆ ಭಾರತ ತಂಡ 14-9 ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲೂ ಉತ್ತಮ ಪ್ರದರ್ಶನ ನೀಡಿ 26-25 ಅಂತರದಲ್ಲಿ ಪಂದ್ಯ ಗೆದ್ದು ಚಿನ್ನ ಗೆದ್ದರು. ಕೊನೆಯ ಕ್ಷಣದವರೆಗೂ ಉಭಯ ತಂಡಗಳ ನಡುವೆ ಕುತೂಹಲದ ಆಟ ಮುಂದುವರೆಯಿತು.  


ಇದನ್ನೂ ಓದಿ : ವಿರಾಟ್ ಅಂದ್ರೆ ಇಷ್ಟನಾ? ಇಷ್ಟ ಇಲ್ವಾ?... ಗೌತಮ್ ಗಂಭೀರ್ ಕೊಟ್ಟ ಉತ್ತರ ಏನು ಗೊತ್ತಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.