ಬರೇಲಿ: ಅಥ್ಲೆಟಿಕ್ಸ್ ಕೋಚ್ ನೊಬ್ಬ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.  


COMMERCIAL BREAK
SCROLL TO CONTINUE READING

ಸಹಿಬೆ ಅಲಂ ಎನ್ನುವ ಕೋಚ್ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಮೀರಾಗಂಜ್ ನ ಕ್ರೀಡಾಕೂಟದ ಸಂದರ್ಭದಲ್ಲಿ  ಬಲಾತ್ಕಾರ ಮಾಡಲು ಪ್ರಯತ್ನಿಸಿದ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಬರೇಲಿಯ ಪೋಲಿಸ್ ವರಿಷ್ಠಾಧಿಕಾರಿ ರೋಹಿತ್ ಸಾಜವಾನ್ ತಿಳಿಸಿದ್ದಾರೆ.


ಈ ಹಿಂದೆ ಕಳೆದ ತಿಂಗಳು ನೈನಿತಾಲ್ ನಲ್ಲಿ ಜರುಗಿದ ಮಾನ್ಸೂನ್ ಮ್ಯಾರಥಾನ್ ದಲ್ಲಿ ಕೂಡಾ ಇನ್ನೊಬ್ಬ ಮಹಿಳಾ ಕ್ರೀಡಾಪಟುವಿನ ಮೇಲೆ ಅತ್ಯಾಚಾರಗೈಯಲು ಈ ವ್ಯಕ್ತಿ ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ. ನೈನಿತಾಲ್ ನಿಂದ ಬಂದ ನಂತರ ಈ ಘಟನೆಯ ಕುರಿತಾಗಿ ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ ಆ ಮಹಿಳೆಯು ನಂತರ  ಪೋಸ್ಕೊ ಕಾಯ್ದೆ ಅಡಿಯಲ್ಲಿ ಆ ವ್ಯಕ್ತಿಯ ಮೇಲೆ  ಬರೇಲಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.