ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ ಶೇನ್‌ ವಾರ್ನ್‌ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದು, ಕ್ರಿಕೆಟ್‌ ಪ್ರೇಮಿಗಳಿಗೆ ಈ ಸುದ್ದಿ ಆಘಾತ ನೀಡಿದೆ. shane warne) ಅವರನ್ನು ಬದುಕಿಸಲು ಆಗಿಲ್ಲ ಎಂದು ಅಂತಾರಾಷ್ಟ್ರೀಯ ಕ್ರೀಡಾ ವಾಹಿನಿ ಸುದ್ದಿ ಪ್ರಕಟಿಸಿದೆ. ಶೇನ್‌ ವಾರ್ನ್‌ ಹೃದಯಾಘಾತಕ್ಕೆ ಬಲಿಯಾಗಿರಬಹುದು ಎಂದು ಅನುಮಾನಿಸಲಾಗಿದೆ. ಆದರೆ ಈವರೆಗೂ ಶೇನ್‌ ವಾರ್ನ್‌ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ.


ಪ್ರತಿ ಬೌಲರ್‌ಗೆ 5 ಓವರ್‌ ನಿಯಮವನ್ನು ಸೌರವ್ ಗಂಗೂಲಿ ಜಾರಿಗೆ ತರಲಿ-ಶೇನ್ ವಾರ್ನ್


COMMERCIAL BREAK
SCROLL TO CONTINUE READING

ಶೇನ್ ವಾರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್‌ ಆಗಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 708 ವಿಕೆಟ್‌ ಹಾಗೂ ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ ಪಡೆದು ಶೇನ್ ವಾರ್ನ್ ದಾಖಲೆ ನಿರ್ಮಿಸಿದ್ದರು. ಹಾಗೂ ಆಸ್ಟ್ರೇಲಿಯಾ ಸತತ 3 ಬಾರಿ ವಿಶ್ವಕಪ್‌ ಗೆಲ್ಲುವಲ್ಲಿಯೂ ವಾರ್ನ್‌ ಪಾತ್ರ ದೊಡ್ಡದಿತ್ತು.ಆದರೆ ದಿಢೀರ್‌  ಶೇನ್‌ ವಾರ್ನ್‌ ಸಾವಿನ ಸುದ್ದಿ ಕೇಳಿ ಕ್ರೀಡಾ ಜಗತ್ತು ತತ್ತರಿಸಿದೆ. ಈ ಕುರಿತು ತನಿಖೆ ಆರಂಭವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.