ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಮಾಜಿ ಆಸಿಸ್ ಆಟಗಾರ ಡೀನ್ ಜೋನ್ಸ್ ಹೊಗಳುತ್ತಾ ಅವರನ್ನು ಮೊನಾಲಿಸಾಗೆ ಹೋಲಿಕೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ವಿರಾಟ್ ಕೊಹ್ಲಿಯನ್ನು ಅವರು ಮೊನಾಲಿಸಾಗೆ ಹೋಲಿಕೆ ಮಾಡಲು ಕಾರಣವೇನು ಗೊತ್ತೇ? ಇಬ್ಬರ ನಡುವೆ ಯಾವುದೇ ರೀತಿಯ ತಪ್ಪು ಸಿಗದ ಕಾರಣ ಅವರನ್ನು ಮೊನಾಲಿಸಾಗೆ ಹೋಲಿಕೆ ಮಾಡಿದ್ದಾರೆ ಎನ್ನಲಾಗಿದೆ.


ಡೀನ್ ಜೋನ್ಸ್ ಸಿಡ್ನಿ ಮಾರ್ನಿಂಗ್ ಹೆರಾಲ್ಡ್  ನಲ್ಲಿ ಬರೆದ ಅಂಕಣದಲ್ಲಿ ಕೊಹ್ಲಿ ಮುಂಬರುವ ಟೆಸ್ಟ್ ಸರಣಿ ಆಸ್ಟ್ರೇಲಿಯಾ ಅತಿದೊಡ್ಡ ಸವಾಲನ್ನು ಹೊಂದಿದೆ.ಕೊಹ್ಲಿಯಿಂದಿಗೆ ಸ್ನೇಹದಿಂದಿರುವುದು ಆಸ್ಟ್ರೇಲಿಯಾಗೆ ಉತ್ತಮ ಎಂದು ಅವರು ತಿಳಿಸಿದ್ದಾರೆ.ಇನ್ನು ಮುಂದುವರೆದು ಕೊಹ್ಲಿಯಲ್ಲಿ ಯಾವುದೇ ಲೋಪದೋಷಗಳನ್ನು ಹುಡುಕುವುದೆಂದರೆ ಅದು ಮೊನಾಲಿಸಾಳಲ್ಲಿ ಲೋಪದೋಷಗಳನ್ನು ಹುಡುಕಿದಂತೆ,ಆದ್ದರಿಂದ ಕೊಹ್ಲಿಯ ಕವರ್ ಡ್ರೈವ್ ಯನ್ನು ಆಸಿಸ್ ಬೌಲರ್ ಗಳು ತಪ್ಪಿಸಬೇಕು ಮತ್ತು ಭಿನ್ನವಾಗಿ ಅವರಿಗೆ ಬೌಲಿಂಗ್ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. 


ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂಟು ಇನ್ನಿಂಗ್ಸ್ ಗಳಲ್ಲಿ ನಾಲ್ಕು ಶತಕಗಳನ್ನು ಗಳಿಸುವುದರ ಮೂಲಕ ಕೊಹ್ಲಿ ಅದ್ಬುತ ಪ್ರದರ್ಶನ ನೀಡಿದ್ದರು.ಅವರ ಅದ್ಬುತ ಕವರ್ ಡ್ರೈವ್ ಮತ್ತು ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟಿಂಗ್ ಏಕಸ್ವಾಮ್ಯವಾದದ್ದು ಎಂದು ಡೀನ್ ಜೋನ್ಸ್ ತಿಳಿಸಿದ್ದಾರೆ.