ಪರ್ತ್‌: ಪರ್ತ್‌ನಲ್ಲಿ ಮಂಗಳವಾರ (ಡಿಸೆಂಬರ್ 18) ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ನಲ್ಲಿ ಭಾರತ 146 ರನ್ ಗಳ ಹೀನಾಯ ಸೋಲು ಅನುಭವಿಸಿದೆ. ಆತಿಥೇಯ ಆಸ್ಟ್ರೇಲಿಯಾ 146 ರನ್ ಅಂತರದ ಗೆಲುವು ದಾಖಲಿಸಿದ್ದು, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ. 


COMMERCIAL BREAK
SCROLL TO CONTINUE READING

ಆಸಿಸ್ ನೀಡಿದ್ದ 287 ರನ್ ಗಳ ಗುರಿ ಬೆನ್ನಹತ್ತಿದ ನಾಲ್ಕನೇ ದಿನದಾಟದ ಅಂತ್ಯಕ್ಕೆ 112ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ 5 ನೇ ದಿನದಾಟದಲ್ಲಿ ಪೆವಿಲಿಯನ್‌ ಪರೇಡ್‌ ನಡೆಸಿ 140 ಕ್ಕೆ ಆಟ ಮುಗಿಸಿತು. ಕೇವಲ 140 ರನ್ ಗಳಿಗೆ ಆಲೌಟ್ ಆಗುವ ಮೂಲಕ 146 ರನ್ ಗಳ ಅಂತರದಲ್ಲಿ ಕಾಂಗರೂಗಳಿಗೆ ಶರಣಾಗಿದೆ. ಪಂದ್ಯದ 5 ನೇ ದಿನ ಕೊಹ್ಲಿ ಪಡೆಯನ್ನು ಕಟ್ಟಿಹಾಕಿದ ಆಸೀಸ್‌ ಬೌಲರ್‌ಗಳು ಗೆದ್ದು ಸಂಭ್ರಮಿಸಿದರು. ಮೂರನೇ ಟೆಸ್ಟ್ (ಬಾಕ್ಸಿಂಗ್ ಟೆಸ್ಟ್) ಡಿಸೆಂಬರ್ 26 ರಿಂದ ಎರಡು ತಂಡಗಳ ನಡುವೆ ಮೆಲ್ಬೋರ್ನ್ನಲ್ಲಿ ನಡೆಯಲಿದೆ.


ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 243 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಭಾರದ ಮೊದಲ ಇನ್ನಿಂಗ್ಸ್‌ನಲ್ಲಿ  283 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 140 ರನ್ ಗಳಿಸಿತ್ತು. ಭಾರತದ ಪರ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ 0, ಮುರಳಿ ವಿಜಯ್ 20, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 17, ಅಜಿಂಕ್ಯ ರಹಾನೆ 30, ಹನುಮ ವಿಹಾರಿ 28, ರಿಷಬ್ ಪಂತ್ 30 ರನ್ ನೊಂದಿಗೆ ವಿಕೆಟ್ ಒಪ್ಪಿಸಿದ್ದು ತಂಡ ಹೀನಾಯವಾಗಿ ಸೋಲಲು ಕಾರಣವಾಯಿತು.


ನಾಥನ್ ಲಿಯಾನ್ ಗೆ ಒಲಿದ 'ಮ್ಯಾನ್ ಆಫ್ ದಿ ಮ್ಯಾಚ್'
ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಬಳಿಸಿದ್ದ ನಾಥನ್ ಲಿಯಾನ್ ಒಟ್ಟು ಎಂದು ವಿಕೆಟ್ ಪಡೆಯುವ ಮೂಲಕ 'ಮ್ಯಾನ್ ಆಫ್ ದಿ ಮ್ಯಾಚ್' ಗೆ ಭಾಜನರಾದರು.