Australia Great batsman Archie Jackson: ವಿಶ್ವ ಕ್ರಿಕೆಟ್’ನಲ್ಲಿ ಅದೆಷ್ಟೋ ಮಂದಿ ದಿಗ್ಗಜರಿದ್ದಾರೆ. ಜೊತೆಗೆ ಲೆಕ್ಕವೇ ಇಲ್ಲದಷ್ಟು ದಾಖಲೆಗಳು ನಿರ್ಮಾಣವಾಗಿವೆ, ನಿರ್ಮಾಣವಾಗುತ್ತಿವೆ. ಇನ್ನು ಚಿಕ್ಕವಯಸ್ಸಿನಲ್ಲಿಯೇ ಕೆಲ ಕ್ರಿಕೆಟಿಗರು ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿ ಛಾಪು ಮೂಡಿಸಿದ್ದುಂಟು. ಆದರೆ ನಾವಿಂದು ಓರ್ವ ಕ್ರಿಕೆಟಿಗನ ಬಗ್ಗೆ ಮಾತನಾಡುತ್ತಿದ್ದು, ಆತ ತನ್ನ 19ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದ. ಆದರೆ ಪದಾರ್ಪಣೆ ಮಾಡಿದ 4 ವರ್ಷಗಳಲ್ಲಿಯೇ ಜಗತ್ತಿಗೆ ವಿದಾಯ ಹೇಳಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೇಪಾಳ ವಿರುದ್ಧದ ಹಣಾಹಣಿಗೆ ಟೀಂ ಇಂಡಿಯಾ Playing 11 ರೆಡಿ: 3 ಮ್ಯಾಚ್ ವಿನ್ನರ್ಸ್’ಗಿಲ್ಲ ಸ್ಥಾನ


ಆರ್ಚಿಬಾಲ್ಡ್ ಜಾಕ್ಸನ್, 5 ಸೆಪ್ಟೆಂಬರ್ 1909 ರಂದು ಸ್ಕಾಟ್ಲೆಂಡ್‌’ನ ಲಾನಾರ್ಕ್‌’ಷೈರ್‌’ನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಆರ್ಚಿಬಾಲ್ಡ್ ಅಲೆಕ್ಸಾಂಡರ್ ಜಾಕ್ಸನ್. ರೋಸೆಲ್ ಶಾಲೆಯಲ್ಲಿ ಓದಿದ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಹೆಸರು ಮಾಡಬೇಕೆಂದು ಆಲೋಚಿಸಿ, ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟು, ಕಡೆಗೂ ತನ್ನ 19 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ಆರ್ಚಿ ಜಾಕ್ಸನ್ 1 ಫೆಬ್ರವರಿ 1929 ರಂದು ಅಡಿಲೇಡ್‌’ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌’ಗೆ ಪಾದಾರ್ಪಣೆ ಮಾಡಿದರು.


ಮೊದಲ ಪಂದ್ಯದಲ್ಲಿ ಶತಕ:


ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆರ್ಚಿ ಜಾಕ್ಸನ್ ಶತಕ ಬಾರಿಸಿದ್ದರು. ಬಿಲ್ ವುಡ್‌’ಫುಲ್ ಅವರೊಂದಿಗೆ ಓಪನಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡ ಅವರು 164 ರನ್‌’ಗಳ ಇನ್ನಿಂಗ್ಸ್ ಆಡಿದರು. ಈ ಅವಧಿಯಲ್ಲಿ ಜಾಕ್ಸನ್ 331 ಎಸೆತಗಳನ್ನು ಎದುರಿಸಿ 15 ಬೌಂಡರಿಗಳನ್ನು ಬಾರಿಸಿದ್ದರು. ಆದರೆ ಈ ಪಂದ್ಯವನ್ನು ಇಂಗ್ಲೆಂಡ್ 12 ರನ್‌’ಗಳಿಂದ ಗೆದ್ದುಕೊಂಡಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್’ನಲ್ಲಿ 334 ರನ್ ಗಳಿಸಿತ್ತು. ಜಾಕ್ಸನ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ 369 ರನ್ ಸೇರಿಸಿತು.


23ನೇ ವಯಸ್ಸಿನಲ್ಲಿ ಕೊನೆಯುಸಿರು:


ಜಾಕ್ಸನ್ ತಮ್ಮ ವೃತ್ತಿಜೀವನದಲ್ಲಿ ಕೇವಲ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಒಂದು ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿ 474 ರನ್ ಗಳಿಸಿದ್ದರು. ಜಾಕ್ಸನ್ ಬದುಕಿದ್ದರೆ, ಅವರು ತಮ್ಮ ಹೆಸರಿನಲ್ಲಿ ಅನೇಕ ಕ್ರಿಕೆಟ್ ದಾಖಲೆಗಳನ್ನು ಬರೆಯುತ್ತಿದ್ದರೇನೋ… ಆದರೆ ಈ ತಾರೆ ಕೇವಲ 23 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅವರ ಸಾವಿಗೆ ಟಿಬಿ ಕಾರಣ ಎನ್ನಲಾಗಿದೆ. 16 ಫೆಬ್ರವರಿ 1933 ರಂದು ಕ್ವೀನ್ಸ್‌ಲ್ಯಾಂಡ್‌’ನಲ್ಲಿ ಜ್ಯಾಕ್ಸನ್ ಕೊನೆಯುಸಿರೆಳೆದರು.


ಇದನ್ನೂ ಓದಿ: ಕ್ರಿಕೆಟ್ ಶಿಶು ನೇಪಾಳಕ್ಕೆ ಭಾರತ ಸವಾಲ್: ಪಂದ್ಯ ರದ್ದಾದರೆ ಸೂಪರ್ 4 ಪ್ರವೇಶಿಸುವ ತಂಡ ಯಾವುದು?


ಬ್ರಾಡ್‌ಮನ್ ಜೊತೆಯೂ ಆಡಿದ್ದ ಜಾಕ್ಸನ್:


ಆರ್ಚಿ ಜಾಕ್ಸನ್ ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿಯದಿದ್ದರೂ, ಈ ಸಮಯದಲ್ಲಿ ಅವರು ಡಾನ್ ಬ್ರಾಡ್ಮನ್ ಅವರಂತಹ ದಂತಕಥೆಯೊಂದಿಗೆ ಆಡುವ ಮತ್ತು 243 ರನ್’ಗಳ ಜೊತೆಯಾಟವನ್ನು ಆಡಿದ್ದರು. ಈ ಪಂದ್ಯವನ್ನು 1930 ರಲ್ಲಿ ಲಂಡನ್‌’ನ ಓವಲ್ ಮೈದಾನದಲ್ಲಿ ಆಡಲಾಯಿತು. ಆರ್ಚಿ 73 ರನ್ ಗಳಿಸಿದರೆ, ಬ್ರಾಡ್ಮನ್ 232 ರನ್ ಗಳಿಸಿದರು. ಮೊದಲ ಇನಿಂಗ್ಸ್‌’ನಲ್ಲಿ ಆಸ್ಟ್ರೇಲಿಯಾ 695 ರನ್‌’ಗಳ ಬೃಹತ್ ಸ್ಕೋರ್ ಗಳಿಸಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ