Ricky Ponting statement about Harry Brook: ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಪ್ರಸ್ತುತ ಕಾಲದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಆಸ್ಟ್ರೇಲಿಯಾದ ದಂತಕಥೆ ರಿಕಿ ಪಾಂಟಿಂಗ್ ಬಣ್ಣಿಸಿದ್ದಾರೆ. "ವಿಶೇಷವಾಗಿ ವಿದೇಶಿ ನೆಲದಲ್ಲಿ ಬ್ರೂಕ್ ಅವರ ಪ್ರದರ್ಶನ ಅದ್ಭುತವಾಗಿದೆ ಮತ್ತು ಅವರ ಬ್ಯಾಟಿಂಗ್ ವೀಕ್ಷಿಸಲು ಯೋಗ್ಯವಾಗಿದೆ" ಎಂದು ಪಾಂಟಿಂಗ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಬ್ಲಡ್‌ ಶುಗರ್‌ ನಾರ್ಮಲ್‌ ಆಗಲು ಈ ಆಹಾರಗಳನ್ನ ಪ್ರತಿದಿನವೂ ಸೇವಿಸಿರಿ!!


ಐಸಿಸಿ ರಿವ್ಯೂನಲ್ಲಿ ಮಾತನಾಡಿದ ರಿಕಿ ಪಾಂಟಿಂಗ್, "ಹೌದು, ಅವರು (ಹ್ಯಾರಿ ಬ್ರೂಕ್) ಪ್ರಸ್ತುತ ಕಾಲದ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್.ಅದ್ಭುತವಾಗಿ ಆಡುತ್ತಿದ್ದಾರೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರ ಹೆಚ್ಚಿನ ಪ್ರದರ್ಶನಗಳು ವಿದೇಶಿ ನೆಲದಲ್ಲಿಯೇ ಉತ್ತಮವಾಗಿದೆ. ಬ್ರೂಕ್ ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8-9 ಶತಕಗಳನ್ನು ಗಳಿಸಿದ್ದಾರೆ. ಅದರಲ್ಲಿ ವಿದೇಶದಲ್ಲಿ 7 ಶತಕಗಳನ್ನು ಗಳಿಸಿದ್ದಾರೆ. ಅವರ ಕ್ಲಾಸ್, ರನ್ ಗಳಿಸುವ ವೇಗ ಮತ್ತು ಹೊಸ ಇಂಗ್ಲೆಂಡ್ ಸೆಟಪ್ ಅಡಿಯಲ್ಲಿ ಆಡುವ ಶೈಲಿಯನ್ನು ವೀಕ್ಷಿಸಲು ಯೋಗ್ಯವಾಗಿದೆ" ಎಂದು ಕೊಂಡಾಡಿದ್ದಾರೆ.


"ನಾನು ಅವರನ್ನು ಕಳೆದ ವರ್ಷ IPL ಹರಾಜಿನಲ್ಲಿ ಆಯ್ಕೆ ಮಾಡಿದ್ದೇನೆ. ಅದಕ್ಕೆ ಕಾರಣ, ಬ್ರೂಕ್‌ ತಲೆಮಾರಿನ ಆಟಗಾರ ಎಂದು ನಾನು ಭಾವಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ತುಳಸಿ ಗಿಡಕ್ಕೆ ಹಾಕುವ ನೀರಿಗೆ ಇದನ್ನು ಬೆರೆಸಿದರೆ ಸಾಕ್ಷಾತ್‌ ಮಹಾಲಕ್ಷ್ಮೀಯೇ ಬಲಗಾಲಿಟ್ಟು ಮನೆ ಪ್ರವೇಶಿಸದಂತೆ! ಶುಕ್ರದೆಸೆ ಬೆನ್ನೇರಿ ಸಂಪತ್ತಿನ ನಿಧಿಯೇ ತುಂಬಿಬರುವುದು


25 ವರ್ಷದ ಹ್ಯಾರಿ ಬ್ರೂಕ್ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಶತಕ ಮತ್ತು ಒಂದು ಅರ್ಧ ಶತಕ ಗಳಿಸಿದ್ದಾರೆ. ಕ್ರೈಸ್ಟ್‌ ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬ್ರೂಕ್ 171 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಈ ಮೂಲಕ ಇಂಗ್ಲೆಂಡ್‌ಗೆ ಎಂಟು ವಿಕೆಟ್‌ಗಳ ಜಯವನ್ನು ತಂದುಕೊಟ್ಟಿದ್ದರು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.