ನವದೆಹಲಿ: ಬ್ರಿಸ್ಬೇನ್‍ನ ಗಬ್ಬಾದಲ್ಲಿ ಮಂಗಳವಾರ ನಡೆದ ಮಹತ್ವದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ 20 ರನ್‍ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್‍ಗಳ ಸವಾಲಿನ ಮೊತ್ತ ಪೇರಿಸಿತು.


COMMERCIAL BREAK
SCROLL TO CONTINUE READING

ಇಂಗ್ಲೆಂಡ್ ಪರ ಜೋಸ್ ಬಟ್ಲರ್(73) ಮತ್ತು ಅಲೆಕ್ಸ್ ಹೇಲ್ಸ್(52) ಭರ್ಜರಿ ಅರ್ಧಶತಕ ಬಾರಿಸಿದ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ಲಿಯಾಮ್ ಲಿವಿಂಗ್ಸ್ಟೋನ್(20) ರನ್‍ಗಳ ಕಾಣಿಕೆ ನೀಡಿದರು. ಬೃಹತ್ ಮೊತ್ತವನ್ನು ಚೇಸಿಂಗ್ ಮಾಡಿದ ನ್ಯೂಜಿಲ್ಯಾಂಡ್ ಆರಂಭಿಕ ಆಘಾತ ಅನುಭವಿಸಿತು. 28 ರನ್ ಆಗುವಷ್ಟರಲ್ಲಿ ಪ್ರಮುಖ 2 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.


“ಪಾಕ್ ಹೊರಗುಳಿದಿದ್ದು ಜಿಂಬಾಬ್ವೆ ವಿರುದ್ಧದ ಸೋಲಿನಿಂದ, ಭಾರತ ಅದಕ್ಕೆ ಕಾರಣವಲ್ಲ”


ಬಳಿಕ ಬಂದ ನಾಯಕ ಕೇನ್ ವಿಲಿಯಮ್ಸನ್(40) ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್(62) ಏಕಾಂಗಿ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಪರಿಣಾಮ ಕೀವಿಸ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು.


ಆಸೀಸ್ ಸೆಮಿಫೈನಲ್ ಹಾದಿ ಕಠಿಣ!


ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಸೀಸ್ ಮಣಿಸಿದ ಆಂಗ್ಲರು(NRR +0.547) ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಈ ಪಂದ್ಯ ಸೋತರು ನೆಟ್ ರನ್‍ರೇಟ್ ಆಧಾರದ ಮೇಲೆ ನ್ಯೂಜಿಲ್ಯಾಂಡ್(NRR +2.233) ಅಗ್ರಸ್ಥಾನ ಕಾಪಾಡಿಕೊಂಡಿದೆ. ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಡಿರುವ 4 ಪಂದ್ಯಗಳಲ್ಲಿ ತಲಾ 2 ಗೆಲುವು ಸಾಧಿಸಿದ್ದು, ರನ್‍ರೇಟ್ ಆಧಾರದಲ್ಲಿ ಟಾಪ್ 3ಯಲ್ಲಿವೆ. ಆದರೆ ಆಸೀಸ್ ತಂಡದ ರನ್‍ರೇಟ್‍ (- 0.304) ಕಡಿಮೆ ಇದೆ.


ಇದನ್ನೂ ಓದಿ: IND vs BAN: ಭಾರತ-ಬಾಂಗ್ಲಾದೇಶ ಪಂದ್ಯಕ್ಕೂ ಮುನ್ನ ಸಂಚಲನ ಸೃಷ್ಟಿಸಿದ ಶಕೀಬ್ ಅಲ್ ಹಸನ್ ಹೇಳಿಕೆ!


ಹೀಗಾಗಿ ಕಾಂಗರೂ ಪಡೆ ಮುಂದಿನ ಪಂದ್ಯದಲ್ಲಿ ಹೆಚ್ಚು ರನ್‍ರೇಟ್ ಅಂತರದಲ್ಲಿ ಗೆಲ್ಲಬೇಕು. ಅದೇ ರೀತಿ ನ್ಯೂಜಿಲ್ಯಾಂಡ್ ಸಹ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಮಳೆ ಬಂದು ಆಸ್ಟ್ರೇಲಿಯಾ ತಂಡದ ಕೊನೆಯ ಪಂದ್ಯ ರದ್ದಾದರೆ ತಂಡ ಟೂರ್ನಿಯಿಂದಲೇ ನಿರ್ಗಮಿಸಲಿದೆ. ಐರ್ಲೆಂಡ್ ಮೇಲೆ ನ್ಯೂಜಿಲ್ಯಾಂಡ್ ಗೆಲ್ಲಬೇಕು, ಶ್ರೀಲಂಕಾ ಮೇಲೆ ಇಂಗ್ಲೆಂಡ್ ಗೆಲ್ಲಬೇಕು, ಅದೇ ರೀತಿ  ಅಫ್ಘಾನಿಸ್ತಾನದ ಮೇಲೆ ಆಸ್ಟ್ರೇಲಿಯಾ ದೊಡ್ಡ ಮೊತ್ತದಿಂದ ಗೆಲ್ಲಬೇಕು. ಒಟ್ಟಿನಲ್ಲಿ 4 ಬಲಿಷ್ಠ ತಂಡಗಳ ಪೈಕಿ 2 ತಂಡಗಳು ಹೊರಬೀಳಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.