Rohit Sharma Statement: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ. ಆರಂಭಿಕ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮೂರನೇ ದಿನವೇ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ 263 ರನ್‌ಗಳಿಗೆ ಆಲೌಟ್ ಆದ ನಂತರ ಭಾರತ 262 ರನ್ ಗಳಿಸಿತು. ಇದಾದ ಬಳಿಕ ಭಾರತ ತಂಡ ಆಸ್ಟ್ರೇಲಿಯದ ಎರಡನೇ ಇನ್ನಿಂಗ್ಸ್ ಅನ್ನು 113 ರನ್‌ಗಳಿಗೆ ಕಟ್ಟಿ ಹಾಕಿತು. ನಂತರ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs AUS : ಅಶ್ವಿನ್-ಜಡೇಜಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ಟೀಂ ಇಂಡಿಯಾಗೆ 6 ವಿಕೆಟ್‌ಗಳ ಜಯ!


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲ ದಿನ 263 ರನ್ ಗಳಿಸಿದರು. ಎರಡನೇ ದಿನ ಭಾರತ ತಂಡ 262 ರನ್ ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ರನ್‌ಗಳ ಮುನ್ನಡೆ ಪಡೆದು ಈ ಇನ್ನಿಂಗ್ಸ್‌ನಲ್ಲಿ 113 ರನ್ ಗಳಿಸಿತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಗೆಲುವಿಗೆ ಕೇವಲ 115 ರನ್‌ಗಳ ಅಗತ್ಯವಿತ್ತು. ಈ ಗುರಿಯನ್ನು ಟೀಂ ಇಂಡಿಯಾ ಕೇವಲ 4 ವಿಕೆಟ್ ನಷ್ಟದಲ್ಲಿ ಸಾಧಿಸಿತು. ಅನುಭವಿ ಚೇತೇಶ್ವರ ಪೂಜಾರ 31 ರನ್ ಹಾಗೂ ಶ್ರೀಕರ್ ಭರತ್ 23 ರನ್ ಗಳಿಸಿ ಅಜೇಯರಾಗಿ ಮರಳಿದರು. ಪಂದ್ಯದಲ್ಲಿ ಒಟ್ಟು 10 ವಿಕೆಟ್ ಹಾಗೂ 26 ರನ್ ಗಳಿಸಿದ ಜಡೇಜಾ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು.


ಗೆಲುವಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, “ನಮಗೆ ಉತ್ತಮ ಫಲಿತಾಂಶ ಬಂದಿದೆ. ಹಿಂದಿನ ದಿನ ಹೇಗಿತ್ತು ಎಂಬುದನ್ನು ಪರಿಗಣಿಸಿದರೆ, ನಾವು ಹಿಂತಿರುಗಿ ಬಂದು ನಮ್ಮ ಕೆಲಸವನ್ನು ಮಾಡಿದ ರೀತಿ ಅದ್ಭುತವಾಗಿದೆ. ನಾವು ಕೇವಲ ಒಂದು ರನ್ ಹಿಂದೆ ಇದ್ದರೂ, ನಾವು ಕೊನೆಯಲ್ಲಿ ಬ್ಯಾಟಿಂಗ್ ಮಾಡಬೇಕಾಗಿರುವುದರಿಂದ ನಾವು ಹಿಂದುಳಿದಿದ್ದೇವೆ ಎಂದು ನನಗೆ ಅನಿಸಿತು. ನನ್ನ ಪ್ರಕಾರ ಬೌಲರ್‌ಗಳು ಅದ್ಭುತವಾಗಿದ್ದರು. ಇಂದು ಬೆಳಗ್ಗೆ 9 ವಿಕೆಟ್‌ಗಳನ್ನು ಕಬಳಿಸಿರುವುದು ಶ್ಲಾಘನೀಯ. ಈ ರೀತಿಯ ಪಿಚ್‌ನಲ್ಲಿ ವಿಭಿನ್ನವಾಗಿ ಏನನ್ನಾದರೂ ಮಾಡಬೇಕಾಗಿದೆ” ಎಂದರು.


“ಮೊದಲ ಸೆಷನ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಗಮನಿಸುತ್ತೇವೆ. ಮತ್ತು ಆಟ ಮುಂದುವರೆದಂತೆ ವಿಕೆಟ್ ನಿಧಾನವಾಗುತ್ತದೆ. ಆದ್ದರಿಂದ ಬೆಳಿಗ್ಗೆಯೇ ಪ್ರತೀ ಹೆಜ್ಜೆಯ ಬಗ್ಗೆ ನಮ್ಮನ್ನು ನಾವು ಸಿದ್ಧಪಡಿಸಿದೆವು. ಈ ಆಟಗಾರರು ಬೌಲಿಂಗ್‌ನಲ್ಲಿ ಮಾಸ್ಟರ್ ಆಗಿದ್ದಾರೆ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಸಾಕಷ್ಟು ಕ್ಷಣಗಳಿವೆ. ಆದರೆ ರವೀಂದ್ರ ಜಡೇಜಾ ಮತ್ತು ವಿರಾಟ್ ನಡುವಿನ ಪಾಲುದಾರಿಕೆ ಅದ್ಭುತವಾಗಿದೆ ಎಂದು ನನಗನಿಸಿದೆ. ನಂತರ ಅಕ್ಷರ್- ಅಶ್ವಿನ್ ಆಟವೂ ಅದ್ಭುತವಾಗಿತ್ತು” ಎಂದರು.


ಇದನ್ನೂ ಓದಿ: Virat Kohli : ಅಂತರಾಷ್ಟ್ರೀಯ ಪಂದ್ಯದದಲ್ಲಿ 25000 ರನ್ ಪೂರೈಸಿದ ಕಿಂಗ್ ಕೊಹ್ಲಿ! 


ವಿರಾಟ್ (44) ಮತ್ತು ಜಡೇಜಾ (26) ಮೊದಲ ಇನ್ನಿಂಗ್ಸ್‌ನಲ್ಲಿ 59 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.