Australia vs Bangladesh: ಡೇವಿಡ್ ವಾರ್ನರ್ ಶತಕ, ಬೃಹತ್ ಮೊತ್ತದತ್ತ ಆಸೀಸ್ ಪಡೆ
ಇಂಗ್ಲೆಂಡಿನ ನ್ಯಾಟಿಂಗ್ ಹ್ಯಾಮ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆಷ್ಟ್ರೇಲಿಯಾ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.
ನವದೆಹಲಿ: ಇಂಗ್ಲೆಂಡಿನ ನ್ಯಾಟಿಂಗ್ ಹ್ಯಾಮ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆಷ್ಟ್ರೇಲಿಯಾ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾದ ನಿರ್ಧಾರ ಸರಿ ಎನ್ನುವಂತೆ ಆರಂಭಿಕ ಆಟಗಾರರು ಬ್ಯಾಟ್ ಬಿಸಿದರು. ಡೇವಿಡ್ ವಾರ್ನರ್ ಈ ಟೂರ್ನಿಯಲ್ಲಿ ಈಗ ಎರಡನೇ ಶತಕವನ್ನು ದಾಖಲಿಸಿದ್ದಾರೆ.ಡೇವಿಡ್ ವಾರ್ನರ್ ಹಾಗೂ ಆರನ್ ಫಿಂಚ್ ರ 121ರನ್ ಗಳ ಮೊದಲ ವಿಕೆಟ್ ಜೊತೆಯಾಟ ತಂಡಕ್ಕೆ ಭದ್ರ ಭುನಾದಿಯನ್ನು ಹಾಕಿದೆ. ಇದಾದ ನಂತರ ಆರನ್ ಫಿಂಚ್ 53 ರನ್ ಗಳನ್ನು ಗಳಿಸಿ ಸೌಮ್ಯ ಸರ್ಕಾರ ಅವರ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.
ನಂತರ ಬಂದಂತಹ ಉಸ್ಮಾನ್ ಖವಾಜಾ ಕೂಡ ಈಗ 42 ರನ್ ಗಳಿಸಿ ಕ್ರಿಸ್ ನಲ್ಲಿ ನೆಲೆಯುರಿದ್ದಾರೆ. ಸದ್ಯ ಬಂದಿರುವ ವರದಿ ಪ್ರಕಾರ ಒಂದು ವಿಕೆಟ್ ನಷ್ಟಕ್ಕೆ ಆಸೀಸ್ 36.4 ಓವರ್ ಗಳಲ್ಲಿ 215 ರನ್ ಗಳಿಸಿದೆ. ಇನ್ನೊಂದೆಡೆಗೆ ವಾರ್ನರ್ ಅವರು 123 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನು ಬಾರಿಸುವುದರ ಮೂಲಕ ಕ್ರಿಸ್ ನಲ್ಲಿದ್ದಾರೆ.