ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಆರಂಭವಾದ ಭಾರತ ಮತ್ತು ಆಸಿಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 66 ರನ್ ಗಳ ಜಯವನ್ನು ಸಾಧಿಸಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಆರಂಭಿಕ ಬ್ಯಾಟ್ಸ್ ಮನ್ ಗಳಾದ ಡೇವಿಡ್ ವಾರ್ನರ್ 69, ಆರನ್ ಫಿಂಚ್ 114 ಹಾಗೂ ಸ್ಟೀವ್ ಸ್ಮಿತ್ 105 ರನ್ ಗಳ ನೆರವಿನಿಂದ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.



ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು ಉತ್ತಮ ಆರಂಭವನ್ನೇ ಮಾಡಿತು, ಕೇವಲ 5 ಓವರ್ ಗಳಲ್ಲಿ 50 ರನ್ ಮಾಯಾಂಕ್ ಅಗರವಾಲ್ ಹಾಗೂ ಶಿಖರ್ ಧವನ್ ಗಳಿಸಿದರು.ಆದರೆ ಇದಾದ ನಂತರ ತಕ್ಷಣ ಕನ್ನಡಿಗ ಮಾಯಾಂಕ್ ಆಗರ್ವಾಲ್ 22 ರನ್ ಗಳಿಗೆ ವಿಕೆಟ್ ಗಳನ್ನು ಒಪ್ಪಿಸಿದರು. ಇದಾದ ನಂತರ ತಂಡದ ಮೊತ್ತ 104 ಆಗುವಷ್ಟರಲ್ಲಿ ವಿರಾಟ್ ಕೊಹ್ಲಿ,ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ವಿಕೆಟ್ ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು.



ಇಂತಹ ಸಂದರ್ಭದಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಧವನ್ ಶತಕದ ಜೊತೆಯಾಟವಾಡುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು.ತದನಂತರ ಧವನ್ ವಿಕೆಟ್ ಉರುಳಿದ ನಂತರ ಭಾರತದ ಗೆಲುವಿನ ಭರವಸೆ ಕಮರಿಹೋಯಿತು. ಹಾರ್ದಿಕ್ ಪಾಂಡ್ಯ 90 ರನ್ ಗಳಿಸಿದರೆ ಧವನ್ 74 ರನ್ ಗಳಿಸಿದರು.ಕೊನೆಗೆ ಭಾರತ 8 ವಿಕೆಟ್ ಗಳ ನಷ್ಟಕ್ಕೆ 308 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.