ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತದ ಆರಂಭಿಕ ಮತ್ತು ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.ಬುಧವಾರ ತಮ್ಮ 14 ದಿನಗಳ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ ನಂತರ ತಂಡದ ಸಹ ಆಟಗಾರರೊಂದಿಗೆ ಸೇರಿಕೊಂಡ ರೋಹಿತ್, ಚೇತೇಶ್ವರ ಪೂಜಾರರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

ಪಿತೃತ್ವ ರಜೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಟೆಸ್ಟ್‌ನಲ್ಲಿನ ಹೀನಾಯ ಸೋಲಿನ ನಂತರ ಭಾರತ ತಂಡವನ್ನು ಗೆಲುವಿನ ತಡಕ್ಕೆ ಸೇರಿಸುವಲ್ಲಿ ರಹಾನೆ ಮಹತ್ವದ ಪಾತ್ರವನ್ನು ವಹಿಸಿದರು.


ಇದನ್ನೂ ಓದಿ: ನನಗೆ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿಯಲು ಹೇಳಿದ್ದ ಯುವರಾಜ್ ಸಿಂಗ್ - ರೋಹಿತ್ ಶರ್ಮಾ


ಎರಡನೇ ಟೆಸ್ಟ್‌ನಲ್ಲಿ ಪಂದ್ಯ ಭರ್ಜರಿ ಶತಕ ಗಳಿಸಿದ ರಹಾನೆ ಮಾತನಾಡಿ 'ರೋಹಿತ್ ಶರ್ಮಾ (Rohit Sharma) ಹಿಂತಿರುಗುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ.ನಿನ್ನೆ ಅವರೊಂದಿಗೆ ಮಾತನಾಡಿದ್ದೇನೆ, ಅವರು ತಂಡವನ್ನು ಸೇರಲು ಕಾಯುತ್ತಿದ್ದಾರೆ' ಎಂದು ಹೇಳಿದ್ದರು.ರೋಹಿತ್ ಸೇರ್ಪಡೆಯಿಂದಾಗಿ ಈಗ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಮತ್ತಷ್ಟು ಗೆಲುವಿನ ಅವಕಾಶವನ್ನು ಹೆಚ್ಚಿಸಿದೆ.


ಇದನ್ನೂ ಓದಿ: ಶಿಖರ್ ಧವನ್ ಒಬ್ಬ ಮೂರ್ಖ ಎಂದ ಹಿಟ್ ಮ್ಯಾನ್ ರೋಹಿತ್ ಶರ್ಮಾ....!


ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಗಾಯಗೊಂಡಿದ್ದ ರೋಹಿತ್, ಜನವರಿ 7 ರಿಂದ ಐತಿಹಾಸಿಕ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದಾರೆ.ಏತನ್ಮಧ್ಯೆ, ಆಸ್ಟ್ರೇಲಿಯಾ ವಿರುದ್ಧ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತದ ವೇಗದ ಬೌಲರ್ ಟಿ ನಟರಾಜನ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಲಾಗಿದೆ.


ಇದನ್ನೂ ಓದಿ: ಬಿಸಿಸಿಐ ಕ್ರಿಕೆಟ್ ತರಬೇತಿಗೆ ಕೊಹ್ಲಿ,ರೋಹಿತ್ ಶರ್ಮಾ ಬರಲ್ಲವಂತೆ...! ಕಾರಣವೇನು ಗೊತ್ತೇ ?


ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ 3 ನೇ ದಿನದಂದು ಎಡಗೈ ವೇಗಿ ಉಮೇಶ್ ಯಾದವ್ ಅವರು ಸ್ನಾಯು ಸೆಳೆತವನ್ನು ಅನುಭವಿಸಿ ಹೊರ ನಡೆದಿದ್ದರು. ಆಯ್ಕೆ ಸಮಿತಿ ಯಾದವ್ ಅವರ ಬದಲಿಯಾಗಿ ಟಿ ನಟರಾಜನ್ ಅವರನ್ನು ಹೆಸರಿಸಿದೆ" ಎಂದು ಬಿಸಿಸಿಐ ಶುಕ್ರವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.ಇನ್ನೊಂದೆಡೆಗೆ ಶಮಿ ಸ್ಥಾನದಲ್ಲಿ ಶಾರ್ದುಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.


"ಶಮಿ ಮತ್ತು ಉಮೇಶ್ ಯಾದವ್ ಇಬ್ಬರೂ ತಮ್ಮ ಗಾಯಗಳ ಪುನರ್ವಸತಿಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಲಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಟೀಮ್ ಇಂಡಿಯಾ (Team India )ಟೆಸ್ಟ್ ತಂಡ: ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್ ರಾಹುಲ್), ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಎಂಡಿ. ಸಿರಾಜ್, ಶಾರ್ದುಲ್ ಠಾಕೂರ್, ಟಿ ನಟರಾಜನ್