ಇಂಡಿಯಾ ಮತ್ತು ಆಸಿಸ್ ನಡುವಿನ ಮಹಿಳೆಯರ 2ನೇ ಟಿ20 ಕ್ಷಣಗಣನೆ ಆರಂಭ! ಆಸಿಸ್ ಗೆ ಮಾಡು ಇಲ್ಲವೇ ಮಡಿ ಪಂದ್ಯ
IND vs AUS Womenʼs T20 : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ T20 ಪಂದ್ಯವು ಇಂದು ( ಭಾನುವಾರ) ಮುಂಬೈನ ನವಿಯಲ್ಲಿ ನಡೆಯಲಿದೆ. ಭಾರತವು ಈ ಸರಣಿಯಲ್ಲಿ ಆಸಿಸ್ ವಿರುದ್ದ 1-0 ಅಂತರಗಳಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯವು ಆಸಿಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದ್ದು, ಪಂದ್ಯವು 7 ಗಂಟೆಗೆ ಆರಂಭವಾಗಲಿದೆ.
IND vs AUS Womenʼs 2nd T20 : ಆಸ್ಟ್ರೇಲಿಯಾ ಮತ್ತು ಭಾರತ ಮಹಿಳೆಯರ ನಡುವಿನ 2ನೇ ಟಿ20 ಪಂದ್ಯವು ಇಂದು(ಭಾನುವಾರ) ಮುಂಬೈ ಸ್ಟೇಡಿಂನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆಸಿಸ್ ತಂಡವನ್ನು ಬಗ್ಗುಬಡಿದ ಭಾರತದ ವನಿತೆಯರು ತಮ್ಮ ಎರಡನೇ ಪಂದ್ಯವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ಧಾರೆ.
32 ವರ್ಷಗಳ ನಂತರ ಭಾರತ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ಮಹಿಳೆಯರನ್ನು ಸೋಲಿಸಿದ ಭಾರತದ ವಿನತೆಯರು ಹೊಸದೊಂದು ದಾಖಲೆ ನಿರ್ಮಿಸಿದ್ದರು. ಅದೇ ನಿಟ್ಟಿನಲ್ಲಿ ಆಸಿಸ್ ವಿರದ್ದ ಟ20 ಸರಣಿಯನ್ನು ಗೆಲ್ಲುವ ತವಕದಲ್ಲಿದ್ದಾರೆ.
ಇದನ್ನು ಓದಿ-ಗ್ಲೆನ್ ಮೆಕ್ ಗ್ರಾತ್ ಕುಟುಂಬದ ಮಹಿಳೆಯ ಹಸ್ತಲಾಘ ನಿರಾಕರಿಸಿದ "ಮೊಹಮ್ಮದ್ ರಿಜ್ವಾನ್"!
ಹರ್ಮನ್ ಪ್ರೀತ್‌ಕೌರ್ ಭಾರತ ತಂಡವನ್ನು ನಾಯಕತ್ವದಲ್ಲಿ ಮುಂದುವರೆಸಲಿದ್ದಾರೆ. 3 ಪಂದ್ಯಗಳ ಈ ಸರಣಿಯಲ್ಲಿ ಇಂಡಿಯಾ ಈಗಾಗಲೆ ಒಂದು ಪಂದ್ಯವನ್ನು ಗೆದ್ದಿದೆ. ಆದರೆ ಆಸಿಸ್ ಗೆ ಈ ಪಂದ್ಯವು ನಿರ್ಣಾಯಕ ಪಂದ್ಯವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ಸರಣಿ ಗೆಲ್ಲುವ ಆಸೆಯನ್ನು ಬಿಡಬೇಕಾಗುತ್ತದೆ.
ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತದ ವನಿತೆಯರು ಆಸಿಸ್ ತಂಡವನ್ನು 141 ರನ್ ಗಲಿಗೆ ಆಲ್ ಔಟ್ ಮಾಡಿತ್ತು. ಬಳಿಕ ಬೈಆಟಿಂಗ್ ಮಾಡಿದ ಟೀಂ ಇಂಡಿಯಾ 2.3 ಒವರ್‌ಗಳು ಬಾಕಿ ಇರುವಾಗಲೇ ನಿಗಧಿತ ಸ್ಕೋರ್‌ಅನ್ನು ಚೇಸ್ ಮಾಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
ಇದನ್ನು ಓದಿ-MS Dhoni: ಸ್ಮೋಕ್ ಮಾಡಿ ಸಿಕ್ಕಿಬಿದ್ದ ಧೋನಿ! ಹುಕ್ಕಾ ಹೊಡೆಯುವ ವಿಡಿಯೋ ವೈರಲ್
ಭಾರತದ ಪ್ಲೇಯಿಂಗ್-11 :
ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್(C), ದೀಪ್ತಿ ಶರ್ಮಾ, ಅಮನ್‌ಜೋತ್ ಕೌರ್, ರಿಚಾ ಘೋಷ್ (Wk), ಪೂಜ ವಸ್ತ್ರಕರ್, ಶ್ರೇಯಂಕ ಪಾಟೀಲ್, ತಿಟಾಸ್ ಸಿಂಧೂ, ರೇಣುಕಾ ಸಿಂಗ್
ಆಸ್ಟ್ರೇಲಿಯಾ ಪ್ಲೇಯಿಂಗ್-11 :
ಅಲಿಸ್ಸಾ ಹೀಲಿ (C & WK), ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಆಶ್ಲೀಗ್ ಗಾರ್ಡ್ನರ್, ಫೋಬೆ ಲಿಚ್ಫೀಲ್ಡ್, ಗ್ರೇಸ್ ಹ್ಯಾರಿಸ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್, ಮೇಗನ್ ಶುಟ್, ಡಾರ್ಸಿ ಬ್ರೌನ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ