PAK vs AUS test: ಮೂರು ದಿನಗಳ ಟೆಸ್ಟ್‌ ಸರಣಿಯನ್ನು ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನಕ್ಕೆ ಒಂದರ ಬೆನ್ನಲ್ಲೆ ಒಂದು ಸೋಲು ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ದ ನಡೆದ 2 ಟೆಸ್ಟ್‌ ಪಂದ್ಯಗಳನ್ನು ಪಾಕ್‌ ಸೋತಿದೆ. ಈ ಮೂರನೆ ಪಂದ್ಯವನ್ನು ಆಡುತ್ತಿದ್ದು ಈ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ತೀರ ಮುಖಭಂಗಕ್ಕೆ ಒಳಗಾಗುತ್ತದೆ. 


COMMERCIAL BREAK
SCROLL TO CONTINUE READING

ಸಿಡ್ನಿ ಕಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ ಪಂದ್ಯವು ಈ ಸರಣಿಯ ಕೊನೆಯ ಪಂದ್ಯವಾಗಿದೆ. ನಡೆದ ಎರಡು ಪಂದ್ಯದಲ್ಲು ಪಾಕ್‌ ಗೆ ಭಾರಿ ಸೋಲಾಗಿದೆ. ಎರಡೂ ಪಂದ್ಯಗಲನ್ನು ಬಾರಿ ಅಂತರಗಳಿಂದ ಸೋತ ಪಾಕಿಸ್ತಾನಕ್ಕೆ ಈ ಗೆಲ್ಲಲು ಈ ಪಂದ್ಯ ಒಂದು ಅವಕಾಸ ಕಲ್ಪಿಸಿಕೊಟ್ಟಿದೆ. 


ಇದನ್ನು ಓದಿ-ದಕ್ಷಿಣ ಆಫ್ರಿಕಾ ವಿರುದ್ದ 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಭಾರಿ ಜಯ ! 1-1 ಅಂತರದಲ್ಲಿ ಸರಣಿ ಸಮ


ಸರಣಿ ಬಹುತೇಕ ಆಸ್ಟ್ರೇಲಿಯ ತಂಡದ ವಶವಾಗಿದ್ದು, ಪಾಕ್‌ಗೆ ಪ್ರತಿಷ್ಠೆಯ ಪಂದ್ಯವಾಗಿದೆ. ಎರಡನೇ ದಿನದ ಪಂದ್ಯವು ಇಂದು(ಗುರುವಾರ) ಅಂತ್ಯಗೊಂಡಿದ್ದು, ಮೊದಲು ಇನ್ನಿಂಗ್ಸ್‌ ಆರಂಭಿಸಿದ ಪಾಕ್ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 313‌ ರನ್‌ಗಳನ್ನು ಗಳಿಸಿದೆ. ಇನ್ನು ಆಸಿಸ್ ತನ್ನ ಇನ್ನಿಂಗ್ಸ್‌ ಆರಂಭಿಸಿದ್ದು 2ನೇ ದಿದಂತ್ಯಕ್ಕೆ ಎರಡು ವಿಕೆಟ್‌ಗಳ ನಷ್ಟಕ್ಕೆ 116 ರನ್‌ಗಳಿಸಿದೆ. 


ಇನ್ನು ನಾಳೆ ನಡೆಯಲಿರುವ ಮೂರನೆ ದಿನದ ಪಂದ್ಯದಲ್ಲಿ ಆಸಿಸ್‌ ತನ್ನ ಬ್ಯಾಟಿಂಗ್‌ ಮುಂದುವರೆಸಲಿದೆ. ಆಸಿಸ್‌ ಪರ ಡೇವಿಡ್‌ ವಾರ್ನರ್‌ 34 ಮತ್ತು ಉಸ್ಮಾನ್‌ ಖವಾಜ 47 ರನ್‌ ಗಳಿಸಿ ಔಟ್‌ ಆದರೆ. ಮಾರ್ನಸ್‌ ಲಬುಶೇನ್‌ 23 ಮತ್ತು ಮತ್ತು ಸ್ಟೀವ್‌ ಸ್ಮಿತ್‌ 6 ರನ್‌ಗಳಿಸಿ ಸ್ಕ್ರೀಜ್‌ನಲ್ಲಿ ಉಳಿದುಕೊಂಡಿದ್ದು ನಾಳೆ ಪಂದ್ಯದಲ್ಲಿ ಬ್ಯಾಟಿಂಗ್‌ ಮುಂದುವರೆಸಲಿದ್ದಾರೆ. 


ಇದನ್ನು ಓದಿ-ಮೊದಲ ದಿನದ ಪಂದ್ಯದಲ್ಲಿ ಬರೊಬ್ಬರಿ 23 ವಿಕೆಟ್‌ಗಳ ಪತನ ! ಇತಿಹಾಸದಲ್ಲಿ 2ನೇ ಅತೀ ಹೆಚ್ಚು ವಿಕೆಟ್‌ ಉರುಳಿದ ದಾಖಲೆ ನಿರ್ಮಾಣ


ಆಸ್ಟ್ರೇಲಿಯಾ ತಂಡವು 116 ರನ್‌ಗಳಿಸಿದ್ದು ಸ್ಕೋರ್‌ ಸರಿಸಮ ಮಾಡಲು ಇನ್ನೂ 197 ರನ್‌ಗಳ ಅಗತ್ಯವಿದೆ. ಪಂದ್ಯದ ಸಾಗುಗತಿಯನ್ನು ನೋಡುತ್ತಿದ್ದರೆ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಬಹುತೇಕವಿದೆ. ಒಂದು ವೇಳೆ ನಾಳೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ವೇಗಗತಿಯಲ್ಲಿ ಆಲ್‌ ಔಟ್‌ ಮಾಡಿದರೆ, ಬ್ಯಾಟಿಂಗ್‌ ನಲ್ಲಿ ಉತ್ತಮ ರನ್‌ ಕಲೆ ಹಾಕಿ ಆಸಿಸ್‌ ತಂಡವನ್ನು ಸೋಲಿಸಲು ಸಾಧ್ಯವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.