ಆಸ್ಟ್ರೇಲಿಯಾ ವಿರುದ್ದ ಪಾಕಿಸ್ತಾನಕ್ಕೆ ಹೀನಾಯ ಸೋಲು..! ಪಾಕ್ ಸೋಲಿಗೆ ಇದೇ ಕಾರಣ
AUS vs PAK : ಡಿಸೆಂಬರ್ 14ರಂದು ಆರಂಭಗೊಂಡಿದ್ದ ಆಸ್ರ್ಟೇಲಿಯಾ vs ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ವಿರುಧ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಪಾಕಿಸ್ತಾನ ಅಥಿತಿ ತಂಡವಾಗಿ ಆಡಬೇಕು. ಆಸ್ಟ್ರೇಲಿಯಾದ ಪರ್ತ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತನಾವು ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 113 ಒವರ್ಗಳಲ್ಲಿ ತನ್ನೆಲ್ಲಾ ವಿಕೇಟ್ ಒಪ್ಪಿಸಿ 487ರನ್ ಕಲೆ ಹಾಕಿತು.
AUS vs PAK score : ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕಿಳಿದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜ ಉತ್ತಮ ದಾಂಡುಗಾರಿಕೆ ಮುಂದಾದರು. ಇವರಿಬ್ಬರ ಜೊತೆಯಾಟದಿಂದ ತಂಡಕ್ಕೆ 126 ರನ್ ಗಳು ಸೇರ್ಪಡೆಗೊಳ್ಳುತ್ತಿದ್ದಂತೆ 41ರನ್ ಗಳಿಸಿದ ಉಸ್ಮಾನ್ ಖವಾಜ,ಶಾಹಿನ್ ಶಾ ಅಫ್ರಿಧಿಗೆ ವಿಕೇಟ್ ಒಪ್ಪಿಸಿದರು. ಇನ್ನು ಮಿಚೆಲ್ ಮಾರ್ಷ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಪಾಕಿಸ್ತಾನಿ ಬೌಲರ್ಸ್‌ಗಳನ್ನು ಬೆಂದೆಟ್ಟಿದರು.ಪಾಕಿಸ್ತಾನ ಬೌಲರ್ಸ್ಗೆ ತೆಲ ನೂವಾದ ಆರಂಭಿಕ ಬ್ಯಾಟ್ಸ್‌ಮನ್ ಡೆವಿಡ್ ವಾರ್ನರ್ 164 ರನ್ ಗಳಸಿ ತಂಡಕ್ಕೆ ಬೃಹತ್ ರನ್‌ಗಳ ಕೊಡುಗೆ ನೀಡಿದರು.
ಬ್ಯಾಟಿಂಗ್‌ನಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನದ ಪರ ಕಣಕಿಳಿದ ಆರಂಭಿಕ ಬ್ಯಾಟ್‌ಮನ್ಸ್ ಅಬ್ದುಲ್ಲಾ ಶಫಿಖ್ ಮತ್ತು ಇಮಾಮ್ ಉಲ್ ಹಕ್ ಉತ್ತಮ ಜೊತಯಾಟಕ್ಕೆ ಮುಂದಾದರು. ಇಬ್ಬರ ಜೊತೆಯಾಟ ಶತಕದ ಕಡಗೆ ಸಾಗುತ್ತುರುವಾಗಲೇ ಅಬ್ದುಲ್ 42ರನ್ ಗೆ ವಿಕೇಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. ಇತ್ತಾ ಉಮಾಮ್ ಉಲ್ ಹಕ್ 62 ರನ್ ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸ ಬೇಕಾಯಿತು. ಇನ್ನುಳಿದ ಪಾಕಿಸ್ತಾನದ ಮತ್ಯಾವ ಆಟಗಾರರಿಂದಲು ಹೇಳುವಂತಹ ಪ್ರದರ್ಶನ ಬರದೆ 271ಗಳಿಗೆ ತನ್ನೆಲ್ಲ ವಿಕೇಟ್ ಒಪ್ಪಸ ಬೇಕಾಯಿತು.
ಇದನ್ನೂ ಓದಿ: ನಾಯಕತ್ವ ಕಳೆದುಕೊಂಡ ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ಪರ ಆಡೋದು ಡೌಟ್
ಎರಡನೇ ಇನ್ನಿಂಗ್ಸ್ ಆರಂಭಿಸದಿ ಆಸ್ಟ್ರೇಲಿಯಾ ಪರ ಉಸ್ಮಾನ ಖವಾಜ ಕಡೆ ಇಂದ ಮತ್ತೊಂದು ಉತ್ತಮ ಪ್ರದರ್ಶನ ಕಂಡುಬಂದಿತು. ಈ ಇನ್ನಿಂಗ್ಸ್‌ನಲ್ಲಿ 233 ರನ್ ಗಳಿಸಿದ ಆಸ್ಟ್ರೇಲಿಯಾವು ಪಾಕಿಸ್ತಾನಕ್ಕೆ 450 ರನ್‌ಗಳ ಗುರಿ ನೀಡಿತು . ಈ ಗುರಿ ಬೆನ್ನಟ್ಟಿದ ಪಾಕಿಸ್ತಾನವು ಕೇವಲ 89 ರನ್‌ಗಳಿಗೆ ಆಲೌಟ್ ಗ ಬೇಕಾಯಿತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಮನ್ಸ್ ಡೇವಿಡ್ ವಾರ್ನರ್ (164 ಮತ್ತು 0), ಉಸ್ಮಾನ್ ಖವಾಜ (41 ಮತ್ತು 90), ಟ್ರಾವಿಸ್ ಹೆಡ್(40 ಮತ್ತು14) , ಸ್ಟೀವ್ ಸ್ಮಿತ್(31 ಮತ್ತು45), ಮಿಚೆಲ್ ಮಾರ್ಷ್ (90 ಮತ್ತು63) ರನ್ ಗಳಿಸಿದರು. ಪಾಕಿಸ್ತಾನದ ಪರ ಅಬ್ದುಲ್ (42ಮತ್ತು2), ಇಮಾಮ್ ಉಲ್ ಹಕ್ (62ಮತ್ತು10), ಶಾನ್ ಮಸೂದ್ (30 ಮತ್ತು 2) ಬಾಬರ್ ಆಜಾಮ್ (21 ಮತ್ತು 14) ರನ್ ಗಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.