31,608 ಎಸೆತದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆ 500 ವಿಕೆಟ್ ಕಿತ್ತ ಬೌಲರ್: ವಿಶ್ವಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ದಾಖಲೆಯಿದು
Nathan Lyon 500 test wickets: ಪರ್ತ್ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್’ನಲ್ಲಿ ನಾಥನ್ ಲಿಯಾನ್ ತನ್ನ ಮೊದಲ ವಿಕೆಟ್ ಪಡೆದ ತಕ್ಷಣ, 500 ಟೆಸ್ಟ್ ಬ್ಯಾಟ್ಸ್‌ಮನ್’ಗಳನ್ನು ಔಟ್ ಮಾಡಿದ ಮೂರನೇ ಆಸ್ಟ್ರೇಲಿಯಾದ ಬೌಲರ್ ಎನಿಸಿಕೊಂಡರು.
Nathan Lyon 500 test wickets: ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ದಾಖಲೆಯನ್ನು ಬರೆದಿದ್ದಾರೆ. ಪಾಕಿಸ್ತಾನ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್’ನಲ್ಲಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ… ಕ್ರೀಡಾಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಇವರೇ!
ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ ಗೆಲ್ಲಲು 450 ರನ್’ಗಳ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತನ್ನ ಎರಡನೇ ಇನ್ನಿಂಗ್ಸ್’ನಲ್ಲಿ ಕೇವಲ 89 ರನ್’ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಐದು ದಿನಗಳ ಈ ಪಂದ್ಯ ನಾಲ್ಕನೇ ದಿನವೇ ಫಲಿತಾಂಶದ ಹಂತ ತಲುಪಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.
ಪರ್ತ್ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್’ನಲ್ಲಿ ನಾಥನ್ ಲಿಯಾನ್ ತನ್ನ ಮೊದಲ ವಿಕೆಟ್ ಪಡೆದ ತಕ್ಷಣ, 500 ಟೆಸ್ಟ್ ಬ್ಯಾಟ್ಸ್‌ಮನ್’ಗಳನ್ನು ಔಟ್ ಮಾಡಿದ ಮೂರನೇ ಆಸ್ಟ್ರೇಲಿಯಾದ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಮತ್ತು ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಮಾದರಿಯಲ್ಲಿ 500+ ವಿಕೆಟ್’ಗಳನ್ನು ಪಡೆದ ವಿಶ್ವದ ಎರಡನೇ ಸ್ಪಿನ್ನರ್ ಲಿಯಾನ್. ಈ ಇನ್ನಿಂಗ್ಸ್‌ನಲ್ಲಿ ಲಿಯಾನ್ ಎರಡು ವಿಕೆಟ್ ಪಡೆದಿದ್ದಾರೆ.
ನಾಥನ್ ಲಿಯಾನ್ ವಿಶ್ವದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಎಂಟನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೈಲಿಗಲ್ಲು ಸಾಧಿಸಲು ಅಶ್ವಿನ್ 11 ವಿಕೆಟ್’ಗಳ ದೂರದಲ್ಲಿದ್ದಾರೆ. ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್’ನಲ್ಲಿ 489 ವಿಕೆಟ್ ಪಡೆದಿದ್ದಾರೆ. 11 ವಿಕೆಟ್ ಪಡೆದರೆ, 500 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇವರಿಗಿಂತ ಮೊದಲು ಅನುಭವಿ ಬೌಲರ್ ಅನಿಲ್ ಕುಂಬ್ಳೆ ಮಾತ್ರ 500 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್’ಗಳನ್ನು ಕಬಳಿಸಿದ್ದರು.
ಟೆಸ್ಟ್ ಕ್ರಿಕೆಟ್’ನಲ್ಲಿ 500+ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿ
708 - ಶೇನ್ ವಾರ್ನ್ (ಆಸ್ಟ್ರೇಲಿಯಾ)
690 - ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)
619 - ಅನಿಲ್ ಕುಂಬ್ಳೆ (ಭಾರತ)
604 - ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)
563 - ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ)
519 - ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್)
501* - ನಾಥನ್ ಲಿಯಾನ್ (ಆಸ್ಟ್ರೇಲಿಯಾ)
ಇದನ್ನೂ ಓದಿ: ವಾರದಲ್ಲಿ 3 ಸೀತಾಫಲ ಹಣ್ಣ ತಿಂದರೆ ಸಾಕು… ಈ ಕಾಯಿಲೆಗಳಿಂದ ಸಿಗುತ್ತೆ ಶಾಶ್ವತ ಮುಕ್ತಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ