Axar Patel MS Dhoni : ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ (IND vs WI) ನಡುವಿನ ಎರಡನೇ ODI ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಸಖತ್ ಸೌಂಡ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಅಕ್ಷರ್ ಟೀಂ ಇಂಡಿಯಾ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದಾರೆ, ಈ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯ 17 ವರ್ಷಗಳ ಹಳೆಯ ದಾಖಲೆಯನ್ನ ಅಕ್ಷರ್ ಪಟೇಲ್ ಮುರಿದಿದ್ದಾರೆ. ಹಾಗಿದ್ರೆ ಅಕ್ಷರ್ ಪಟೇಲ್ ಮುರಿದ ದಾಖಲೆಯಾವುದು? ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಧೋನಿಯ 17 ವರ್ಷಗಳ ಹಳೆಯ ದಾಖಲೆ ಮುರಿದ ಪಟೇಲ್!


ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅಕ್ಷರ್ ಪಟೇಲ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ 5 ಸ್ಫೋಟಕ ಸಿಕ್ಸರ್‌ಗಳನ್ನೂ ಸಿಡಿಸಿದರು. ಇದರೊಂದಿಗೆ, ಅಕ್ಷರ್ ಪಟೇಲ್ 7 ಅಥವಾ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಯಶಸ್ವಿ ರನ್ ಚೇಸ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಇಷ್ಟೇ ಅಲ್ಲ, ಪಂದ್ಯ ಗೆಲ್ಲಲು ಕೊನೆಯ 3 ಎಸೆತಗಳಲ್ಲಿ ಭಾರತಕ್ಕೆ 6 ರನ್ ಬೇಕಿತ್ತು, ಆಗ ಅಕ್ಷರ್ ಪಟೇಲ್ ಓವರ್ ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು.


ಇದನ್ನೂ ಓದಿ : ವಿರಾಟ್ ಕೊಹ್ಲಿ ಸ್ಥಾನಕ್ಕೆ ಮುಳುವಾಗುತ್ತಿದ್ದಾನೆ ಟೀಂ ಇಂಡಿಯಾದ ಈ ಆಟಗಾರ!


2005ರಲ್ಲಿ ಈ ಅದ್ಭುತ ದಾಖಲೆ ಮಾಡಿದ್ದ ಧೋನಿ


ಈ ಹಿಂದೆ ಈ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿತ್ತು. ಅಕ್ಷರ್ ಪಟೇಲ್ ಈ ಇನ್ನಿಂಗ್ಸ್‌ಗೂ ಮುನ್ನ 2005ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎಂಎಸ್ ಧೋನಿ ಟೀಂ ಇಂಡಿಯಾ ಗೆಲುವನ್ನು ಸಾಧಿಸಿದ್ದರು. ಎಂಎಸ್ ಧೋನಿ ಅವರ ಈ ದಾಖಲೆಯನ್ನು ಸ್ಫೋಟಕ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್ ಎರಡು ಬಾರಿ ಸರಿಗಟ್ಟಿದ್ದಾರೆ. ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧ ರನ್ ಚೇಸ್ ಮಾಡುವಾಗ ಯೂಸುಫ್ ಪಠಾಣ್ ಈ ಸಾಧನೆ ಮಾಡಿದರು.


ಬೌಲಿಂಗ್ ಮಾಡುವಾಗ 9 ಓವರ್‌ಗಳಲ್ಲಿ ಕೇವಲ 40 ರನ್ ನೀಡಿ 1 ವಿಕೆಟ್ ಪಡೆದರು. ಬ್ಯಾಟಿಂಗ್ ಮಾಡುವಾಗ, ಅವರು 182.85 ಸ್ಟ್ರೈಕ್ ರೇಟ್‌ನಲ್ಲಿ 35 ಎಸೆತಗಳಲ್ಲಿ ಔಟಾಗದೆ 64 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 3 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು.


ಇದನ್ನೂ ಓದಿ : ವೆಸ್ಟ್‌ ಇಂಡೀಸ್‌ಗೆ ಮಾರಕವಾದ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರನ ಕೈಚಳಕ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.