ನವದೆಹಲಿ: ಪಾಕಿಸ್ತಾನದ ಬಾಬರ್ ಅಜಂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು  ಅಳಿಸಿ ಹಾಕಿದ್ದಾರೆ. ಅಷ್ಟಕ್ಕೂ ಈಗ ಅವರು ಮಾಡಿರುವ ದಾಖಲೆಯಾದರೂ ಏನೂ ಅಂತೀರಾ?


COMMERCIAL BREAK
SCROLL TO CONTINUE READING

ಟೆಸ್ಟ್ ಕ್ರಿಕೆಟ್ ನಲ್ಲಿ ಫುಲ್ ಫಾರ್ಮ್ ನಲ್ಲಿರುವ ಬಾಬರ್ ಅಜಂ ನ್ಯೂಜಿಲೆಂಡ್ ವಿರುದ್ದ ಪಂದ್ಯದಲ್ಲಿ ಎರಡನೇ ದಿನ ಮೊದಲ ಶತಕ ಗಳಿಸುವ ಮೂಲಕ ನೂತನ ಸಾಧನೆ ಮಾಡಿದ್ದಾರೆ.ಕಳೆದ ನಾಲ್ಕು ಇನ್ನಿಂಗ್ಸ್ ಗಳಲ್ಲಿ 92, 62, 13,127 ರನ್ ಗಳಿಸಿರುವ ಅವರು 2018 ರ ಸಾಲಿನಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿದ ಖ್ಯಾತಿಗೆ ಪಾತ್ರರಾಗಿದ್ದಾರೆ. 24ರ ಹರೆಯದ ಈ ಆಟಗಾರ ಈಗ 2018 ರಲ್ಲಿ 67.71 ಸರಾಸರಿಯನ್ನು ಹೊಂದಿದ್ದಾರೆ. ಇನ್ನೊಂದೆಡೆಗೆ ವಿರಾಟ್ ಕೊಹ್ಲಿ 18 ಇನ್ನಿಂಗ್ಸ್ ಗಳಲ್ಲಿ 1063 ರನ್ ಗಳೊಂದಿಗೆ 59.05 ರ ಸರಾಸರಿಯನ್ನು ಹೊಂದಿದ್ದಾರೆ. 


ಶತಕ ಗಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬರ್ "ಟೆಸ್ಟ್ ಶತಕವನ್ನು ಗಳಿಸದೆ ನನ್ನ ಮೇಲೆ ಹೊರೆಯಿದೆ ಎಂದು ಹೇಳಿದರೆ ನಾನು ಸುಳ್ಳು ಹೇಳುತ್ತೇನೆ ಎಂದರ್ಥ.ಈಗ ವ್ಯತ್ಯಾಸವೆಂದರೆ ನಾನು ಇಂದು ಆ ಕಾರ್ಯವನ್ನು ನಿರ್ವಹಿಸಿದ್ದೇನೆ.ನನ್ನ ಈ ಹಿಂದಿನ ಪ್ರದರ್ಶನಗಳೆಲ್ಲಾ ಅರ್ಧಶತಕಗಳೆಂದು ಪರಿಗಣಿಸಲ್ಪಡುತ್ತವೆ.ಟೆಸ್ಟ್ ನಲ್ಲಿ ಶತಕವನ್ನು ಗಳಿಸುವುದು ನಿಜಕ್ಕೂ ವಿಶೇಷ ಎಂದು ನಾನು ಕೇಳಿದ್ದೇನೆ.ಆದರೆ ಈ ಅನುಭವವನ್ನು ಈಗ ಕಂಡಿದ್ದೇನೆ" ಎಂದು ಬಾಬರ್ ಅಜಂ ತಿಳಿಸಿದರು