IND VS BAN: ಬಾಂಗ್ಲಾದೇಶದೊಂದಿಗಿನ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆದಿದ್ದು, ಇದೀಗ ಮತ್ತಂದು ರಣ ರೋಚಕ ಪಂದ್ಯಕ್ಕೆ ಸಜ್ಜಾಗಿದೆ. ಕಾನ್ಪುರ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಪ್ರವಾಸಿ ಬಾಂಗ್ಲಾದೇಶವನ್ನು ಭಾರತ ತಂಡ ಎದುರಿಸಲಿದೆ. ಮೊದಲನೇ ಟೆಸ್ಟ್‌ನಲ್ಲಿ ಎದುರಾಲಿಗಳನ್ನು ಸದೆ ಬಡಿದಿರುವ ಬ್ಯೂ ಬಾಯ್ಸ್‌ ಎರಡನೇ ಪಂದ್ಯವನ್ನು ಸಹ ಗೆದ್ದು ಬೀಗುವ ತವಕದಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಇದರೊಂದಿಗೆ ಡಬ್ಲ್ಯುಟಿಸಿ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಭಾರತ ತಂಡ ಪ್ರಯತ್ನಿಸುತ್ತಿದೆ. ಈಗಾಗಲೇ ಕಾನ್ಪುರ ತಲುಪಿರುವ ಟೀಂ ಇಂಡಿಯಾ ನೆಟ್ ನಲ್ಲಿ ಗಂಟೆಗಟ್ಟಲೆ ಪ್ರಾಕ್ಟಿಸ್‌ ಮಾಡುತ್ತಾ ಎದುರಾಳಿಗಲನ್ನು ಸೋಲಿಸುವ ತವಕದಲ್ಲಿದೆ. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಈ ಪಂದ್ಯದ ಮೊದಲ ಮೂರು ದಿನಗಳಲ್ಲಿ ಮಳೆ ಅಡ್ಡಿಪಡಿಸಲಿದೆ ಎಂದು ವರಿಯಾಗಿದೆ.


ಇದನ್ನೂ ಓದಿ: IPL 2025: ಸ್ಟಾರ್‌ ಆಟಗಾರನನ್ನು ಕೈ ಬಿಟ್ಟ RCB ತಂಡ! ದೊಡ್ಡ ಮೊತ್ತದ ಶುಲ್ಕ ಕೇಳಿ ತಂಡದಿಂದ ಹೊರಬಿದ್ದ ಆ ಆಟಗಾರ ಯಾರು ಗೊತ್ತಾ?


ಕಳೆದ ಮೂರು ದಿನಗಳಿಂದ ಕಾನ್ಪುರ ನಗರ ಬಿಸಿಲಿನ ತಾಪಕ್ಕೆ ಉಸಿರುಗಟ್ಟಿಸುತ್ತಿದೆ. ಮಳೆಯಾದರೆ ಎರಡನೇ ಟೆಸ್ಟ್‌ಗೆ ಅಡ್ಡಿಯಾಗಲಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಪಂದ್ಯ ಆರಂಭವಾಗುವ ಶುಕ್ರವಾರ ಶೇ.93ರಷ್ಟು ಮಳೆಯಾಗುವ ಸಾಧ್ಯತೆ ಇದೆ.ಎರಡನೇ ದಿನ ಅಂದರೆ ಶನಿವಾರ ಶೇ.83ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಮೂರನೇ ದಿನವಾದ ಭಾನುವಾರ ಶೇ.59 ರಷ್ಟು ಮಳೆಯಾಗುವ ಸಾಧ್ಯತೆ ಇದೆ. 


ಮೊದಲ ಮೂರು ದಿನ ಮಳೆಯಾದರೂ ಕೊಂಚ ಆಟವಾಡಲು ಸಾಧ್ಯವಾದರೆ ಕೊನೆಯ ಎರಡು ದಿನಗಳ ಆಟದಿಂದ ಫಲಿತಾಂಶ ತಿಳಿಯಲಿದೆ. ಆದರೆ, ಜೋರು ಮಳೆಯಾದರೆ ಮೈದಾನ ಜೌಗುಮಯವಾಗಿ ಆಟಕ್ಕೆ ಅಡ್ಡಿಯಾಗುವ ಅಪಾಯವಿದೆ. ಈ ಮಳೆಯ ಮುನ್ಸೂಚನೆ ಭಾರತೀಯ ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಈ ಪಂದ್ಯ ಮಳೆಯಿಂದ ರದ್ದಾದರೂ, ಡ್ರಾದಲ್ಲಿ ಅಂತ್ಯಗೊಂಡರೂ ಭಾರತ ಸರಣಿ ಗೆಲ್ಲಲಿದೆ. ಆದರೆ WTC ಚಾಂಪಿಯನ್‌ಶಿಪ್ 2025 ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರತದ ಅಗ್ರ ಸ್ಥಾನವನ್ನು ಸ್ಥಿರ ಪಡಿಸಿಕೊಳ್ಳಲಾಗುವುದಿಲ್ಲ. ಡಬ್ಲ್ಯುಟಿಸಿಯ ಫೈನಲ್ ತಲುಪಬೇಕಾದರೆ ನಂತರ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆಲ್ಲಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.