ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ಈ ಆಟಗಾರರು ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುಳುಗಿಸಬಹುದು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತೊರೆದರೂ ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ.
ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ 2022ರ ಟಿ-20 ವಿಶ್ವಕಪ್‍ಗಾಗಿ ತಯಾರಿ ಪ್ರಾರಂಭಿಸಲಿದೆ. ಅಕ್ಟೋಬರ್-ನವೆಂಬರ್‌ನಲ್ಲಿ T20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಹೀಗಾಗಿ ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಟಿ-20 ವಿಶ್ವಕಪ್‍ಗೂ ಮುನ್ನ ಏಷ್ಯಾ ಕಪ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಗೆ ಉತ್ತಮ ತಂಡವನ್ನು ಸಜ್ಜುಗೊಳಿಸುವ ಸವಾಲು ಆಯ್ಕೆದಾರರ ಮೇಲಿದೆ. ಇದಕ್ಕೆ ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಆಯ್ಕೆಗಾರರು ಗಮನಿಸುತ್ತಿದ್ದಾರೆ.
ಟೀಂ ಇಂಡಿಯಾದಲ್ಲಿ ಈ ಆಟಗಾರನ ಸ್ಥಾನ ಖಚಿತ
2021ರ ಐಪಿಎಲ್ ಟೂರ್ನಿ ಮತ್ತು ಟಿ-20 ವಿಶ್ವಕಪ್‌ನಲ್ಲಿ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಕಣಕ್ಕಿಳಿದಿದ್ದರು. ಆದರೆ ಪ್ರಸಕ್ತ ಟೂರ್ನಿಯಲ್ಲಿ ರೋಹಿತ್ ಕಳಪೆ ಪ್ರದರ್ಶನ ನೀಡುತ್ತಿದ್ದರೆ, ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. 10 ಪಂದ್ಯಗಳಲ್ಲಿ 56.38 ಸರಾಸರಿ ಮತ್ತು 145.01 ಸ್ಟ್ರೈಕ್-ರೇಟ್‌ನಲ್ಲಿ ರಾಹುಲ್ 451 ರನ್ ಗಳಿಸಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್ ವಿರುದ್ಧವೇ 2 ಭರ್ಜರಿ ಶತಕಗಳನ್ನು ರಾಹುಲ್ ಗಳಿಸಿದ್ದಾರೆ. ಅತ್ಯುತ್ತಮ ಫಾರ್ಮ್‍ನಲ್ಲಿರುವ ರಾಹುಲ್‍ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತವಾಗಿದೆ.
ರೋಹಿತ್ ಟೀಂ ಇಂಡಿಯಾದ ದೌರ್ಬಲ್ಯವಾಗಬಾರದು!
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 9 ಇನ್ನಿಂಗ್ಸ್‌ಗಳಲ್ಲಿ 17.22 ಸರಾಸರಿ ಮತ್ತು 123.01 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 155 ರನ್ ಗಳಿಸಿದ್ದಾರೆ. ಅದೇ ರೀತಿ ಭಾರತೀಯ ತಂಡದಲ್ಲಿ ಅವರ ODI ಆರಂಭಿಕ ಪಾಲುದಾರ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಧವನ್ 10 ಪಂದ್ಯಗಳಲ್ಲಿ 46.13 ರ ಸರಾಸರಿ ಮತ್ತು 124.66ರ ಸ್ಟ್ರೈಕ್-ರೇಟ್‌ನಲ್ಲಿ 369 ರನ್ ಗಳಿಸಿದ್ದಾರೆ. ಕಳಪೆ ಬ್ಯಾಟಿಂಗ್‍ನಿಂದಾಗಿ ಹಿಟ್‍ಮ್ಯಾನ್ ರೋಹಿತ್ ಟೀಂ ಇಂಡಿಯಾದ ದೌರ್ಬಲ್ಯವಾಗಬಾರದು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಅವರು ಮೊದಲಿನ ಬ್ಯಾಟಿಂಗ್ ಲಯಕ್ಕೆ ಮರಳುವುದು ತುಂಬಾ ಮುಖ್ಯವಾಗಿದೆ.
ಇದನ್ನೂ ಓದಿ: IPL 2022: ಅಂದೊಂದು ವೇಳೆ ಇವರ ತಾಯಿ abortion ಮಾಡಿಸಿಕೊಂಡಿದ್ದರೆ ಈ ಕ್ರಿಕೆಟಿಗ ನಮಗೆ ದೊರೆಯುತ್ತಿರಲಿಲ್ಲ
ಸಿಕ್ಕ ಅವಕಾಶ ಬಳಸಿಕೊಳ್ಳದ ಇಶಾನ್ ಕಿಶನ್!
ನ್ಯೂಜಿಲೆಂಡ್ ವಿರುದ್ಧ ಆರಂಭಿಕರಾಗಿ ಅಬ್ಬರಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಇಶಾನ್ ಕಿಶನ್ ಐಪಿಎಲ್ 2022ರ ಋತುವನ್ನು 2 ಅರ್ಧ ಶತಕಗಳೊಂದಿಗೆ ಪ್ರಾರಂಭಿಸಿದರು. ಆದರೆ ನಂತರದ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 9 ಪಂದ್ಯಗಳಲ್ಲಿ ಕಿಶನ್ 28.13 ಸರಾಸರಿ ಮತ್ತು 111.38ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 225 ರನ್ ಗಳಿಸಿದ್ದಾರೆ. ಸಿಕ್ಕ ಅವಕಾಶ ಬಳಸಿಕೊಳ್ಳದ ಕಿಶನ್‍ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಕೊಹ್ಲಿ ಫಾರ್ಮ್ ತುಂಬಾ ಕೆಟ್ಟದಾಗಿದೆ
ವಿರಾಟ್ ಕೊಹ್ಲಿ ಕಳೆದ 2 ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತೊರೆದರೂ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. 11 ಪಂದ್ಯ ಆಡಿರುವ ಅವರು 21.60ರ ಸರಾಸರಿಯಲ್ಲಿ ಕೇವಲ 216 ರನ್ ಗಳಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಋತುವಿನ ಮೊದಲ ಅರ್ಧಶತಕ ಗಳಿಸಿರುವ ಕೊಹ್ಲಿಗೆ ಫಾರ್ಮ್‍ಗೆ ಮರುವುದೇ ದೊಡ್ಡ ಸವಾಲಾಗಿದೆ.
ಪಂತ್‍ಗಿಂತಲೂ ಸ್ಯಾಮ್ಸನ್ ಉತ್ತಮ ಆಯ್ಕೆ
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವಿಷಯದಲ್ಲಿ ದೆಹಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ 149.04 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 234 ರನ್ ಗಳಿಸಿದ್ದಾರೆ. ಆದರೆ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 10 ಪಂದ್ಯಗಳಲ್ಲಿ 153.6ರ ಸ್ಟ್ರೈಕ್ ರೇಟ್‌ನಲ್ಲಿ 298 ರನ್ ಗಳಿಸುವ ಮೂಲಕ ಪಂತ್‍ಗಿಂತ ಹೆಚ್ಚು ರನ್ ಗಳಿಸಿದ್ದಾರೆ.
ಇದನ್ನೂ ಓದಿ: IPL 2022 : ಮುಂಬೈ-ಚೆನ್ನೈ ಈ ಕೆಟ್ಟ ಪರಸ್ಥಿತಿಗೆ ಈ 3 ಕಾರಣಗಳು : ಪ್ಲೇಆಫ್ ತಲುಪುವುದು ಅಸಾಧ್ಯ!
ಶ್ರೇಷ್ಠ ಪ್ರದರ್ಶನ ತೋರಲು ಸಾಧ್ಯವಾಗಿಲ್ಲ
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯವಾಗಲು ಇನ್ನು 24 ಪಂದ್ಯಗಳು ಬಾಕಿ ಉಳಿದಿವೆ. ಟಿ.20 ವಿಶ್ವಕಪ್ ಪ್ರಾರಂಭವಾಗುವವರೆಗೆ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸಾಕಷ್ಟು ಸಮಯ ಉಳಿದಿದೆ. ಆದರೆ, ಅಂಕಿಅಂಶಗಳ ಬಗ್ಗೆ ಮಾತನಾಡುವುದಾದರೆ ಪ್ರಸ್ತುತ ಟೂರ್ನಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ಶ್ರೇಷ್ಠ ಪ್ರದರ್ಶನವನ್ನು ತೋರಿಸಲು ಸಾಧ್ಯವಾಗಲಿಲ್ಲ. ಇದು ಆಯ್ಕೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾವ ಆಟಗಾರರಿಗೆ ಅವಕಾಶ ನೀಡಬೇಕು, ನೀಡಬಾರದು ಅನ್ನೋ ಗೊಂದಲ ಮೂಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.